Brahmastra: ಮೊದಲ ದಿನವೇ 43 ಕೋಟಿ ಕಲೆಕ್ಷನ್ ಮಾಡಿದ “ಬ್ರಹ್ಮಾಸ್ತ್ರ”…
ಬಾಲಿವುಡ್ ನ ಬಹು ನಿರೀಕ್ಷಿತ ಚಿತ್ರ ‘ಬ್ರಹ್ಮಾಸ್ತ್ರ’ ನಿನ್ನೆ ಬಿಡುಗೆಯಾಗಿದ್ದಿ ಭರ್ಝರಿ ಓಪನಿಂಗ್ ಪಡೆದುಕೊಂಡಿದೆ. ಅಯಾನ್ ಮುಖರ್ಜಿ ಈ ಚಿತ್ರ ನಿರ್ದೇಶನಕ್ಕಾಗಿ 10 ವರ್ಷಗಳನ್ನ ತೆಗೆದುಕೊಂಡಿದ್ದಾರೆ. ಸಿನಿಮಾದ ಬಜೆಟ್ ಕೂಡ ಚಿಕ್ಕದನೇನಲ್ಲ, ಸುಮಾರು 400 ಕೋಟಿ ಬಂಡವಾಳದಲ್ಲಿ ಚಿತ್ರ ನಿರ್ಮಿಸಲಾಗಿದೆ.
ಆಲಿಯಾ ಭಟ್, ರಣಬೀರ್ ಕಪೂರ್, ಅಮಿತಾಬ್ ಬಚ್ಚನ್ ತೆಲುಗು ನಟ ನಾಗರ್ಜುನ್ ಮತ್ತು ಕಿಂಗ್ ಖಾನ್ ಶಾರುಖ್ ಖಾನ್ ಗೆಸ್ಟ್ ಅಪಿಯರೆನ್ಸ್ ನಿಂದ ಚಿತ್ರ ಚಿತ್ರ ಕಂಗೊಳಿಸುತ್ತಿದೆ. ಮೊದಲ ದಿನವೇ ಬಂಪರ್ ಓಪನಿಂಗ್ ಪಡದುಕೊಂಡಿರುವ ಚಿತ್ರಕ್ಕೆ ಪ್ರಕ್ಷರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
‘ಬ್ರಹ್ಮಾಸ್ತ್ರ’ ಚಿತ್ರ ನೊಡಲು ಖುದ್ದು ಬಾಲಿವುಡ್ ಗಣ್ಯರೇ ಆಸಕ್ತಿ ತೊರಿಸುತ್ತಿದ್ದಾರೆ. ಸೈಫ್ ಅಲಿ ಖಾನ್ ಅವರು ತಮ್ಮ ಪತ್ನಿ ಕರೀನಾ ಕಪೂರ್ ಮತ್ತು ಮಗ ತೈಮೂರ್ ಅವರೊಂದಿಗೆ ಚಿತ್ರವನ್ನ ವೀಕ್ಷಿಸಿದ್ದಾರೆ. ಅಲ್ಲದೇ ಹೃತಿಕ್ ರೋಷನ್ ಕೂಡ ತಮ್ಮ ಇಬ್ಬರು ಪುತ್ರರೊಂದಿಗೆ ಚಿತ್ರವನ್ನ ವೀಕ್ಷಿಸಿದ್ದಾರೆ. ತೆರಳಿದ್ದರು.
ಇನ್ನೊಬ್ಬ ನಟ ವರುಣ್ ಧವನ್ ಕೂಡ ‘ಬ್ರಹ್ಮಾಸ್ತ್ರ’ ಚಿತ್ರವನ್ನ ಮೊದಲ ದಿನವೇ ನೋಡಿದ್ದಾರೆ. ಅರ್ಜುನ್ ಕಪೂರ್ ಕೂಡ ಥಿಯೇಟರ್ ಹೊರಗೆ ಕಾಣಿಸಿಕೊಂಡರು ಇವರಲ್ಲದೆ, ಅನ್ಶುಲಾ ಕಪೂರ್ ಮತ್ತು ಸೋನಾಲಿ ಬೇಂದ್ರೆ ಅವರ ಪತಿ ಗೋಲ್ಡಿ ಬೆಹ್ಲ್ ತಮ್ಮ ಮಗನೊಂದಿಗೆ ಚಿತ್ರವನ್ನ ವೀಕ್ಷಿಸಿದ್ದಾರೆ.
ಬಿಡುಗಡೆಯ ನಂತರವೂ ‘ಬ್ರಹ್ಮಾಸ್ತ್ರ’ ಚಿತ್ರದ ಮುಂಗಡ ಬುಕ್ಕಿಂಗ್ ಭರದಿಂದ ಸಾಗುತ್ತಿದೆ . ಮೊದಲ ದಿನದ ಆರಂಭಿಕ ಅಂಕಿಅಂಶಗಳ ಪ್ರಕಾರ, ಚಿತ್ರದ ನಿವ್ವಳ ಕಲೆಕ್ಷನ್ 36 ಕೋಟಿ ರೂ. ಮತ್ತು ಒಟ್ಟು ಕಲೆಕ್ಷನ್ 43 ಕೋಟಿ ರೂ. ಹಲವು ಭಾಷೆಗಳಲ್ಲಿ ಬಿಡುಗಡೆಯಾಗಿದ್ದ, ಹಿಂದಿಯಲ್ಲಿ 32.50 ಕೋಟಿ ರುಪಾಯಿ ಗಳಿಸಿದೆ. . ಇದಲ್ಲದೇ ತೆಲುಗು ಭಾಷೆಯಲ್ಲಿ ಚಿತ್ರ 4 ಕೋಟಿ ಬ್ಯುಸಿನೆಸ್ ಮಾಡಿದೆ.
ಮುಳುಗುತ್ತಿರುವ ಬಾಲಿವುಡ್ ಗೆ ಹೊಸ ಆಸರೆಯಾಗಿದೆ ಬ್ರಹ್ಮಾಸ್ತ್ರ…








