ಹುಡುಗರ ಲೈಂಗಿಕ ಸಾಮರ್ಥ್ಯದ ಬಗ್ಗೆ ಶಾಕಿಂಗ್ ಕಮೆಂಟ್ ಮಾಡಿದ ನಟಿ ರೆಜಿನಾ..
ಕನ್ನಡದಲ್ಲಿ ಆ ದಿನಗಳು ಚಿತ್ರದಲ್ಲಿ ನಟಿಸಿದ್ದ ರೆಜಿನಾ ಕಸೇಂದ್ರ ಹುಡುಗರ ಕುರಿತು ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಹುಡುಗರ ಲೈಂಗಿಕ ಸಾಮರ್ಥ್ಯ ಕೇವಲ ಎರಡು ನಿಮಿಷದಲ್ಲಿ ಮುಗಿದು ಹೋಗುವ ಮ್ಯಾಗಿಗೆ ಹೋಲಿಸಿದ್ದಾರೆ ನಟಿ.
ಸದ್ಯ ರೆಜಿನಾ ಶಾಕಿನಿ ಡಾಕಿನಿ ಎಂಬ ತೆಲುಗು ಸಿನಿಮಾದಲ್ಲಿ ನಟಿಸಿದ್ದಾರೆ. ಇವರ ಜೊತೆ ಸಹ ನಟಿಯಾಗಿ ನಿವೇತಾ ಥಾಮಸ್ ನಟಿಸಿದ್ದು ಭರ್ಜಿರಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಸಂದರ್ಶನದ ವೇಳೆ ಮಾತನಾಡಿದ ನಟಿ ರೆಜಿನಾ ಹುಡುಗರ ಲೈಂಗಿಕ ಸಾಮರ್ಥ್ಯವನ್ನು ಅಳೆದಿದ್ದಾರೆ.
ಸಂದರ್ಶನದಲ್ಲಿ ನಿರೂಪಕರು ಒಂದು ಜೋಕ ಹೇಳುತ್ತಾ ಮ್ಯಾಗಿ ಎರಡೇ ನಿಮಿಷದಲ್ಲಿ ಮುಗಿಯುತ್ತದೆ ಆದರೆ ಹಡುಗಿಯರ ಮೇಕಪ್ ಮುಗಿಯುವುದಿಲ್ಲ ಎಂದು ಜೋಕ್ ಹೇಳುತ್ತಾರೆ. ಈ ಬಗ್ಗೆ ನನಗೂ ಒಂದು ಜೋಕ್ ಗೊತ್ತು ಎಂದು ಹೇಳುವ ರೆಜಿನಾ “ ಮ್ಯಾಗಿ ಎರಡೇ ನಿಮಿಷದಲ್ಲಿ ಮುಗಿಯುತ್ತೆ ಹುಡುಗರದ್ದೂ ಕೂಡ ಎಂದು ಹೇಳಿದ್ದಾರೆ.
ಆಂಕರ್ ಗೆ ಮೋದಲು ಈ ಜೋಕ್ ಅರ್ಥವಾಗಲಿಲ್ಲವಾದಗ ನಿಮಗೆ ಜೋಕ ಅರ್ಥವಾಗಲಿಲ್ಲವಾ ಎಂದು ಕೇಳುತ್ತಾರೆ.. ನಂತರ ಅರ್ಥಮಾಡಿಕೊಂಡ ಆಂಕರ್ ಈ ವಿಷಯವೇ ಬೇಡ ಅಂಥ ಟಾಪಿಕ್ ಚೇಂಜ್ ಮಾಡ್ತಾರೆ. ರೆಜಿನಾ ಈ ಹೇಳಿಕೆಯಿಂದ ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ.
ಆಚಾರ್ಯ’ ಚಿತ್ರದಲ್ಲಿ ಚಿರಂಜೀವಿ ಎದುರು ನಟಿಸಿದ್ದ ರೆಜಿನಾಸ ಸದ್ಯ ‘ಶಾಕಿನಿ ಡಾಕಿನಿ’ ಚಿತ್ರದ ಮೂಲಕ ಮನರಂಜನೆಗೆ ಸಜ್ಜಾಗುತ್ತಿದ್ದಾರೆ. ಒಟ್ಟಿನಲ್ಲಿ ತಮಿಳು ಮತ್ತು ತೆಲುಗು ಭಾಷೆಯ ಮೂರು ಚಿತ್ರಗಳಲ್ಲಿ ಚೆನ್ನೈ ಚೆಲುವೆ ಬ್ಯುಸಿಯಾಗಿದ್ದಾರೆ.








