Virat Kohli | ರೋಹಿತ್ ಶರ್ಮಾ ದಾಖಲೆ ಬ್ರೇಕ್ ಮಾಡಿದ ಕೊಹ್ಲಿ
ಏಷ್ಯಾಕಪ್ 2022ರ ಭಾಗವಾಗಿ ಆಫ್ಘಾನ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಸೆಂಚೂರಿಯೊಂದಿಗೆ ಮಿಂಚಿದರು.
ಸುಮಾರು ಮೂರು ವರ್ಷಗಳ ನಂತರ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ತಮ್ಮ 71 ಶತಕವನ್ನು ವಿರಾಟ್ ಕೊಹ್ಲಿ ಸಿಡಿಸಿದರು.
ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ 61 ಎಸೆತಗಳನ್ನು ಎದುರಿಸಿ 12 ಬೌಂಡರಿ, ಆರು ಸಿಕ್ಸರ್ ಗಳೊಂದಿಗೆ 122 ರನ್ ಗಳನ್ನು ಗಳಿಸಿದರು.
ಇದರೊಂದಿಗೆ ವಿರಾಟ್ ಒಂದು ಅಪರೂಪದ ದಾಖಲೆಯನ್ನು ತಮ್ಮದಾಗಿಸಿಕೊಂಡರು.

ಅಂತರಾಷ್ಟ್ರೀಯ ಟಿ 20 ಕ್ರಿಕೆಟ್ ನಲ್ಲಿ ಅತ್ಯಧಿಕ ವೈಯುಕ್ತಿಕ ಸ್ಕೋರ್ ದಾಖಲಿಸಿದ ಬ್ಯಾಟರ್ ಎಂಬ ದಾಖಲೆ ಬರೆದಿದ್ದಾರೆ.
ಈ ಹಿಂದೆ ಈ ದಾಖಲೆಯನ್ನ ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ( 118 ರನ್ ) ಹೆಸರಿನಲ್ಲಿತ್ತು. ಈ ದಾಖಲೆಯನ್ನು ವಿರಾಟ್ ಕೊಹ್ಲಿ ಮುರಿದಿದ್ದಾರೆ.
ಅದೇ ರೀತಿ ಮತ್ತೊಂದು ದಾಖಲೆಯನ್ನು ವಿರಾಟ್ ಬರೆದುಕೊಂಡಿದ್ದು, ಟಿ 20 ಕ್ರಿಕೆಟ್ ನಲ್ಲಿ ಅಫ್ಘಾನ್ ವಿರುದ್ಧ ಅತ್ಯಧಿಕ ವೈಯಕ್ತಿಕ ಸ್ಕೋರ್ ದಾಖಲಿಸಿದ ಮೊದಲ ಆಟಗಾರರಾಗಿದ್ದಾರೆ.








