Andra Pradesh: ಮದ್ಯದ ಬಾಟಲಿಯಲ್ಲಿ ಹಾವಿನ ಮರಿ ಪತ್ತೆ…
ಮದ್ಯದ ಬಾಟಲಿಯಲ್ಲಿ ಹಾವಿನ ಮರಿ ಪತ್ತೆಯಾಗಿ ಸಂಚಲನ ಮೂಡಿಸಿರುವ ಘಟನೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಪೊನ್ನೂರಿನಲ್ಲಿ ನಡೆದಿದೆ.
ಕಳೆದ ರಾತ್ರಿ ಕೆಲ ಯುವಕರು ಪೊನ್ನೂರಿನ ಬಾಪಟ್ಲ ಬಸ್ ನಿಲ್ದಾಣದ ಬಳಿ ಇರುವ ಸರಕಾರಿ ಮದ್ಯದಂಗಡಿಯಿಂದ ಮದ್ಯದ ಬಾಟಲಿ ಖರೀದಿಸಿ ತೆಗೆದುಕೊಂಡು ಹೋಗಿದ್ದಾರೆ.
ಮದ್ಯ ಸೇವಿಸಲು ಮುಂದಾದಾಗ ಬಾಟಲಿಯಲ್ಲಿ ಹಾವಿನ ಮರಿ ಇರುವುದು ಪತ್ತೆಯಾಗಿದೆ. ಕೂಡಲೇ ಮದ್ಯದಂಗಡಿಗೆ ಹೋಗಿ ಯುವಕರು ವಿಚಾರಿಸಿದ್ದಾರೆ. ಮೊದಲಿಗೆ ಅಂಗಡಿ ಸಿಬ್ಬಂದಿ ನಿರಾಕರಿಸಿದರಾದರೂ, ಕೊನೆಗೆ ಅಂಗಡಿ ಮಾಲೀಕರು ರಾಜಿ ಮಾಡಿ ಹೊಸ ಮದ್ಯದ ಬಾಟಲಿ ಕೊಟ್ಟಿದ್ದಾರೆ.
ಯುವಕರು ಅಂಗಡಿ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
Viral News: Snake found in liquor bottle in Guntur District Andra pradesha








