ಹಾವು ಹಿಡಿಯಲು ಹೋಗಿ 4 ಭಾರಿ ಕಚ್ಚಿಸಿಕೊಂಡರೂ ಬದುಕುಳಿದ ಭೂಪ
ಕುಡಿದ ಅಮಲಿನಲ್ಲಿ ಹಾವು ಹಿಡಿದ ವ್ಯಕ್ತಿಗೆ 4 ಭಾರಿ ಹಾವು ಕಚ್ಚಿದರೂ ಬದುಕುಳಿದ ಘಟನೆ ಬೆಳಗಾವಿ ಜಿಲ್ಲೆ ರಾಯಭಾಗ ತಾಲೂಕಿನ ಫಾಲಭಾವಿಯಲ್ಲಿ ನಡೆದಿದೆ.
ಫಾಲಭಾವಿ ಗ್ರಾಮದ ಅಂಗನವಾಡಿ ಆವರಣಕ್ಕೆ ಬಂದಿದ್ದ ಹಾವನ್ನ ರಮೇಶ್ ಬಾಗಡೆ ಎಂಬುವವರು ಯಾವುದೇ ಮುನ್ನೆಚ್ಚರಿಕೆ ಇಲ್ಲದೆ ಹಿಡಿದಿದ್ದರು. ಈ ವೇಳೆ ಆ ವ್ಯಕ್ತಿ ಕುಡಿದ ಅಮಲಿನಲ್ಲಿದ್ದರು. ಈ ವೇಳೆ ಕಾಲು, ಮುಖ, ಕತ್ತಿಗೆಗೆ ಹಾವು ಕಚ್ಚಿದ್ರೂ ಕೂಡ ವ್ಯಕ್ತಿ ಬದುಕುಳಿದಿದ್ದಾರೆ. ಇಷ್ಟಾದರೂ ಬಿಡದೆ ಹಾವು ಹಿಡಿದು ಕಾಡಿಗೆ ಬಿಟ್ಟಿದ್ದಾರೆ ರಮೇಶ್ ಬಾಗಡೆ.
ಈ ಬಗ್ಗೆ ಮಾತನಾಡಿದ ರಮೇಶ್ “ಕಳೆದ 20 ವರ್ಷಗಳಿಂದ ಹಾವುಗಳನ್ನು ಹಿಡಿಯುತ್ತಿದ್ದೇನೆ. ಹಾವು ಕಚ್ಚಿದಾಗ ಬೆಳ್ಳುಳಿ ಹಾಗೂ ಒಂದು ಲೀಟರ್ ನೀರನ್ನು ಸೇವಿಸುತ್ತೇನೆ. ಇದರಿಂದ ನನಗೆ ಹಾವು ಕಚ್ಚಿದರೂ ಏನು ಆಗುವುದಿಲ್ಲ” ಎಂದು ತಿಳಿಸಿದ್ದಾರೆ.
ಕೆಲವರು ಈತನ ನಡೆಗೆ ಅಚ್ಚರಿ ವ್ಯಕ್ತಪಡಿಸಿದರೆ ಇನ್ನೂ ಕೆಲವರು ತರಾಟೆಗೆ ತೆಗೆದುಕೊಂಡಿದ್ದಾರೆ.