ಸಿಧು ಮೂಸೆವಾಲಾ ಹತ್ಯೆ ಪ್ರಕರಣ – ಶೂಟರ್ ದೀಪಕ್ ನನ್ನ ಬಂಧಿಸಿದ ಪಂಜಾಬ್ ಪೊಲೀಸರು..
ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣದಲ್ಲಿ ಪಂಜಾಬ್ ಪೊಲೀಸರು ಪ್ರಮುಖ ಆರೋಪಿಗಳನ್ನ ಬಂಧಿಸಿದ್ದಾರೆ. ಮೂಸೆವಾಲ ಹತ್ಯೆ ಬಳಿಕ ತಲೆಮರೆಸಿಕೊಂಡಿದ್ದ ಶೂಟರ್ ದೀಪಕ್ ಹಾಗೂ ಆತನ ಇಬ್ಬರು ಸಹಾಯಕರನ್ನು ಬಂಧಿಸಲಾಗಿದೆ.
ಮೇ 29 ರಂದು ಪಂಜಾಬಿ ಗಾಯಕ ಮುಸೇವಾಲಾ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ತಲೆಮರೆಸಿಕೊಂಡಿದ್ದ ಪ್ರಮುಖ ಶೂಟರ್ ದೀಪಕ್ ಮತ್ತು ಆತನ ಸಹಾಯಕರಾದ ಪಂಡಿತ್ ಮತ್ತು ರಾಜೇಂದರ್ ಅವರನ್ನು ಶನಿವಾರ ಪಶ್ಚಿಮ ಬಂಗಾಳ-ನೇಪಾಳ ಗಡಿಯಲ್ಲಿ ಬಂಧಿಸಲಾಯಿತು. ಕೇಂದ್ರ ಏಜೆನ್ಸಿಗಳು ಮತ್ತು ದೆಹಲಿ ಪೊಲೀಸರೊಂದಿಗೆ ಪಂಜಾಬ್ ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ ಅವರನ್ನು ಬಂಧಿಸಿದ್ದಾರೆ.
ಸಿಕ್ಕಿಬಿದ್ದವರಲ್ಲಿ ದೀಪಕ್ ಶೂಟರ್ ಎಂದು ಪೊಲೀಸರು ಹೇಳಿದ್ದಾರೆ, ಆದರೆ ಪಂಡಿತ್ ಮತ್ತು ರಾಜೇಂದರ್ ಅವರು ಶಸ್ತ್ರಾಸ್ತ್ರಗಳನ್ನ ಮತ್ತು ಅಡಗಿಕೊಳ್ಳಲು ವ್ಯವಸ್ಥೆಗಳನ್ನ ಮಾಡಿಕೊಡುತ್ತಿದ್ದರು. ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಮೂರು ತಿಂಗಳ ಹಿಂದೆ ಸಿದ್ದು ಮೂಸೆವಾಲಾ ಹತ್ಯೆಯ ಮಾಸ್ಟರ್ ಮೈಂಡ್ ಎಂದು ಒಪ್ಪಿಕೊಂಡಿದ್ದರು. ಕಳೆದ ವರ್ಷ ಆಗಸ್ಟ್‌ನಿಂದಲೇ ಆತನನ್ನು ಕೊಲ್ಲಲು ಯೋಜನೆ ರೂಪಿಸಿದ್ದ. ಪಂಜಾಬ್ ಸರ್ಕಾರ ಈ ಪ್ರಕರಣವನ್ನು ಪ್ರಶ್ನಿಸಿ ಅನೇಕ ಜನರನ್ನು ಬಂಧಿಸಿತು.








