US Open 2022: ಮೊದಲ ಗ್ರ್ಯಾಂಡ್ ಸ್ಲಾಮ್ ಕಿರೀಟ ಗೆದ್ದ ಅತ್ಯಂತ ಕಿರಿಯ ಆಟಗಾರ
ಸ್ಪೇನ್‌ನ ಹದಿಹರೆಯದ ಹುಡುಗ ಕಾರ್ಲೋಸ್ ಅಲ್ಕರಾಜ್ ಯುಎಸ್ ಓಪನ್‌ನಲ್ಲಿ ಚೊಚ್ಚಲ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಯುಎಸ್ ಓಪನ್ 2022 ರಲ್ಲಿ ಪುರುಷರ ಟೆನಿಸ್ ವಿಭಾಗದಲ್ಲಿ ಕಾರ್ಲೋಸ್ ಅಲ್ಕರಾಜ್ ಅವರು ಮೊದಲ ಗ್ರ್ಯಾಂಡ್ ಸ್ಲಾಮ್ ಕಿರೀಟವನ್ನು ಗೆದ್ದಿದ್ದಾರೆ.
19 ವರ್ಷದ ಕಾರ್ಲೋಸ್ ಅಲ್ಕರಾಜ್ ನ್ಯೂಯಾರ್ಕ್‌ನಲ್ಲಿ ನಡೆದ ಫೈನಲ್‌ನಲ್ಲಿ ಕ್ಯಾಸ್ಪರ್ ರೂಡ್ ಅವರನ್ನು 4 ಸೆಟ್‌ಗಳಲ್ಲಿ ಸೋಲಿಸಿ ರ್ಯಾಂಕಿಂಗ್ ಇತಿಹಾಸದಲ್ಲಿ ನಂಬರ್ 1 ಸ್ಥಾನ ಪಡೆದ ಮೊದಲ ಹದಿಹರೆಯದವರಾಗಿದ್ದಾರೆ.
ಯುಎಸ್ ಓಪನ್ ಗೆಲುವಿನೊಂದಿಗೆ, ಕಾರ್ಲೋಸ್ ಅಲ್ಕರಾಜ್, 2005 ರಲ್ಲಿ ರಾಫೆಲ್ ನಡಾಲ್ ನಂತರ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಯನ್ನು ಗೆದ್ದ ಅತ್ಯಂತ ಕಿರಿಯ ಆಟಗಾರ ಎನಿಸಿದ್ದಾರೆ. ಅಲ್ಕಾರಾಜ್ ಮೊದಲು, ಲೆಯ್ಟನ್ ಹೆವಿಟ್ 2001 ರಲ್ಲಿ 20 ವರ್ಷ ವಯಸ್ಸಿನಲ್ಲಿ ವಿಶ್ವದ ಅತ್ಯಂತ ಕಿರಿಯ ನಂ. 1 ಸ್ಥಾನಕ್ಕೇರಿದ್ದರು.