Mark Boucher | ಮುಂಬೈ ಇಂಡಿಯನ್ಸ್ ಹೆಡ್ ಕೋಚ್ ಮಾರ್ಕ್ ಬೌಚರ್
ಐಪಿಎಲ್ ನಲ್ಲಿ ಅತ್ಯಂತ ಯಶಸ್ವಿ ತಂಡ ಮುಂಬೈ ಇಂಡಿಯನ್ಸ್ ತಂಡ ತಮ್ಮ ಹೊಸ ಕೋಚ್ ಅನ್ನು ನೇಮಕ ಮಾಡಿದೆ. ಐಪಿಎಲ್ ನಲ್ಲಿ ನಲ್ಲಿ ಮುಂಬೈ ಇಂಡಿಯನ್ಸ್ ತಂಡ ಐದು ಬಾರಿ ಚಾಂಪಿಯನ್ ಆಗಿದೆ.
ಎಲ್ಲರೂ ಊಹಿಸಿದಂತೆ ದಕ್ಷಿಣ ಆಫ್ರಿಕಾದ ಮಾಜಿ ವಿಕೆಟ್ ಕೀಪರ್ ಮಾರ್ಕ್ ಬೌಚರ್ ಅವರನ್ನು ತಂಡದ ಹೆಡ್ ಕೋಚ್ ಆಗಿ ನೇಮಕ ಮಾಡಿದೆ.
ಈ ಮಾಹಿತಿಯನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಟ್ವಿಟ್ಟರ್ ನಲ್ಲಿ ಮಾಹಿತಿ ನೀಡಿದೆ.
ನಮ್ಮ ಹೊಸ ಹೆಚ್ ಕೋಚ್ ಅವರನ್ನು ಪರಿಚಯ ಮಾಡುತ್ತಿದ್ದೇವೆ. ಪಲ್ಟನ್ಸ್.. ನಮ್ಮ ಒನ್ ಫ್ಯಾಮಿಲಿಗೆ ಲೆಜೆಂಡ್ ಅವರನ್ನು ಸ್ವಾಗತಿಸಿ ಎಂದು ಟ್ವೀಟ್ ಮಾಡಿದೆ.
ಮಾರ್ಕ್ ಬೌಚರ್ ನೇಮಕದ ಬಗ್ಗೆ ರಿಲಯನ್ಸ್ ಜಿಯೋ ಇನ್ಫಾಕಾಮ್ ಚೇರ್ಮನ್ ಅಕಾಶ್ ಅಂಬಾನಿ ಸ್ಪಂದಿಸಿದ್ದು, ಮುಂಬೈ ಇಂಡಿಯನ್ಸ್ ಗೆ ಮಾರ್ಕ್ ಬೌಚರ್ ಅವರನ್ನು ಸ್ವಾಗತಿಸುತ್ತಿರುವುದಕ್ಕೆ ಸಂತೋಷಿಸುತ್ತಿದ್ದೇನೆ.
ಫೀಲ್ಡ್ ನಲ್ಲಿ ಪ್ಲೇಯರ್ ಆಗಿ.. ಹೊರಗೆ ಕೋಚ್ ಆಗಿ ಎಷ್ಟೋ ನೈಪುಣ್ಯತೆ ಸಾಧಿಸಿರುವ ಮಾರ್ಕ್ ಅವರು ನಮ್ಮ ತಂಡದ ಭಾಗವಾಗಿದ್ದು, ತಂಡಕ್ಕೆ ಆನೆ ಬಲ ತಂದಿದೆ ಎಂದಿದ್ದಾರೆ.
ದಕ್ಷಿಣ ಆಫ್ರಿಕಾ ಪರ 15 ವರ್ಷಗಳ ಕಾಲ ಕ್ರಿಕೆಟ್ ಆಡಿದ ಮಾರ್ಕ್ ಬೌಚರ್ ಅತ್ಯುತ್ತಮ ವಿಕೆಟ್ ಆಗಿದ್ದು, 147 ಟೆಸ್ಟ್, 295 ಏಕದಿನ ಕ್ರಿಕೆಟ್ ಪಂದ್ಯಗಳನ್ನಾಡಿದ್ದಾರೆ.
ಐದು ಟೆಸ್ಟ್ ಸೆಂಚೂರಿ, ಒಂದು ಏಕದಿನ ಸೆಂಚೂರಿ ಇದೆ. ವಿಕೆಟ್ ಕೀಪರ್ ಆಗಿ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ 999 ಸ್ಟಂಪಿಂಗ್ಸ್, 952 ಕ್ಯಾಚ್ ಗಳೊಂದಿಗೆ ದಾಖಲೆ ಸೃಷ್ಟಿಸಿದ್ದಾರೆ.