ADVERTISEMENT
Thursday, August 13, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Marjala Manthana

ಪರಿಸರ & ಜೀವ ವ್ಯವಸ್ಥೆಯ ಸರಪಳಿಗೆ ಜೇನುನೊಣಗಳು ಪರಾಗಸ್ಪರ್ಷಿ ದುಂಬಿಗಳೆಂಬ ಅನಿವಾರ್ಯ

admin by admin
June 5, 2020
in Marjala Manthana, Newsbeat, ಮಾರ್ಜಲ ಮಂಥನ
Share on FacebookShare on TwitterShare on WhatsappShare on Telegram

ಪರಿಸರ & ಜೀವ ವ್ಯವಸ್ಥೆಯ ಸರಪಳಿಗೆ ಜೇನುನೊಣಗಳು ಪರಾಗಸ್ಪರ್ಷಿ ದುಂಬಿಗಳೆಂಬ ಅನಿವಾರ್ಯ; ಜೈವಿಕ ವ್ಯವಸ್ಥೆಯನ್ನು ಅಸಮತೋಲನಗೊಳಿಸುವ ಮನುಷ್ಯನೂ ಮತ್ತು ಲಾಕ್ ಡೌನ್ ಕಾಲದ ಪರಿಸರದ ಲವಲವಿಕೆಯೂ:

ಇಂದು ವಿಶ್ವ ಪರಿಸರ ದಿನಾಚರಣೆ. ಪರಿಸರ ಅಂದರೆ ನಮ್ಮ ಸುತ್ತಮುತ್ತಲಿನ ವಾತಾವರಣ ಮಾತ್ರವಲ್ಲ. ಕಾಣಿಸುವ ಕಾಣಿಸದ ಗೋಚರ ಅಗೋಚರ ಜೀವವ್ಯವಸ್ಥೆಯ ಒಟ್ಟಾರೆ ಸಾರಾಂಶ. ಈ ಜೈವಿಕ ಸೈಕಲ್ಲಿನಲ್ಲಿ ಪ್ರತಿಯೊಂದು ಜೀವಿಗಳಿಗೂ ಬಾದ್ಯತೆಯಿದೆ ಹೊಣೆಯಿದೆ ಕರ್ತವ್ಯಗಳಿವೆ. ಆದರೆ ಮನುಷ್ಯ ಈ ವ್ಯವಸ್ಥೆಯಿಂದ ಹೊರಗಿದ್ದಾನೆ. ಅವನಿಗೆ ಯಾವ ಜವಾಬ್ದಾರಿಯೂ ಇಲ್ಲದ ಉಡಾಳತನ ಮಾತ್ರ ದಂಡಿಯಾಗಿದೆ. ಈ ಅವಿವೇಕಿ ಮನುಷ್ಯ ಯಾವ ಕರ್ತವ್ಯ ನಿಬಾಯಿಸುವುದೂ ಬೇಡ. ಪ್ರಕೃತಿಯ ಉಳಿದ ವ್ಯವಸ್ಥೆ ತನ್ನ ಪಾಡಿಗೆ ತಾನು ನಡೆಯುತ್ತದೆ. ಆದ್ರೆ ತಿಕ್ಕಲು ಮನುಷ್ಯನ ಸ್ವಾರ್ಥ ಪ್ರವೃತ್ತಿ ಇಡೀ ವ್ಯವಸ್ಥೆಯ ಸಮತೋಲನ ತಪ್ಪಿಸುತ್ತದೆ. ಅದಕ್ಕೊಂದು ಸಣ್ಣ ಉದಾಹರಣೆ ಸಸ್ಯಗಳ ಫಲವೃದ್ಧಿಗೆ ಪಾಲಿನೇಶನ್ ಮುಖಾಂತರ ಸಹಕರಿಸುವ ಜೇನುನೊಣ, ದುಂಭಿ ಮತ್ತು ಈ ಜಾತಿಯ ನೊಣಗಳು. ಸಸ್ಯ ಜಗತ್ತಿಗೆ ಇವು ಎಷ್ಟು ಅನಿವಾರ್ಯವೆಂದರೆ ಮನುಷ್ಯ ಇಲ್ಲದಿದ್ದರೂ ಪ್ರಕೃತಿಗೆ ಏನೂ ವ್ಯತ್ಯಾಸವಾಗುವುದಿಲ್ಲ ಆದರೆ ಈ ಭ್ರಮರಗಳಿಲ್ಲದೇ ಹೋದರೆ ಪ್ರಕೃತಿ ಕೃಶವಾಗುತ್ತದೆ.

Related posts

reliance-digital-india-sale-disco-offers-august-2026

ರಿಲಯನ್ಸ್ ಡಿಜಿಟಲ್ ತಂದಿದೆ ‘ಡಿಜಿಟಲ್ ಇಂಡಿಯಾ ಸೇಲ್ ಕ್ರೇಜಿ ಆಫರ್ಸ್

August 13, 2026
upendra-next-level-movie-launch-aradhana-ram-pair

ʻರಿಯಲ್ ಸ್ಟಾರ್ʼ ಉಪೇಂದ್ರ ಅಭಿನಯದ ಕನ್ನಡ – ತೆಲುಗಿನಲ್ಲಿ ನಿರ್ಮಾಣವಾಗುತ್ತಿರುವ ಬಿಗ್‌ ಬಜೆಟ್‌ ‘ನೆಕ್ಟ್ಸ್ ಲೆವೆಲ್’ ಚಿತ್ರಕ್ಕೆ ಅದ್ಧೂರಿ ಚಾಲನೆ: ಉಪ್ಪಿಗೆ ‘ಕಾಟೇರ’ ನಟಿ ಆರಾಧನಾ ರಾಮ್ ಜೋಡಿ!

August 13, 2026

ಜಗತ್ತಿನಾದ್ಯಂತ ಹಲವು ದೇಶಗಳು ಲಾಕ್ ಡೌನ್ ಜಾರಿ ಮಾಡಿದ್ದರಿಂದ ಪರಿಸರ ಮತ್ತು ಜೀವಸಂಕುಲದ ಮೇಲೆ ಅಗಾಧವಾದ ಸಕಾರಾತ್ಮಕ ಪರಿಣಾಮವೇರ್ಪಡುತ್ತಿದೆ. ಮಾನವಿನಿಂದ ಹಾನಿಗೊಳಗಾಗುತ್ತಿರುವ ಸೃಷ್ಟಿಯ ಜೀವ ಸಮೂಹದಲ್ಲಿ ಕಾಡು ಜೇನು ನೊಣಗಳು ಒಂದು; ಇವು ಈಗ ಲಾಕ್ ಡೌನ್ ನಿಂದ ಲಾಭ ಪಡೆದುಕೊಳ್ಳುತ್ತಿವೆ ಎಂದು ಕೀಟಶಾಸ್ತ್ರಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಪ್ರತೀ ಸಂವತ್ಸರಗಳಿಗಿಂತ ಈ ಸಂವತ್ಸರ ಭಿನ್ನವಾಗಿದೆ. ಈ ಬಾರಿಯ ವಸಂತ ಕಾಲದಲ್ಲಿ ಮನುಷ್ಯ ಮನೆಯ ಗೋಡೆಯೊಳಗೆ ಬಂಧಿಯಾಗಿದ್ದಾನೆ. ಮಾನವನ ಹಸ್ತಕ್ಷೇಪ, ಸಂಚಾರ ದಟ್ಟಣೆ, ಗ್ಲೋಬಲ್ ವಾರ್ಮಿಂಗ್, ವಾತಾವರಣ ಮಾಲಿನ್ಯದಂತಹ ತೊಂದರೆ ತಾಪತ್ರಯಗಳಿಲ್ಲದೇ ಕಾಡು ನಿರ್ಮಲವಾಗಿ ನೆಮ್ಮದಿಯಾಗಿದೆ. ಇಸ್ರೇಲ್ ನ ಹೈಫಾ ನಗರದಲ್ಲಿ ಕಾಡುಹಂದಿಗಳು ನಿರ್ಭೀತವಾಗಿ ಸಂಚರಿಸಿದ್ದು, ಟರ್ಕಿಯ ಸದಾ ಹಡಗುಗಳ ಸಂಚಾರ ದಟ್ಟಣೆಯಿಂದ ಗಿಜಿಗುಡುತ್ತಿದ್ದ ಬೋಸ್ಫೋರಸ್ ಕಿರಿಯ ಕಡಲ್ಗಾಲುವೆ ಮಾರ್ಗದಲ್ಲಿ ಡಾಲ್ಫಿನ್ ಗಳು ಸ್ವಚ್ಛಂದವಾಗಿ ಈಜಾಡುತ್ತಿದ್ದ ಸಂಗತಿಗಳು ಈಗಾಗಲೇ ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ. ಲಾಕ್ ಡೌನ್ ಜೀವಜಗತ್ತಿನ ಕಟ್ಟ ಕಡೆಯ ಪ್ರಾಣಿಗೂ ತೀವ್ರತಮ ಅನುಕೂಲ ಕಲ್ಪಿಸಿದೆ ಎಂದರೆ ಸುಳ್ಳಲ್ಲ. ಅದೇ ರೀತಿ ಮನುಷ್ಯನ ಸ್ವಾರ್ಥ ಮತ್ತು ದುಷ್ಕೃತ್ಯದಿಂದ ಸ್ವಾಭಾವಿಕ ಜೈವಿಕ ನೆಲೆ ನಾಶ, ಪರಿಸರ ಮಾಲಿನ್ಯ ಮತ್ತು ರಾಸಾಯನಿಕ ಕೀಟನಾಶಗಳಿಂದ ಕ್ರಮೇಣ ಅಪಾಯಕಾರಿ ಮಟ್ಟದಲ್ಲಿ ತನ್ನ ಸಂತತಿ ಕಳೆದುಕೊಳ್ಳುತ್ತಿದ್ದ ಕಾಡು ಜೇನು ನೊಣಗಳೀಗ ನಿಧಾನವಾಗಿ ತನ್ಮ ಸಂತಾನಾಭಿವೃದ್ದಿಯಲ್ಲಿ ತೊಡಗಿವೆ. ಜೊತೆಗೆ ಹೂಪುಷ್ಪಗಳ ಪರಾಗಸ್ಪರ್ಷ ನಡೆಸಿ ವಂಶಾಭಿವೃದ್ಧಿಗೆ ನೆರವಾಗುವ ದುಂಬಿ ಜಾತಿಯ ಕೀಟಗಳು ನೆಮ್ಮದಿಯಿಂದ ಚಟುವಟಿಕೆಯಿಂದ ಕೆಲಸ ಮಾಡುತ್ತಿವೆ.

ಜೇನುನೊಣಗಳು ನಮ್ಮ ಜೈವಿಕ ವ್ಯವಸ್ಥೆಯಲ್ಲಿ ಮಹತ್ವದ ಪಾತ್ರ ವಹಿಸುವ ಜೀವಿಗಳು. ನಮ್ಮಿಡೀ ಜೀವವ್ಯವಸ್ಥೆಯ ಸರಪಳಿಯಲ್ಲಿ ಜೇನುನೋಣಗಳು ಸಮೃದ್ಧ ಕೊಡುಗೆ ಕೊಟ್ಟಿವೆ. ನಾವು ತಿನ್ನುವ ಪ್ರತೀ ಸಸ್ಯಜನ್ಯ ಆಹಾರ ಜೇನು ನೊಣಗಳ ಅಪ್ರತ್ಯಕ್ಷ ಕೊಡುಗೆ. ಇವುಗಳ ವಂಶಾಭಿವೃದ್ಧಿ ಕುಂಟಿತವಾಗುವುದೆಂದರೆ ನಮ್ಮ ಕೃಷಿ ವ್ಯವಸ್ಥೆಯ ಬೆನ್ನು ಮೂಳೆ ಮುರಿದಂತೆ ಎನ್ನುತ್ತಾರೆ ಬುಂಬ್ಲೀ ಬೀ ಕನ್ಸರ್ವೇಶನ್ ಟ್ರಸ್ಟ್ ನ ಮುಖ್ಯ ವ್ಯವಸ್ಥಾಪಕ ಗಿಲ್ ಪಾರ್ಕಿನ್ಸ್.

ಜೇನು ನೊಣಗಳು, ದುಂಬಿಗಳು ಇಲ್ಲದ ಜೀವ ಪ್ರಪಂಚವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಇವು ಪ್ರಪಂಚದ ಅತ್ಯುತ್ತಮ ಪರಾಗಸ್ಪರ್ಷಿಗಳು. ನಾವು ತಿನ್ನುವ ಶೇ.80 ರಷ್ಟು ಹೂಬಿಡುವ ಸಸ್ಯ ಸಂಕುಲಗಳ ಫಲಾಭಿವೃದ್ಧಿಗೆ ಕಾರಣ ಇವೇ ಕೀಟಗಳು. ಜೇನುನೊಣಗಳು ಮತ್ತು ಉಳಿದ ಎಲ್ಲಾ ಪರಾಗಸ್ಪರ್ಷಿ ಕೀಟಗಳು ಜಗತ್ತಿನ ಆರ್ಥಿಕತೆ ನೀಡುವ ಕಾಣಿಕೆ ಎಷ್ಟು ಗೊತ್ತಾ? ಬರೋಬ್ಬರಿ 150 ಬಿಲಿಯನ್ ಅಮೇರಿಕನ್ ಡಾಲರ್. ಲಂಡನ್ ನ ವಿಶ್ವವಿದ್ಯಾನಿಲಯವೊಂದರ ಅಧ್ಯಯನದ ಪ್ರಕಾರ ಯುನೈಟೆಡ್ ಕಿಂಗ್ ಡಂನ ವಾರ್ಷಿಕ ಆರ್ಥಿಕತೆಗೆ ಈ ಕೀಟಗಳ ಕೊಡುಗೆ 850 ಮಿಲಿಯನ್ ಡಾಲರ್.

ಗ್ಲೋಬಲ್ ಶಟ್ ಡೌನ್ ಕಾರಣದಿಂದ ಪರಿಸರದ ಮೇಲಾಗಿರುವ ಮಹತ್ತರ ಬದಲಾವಣೆ ಎಂದರೆ ವಾಯುಮಾಲಿನ್ಯ ನಿಯಂತ್ರಣ. ಕಡಿಮೆ ವಾಯುಮಾಲಿನ್ಯದ ವಾತಾವರಣದಲ್ಲಿ ಜೇನುನೊಣಗಳ ಶಾಪಿಂಗ್ ಟ್ರಿಪ್ ಹೆಚ್ಚಾಗಿದೆ ಮತ್ತು ಯುವ ನೊಣಗಳು ಹೆಚ್ಚು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿವೆ ಎನ್ನುತ್ತಾರೆ ಲಂಡನ್ ವಿಶ್ವವಿದ್ಯಾನಿಲಯದ ಪರಿಸರಶಾಸ್ತ್ರದ ಪ್ರೊಫೆಸರ್, ಕೀಟಶಾಸ್ತ್ರಜ್ಞ ಮಾರ್ಕ್ ಬ್ರೌನ್. ವಾಹನಗಳಿಂದ ಹೊರಸೂಸುವ ಹೊಗೆ ಪುಷ್ಪಗಳ ಸುವಾಸನೆಯನ್ನು ಮುಚ್ಚಿಹಾಕತ್ತವೆ. ಇದರಿಂದ ಅಪಾರ ಪ್ರಮಾಣದ ಸಸ್ಯ ಸಂಕುಲದ ಹೂಗಳ ಪರಾಗಸ್ಪರ್ಷವೇ ಆಗುವುದಿಲ್ಲ. ಇದು ಸಸ್ಯಗಳಿಗೂ ಮಾರಕ ಮತ್ತು ಜೇನುನೊಣಗಳ ಕಾರ್ಯಕ್ಷಮತೆಯನ್ನೂ ಕುಗ್ಗಿಸುತ್ತೆ. ವಾಯುಮಾಲಿನ್ಯದ ದುಷ್ಪರಿಣಾಮದಿಂದ ಜೇನು ಮತ್ತು ಸಸ್ಯ ವಂಶಾಭಿವೃದ್ಧಿ ಎರಡಕ್ಕೂ ಅಪಾಯ ಎಂದು 2016ರಲ್ಲೇ ಅಧ್ಯಯನ ವರದಿಗಳು ಪ್ರಕಟವಾಗಿದ್ದವು. ಹೀಗಾದಾಗ ಜೇನುನೊಣಗಳಿಗೆ ಆಹಾರದ ಅಲಭ್ಯತೆ ಉಂಟಾಗುತ್ತಿದೆ. ಸ್ವಾಭಾವಿಕ ಪುಷ್ಪಮಧುವಿನ ಅಭಾವದಿಂದಾಗಿ ಜೇನುನೊಣಗಳ ವಾಸದ ನೆಲೆಯಲ್ಲೂ ಬದಲಾವಣೆಗಳಾಗಿ ಇಡೀ ಪರಿಸರ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತಿತ್ತು. ಮಾಲಿನ್ಯಕಾರಕಗಳಿಂದಾಗಿ ಸಸ್ಯಗಳಿಂದ ಹೊರಸೂಸುವ ಪರಿಮಳದ ಅಣುಗಳನ್ನು ಒಡೆಯುತ್ತಿದ್ದವು. ಹೀಗಾಗಿ ಜೇನುನೊಣಗಳನ್ನು ಗೊಂದಲಕ್ಕೀಡುಮಾಡುವ ರಾಸಾಯನಿಕ ಬದಲಾವಣೆಗಳಿಗೆ ಕಾರಣವಾಗಿ ಜೇನುನೊಣಗಳ ಕರ್ತವ್ಯವನ್ನೇ ನಿಷ್ಕ್ರಿಯಗೊಳಿಸಿತ್ತು.

ಅಮೇರಿಕಾ ಮತ್ತು ಯುರೋಪ್ ಗಳ ಎಕ್ಸ್ ಪ್ರೆಸ್ ಹೈವೇ ಕಾರಿಡಾರ್ ನಲ್ಲಿ ವೇಗವಾಗಿ ಚಲಿಸುವ ವಾಹನಗಳ ಗಾಜಿಗೆ ಬಡಿದು ಜೇನುನೊಣಗಳು ಸಾಯುತ್ತಿದ್ದವು. 2015ರಲ್ಲಿ ಕೆನಡಾದ ಅಧ್ಯಯನ ಕೇಂದ್ರ ನಡೆಸಿದ ಸಂಶೋಧನೆ ಪ್ರಕಾರ ಪ್ರತೀ ವರ್ಷ ಉತ್ತರ ಅಮೇರಿಕಾ ಒಂದರಲ್ಲೇ 24 ಬಿಲಿಯನ್ ಜೇನುನೊಣಗಳು ಹೀಗೆ ಸಾಯುತ್ತಿದ್ದವಂತೆ. ಲಾಕ್ ಡೌನ್ ಘೋಷಣೆಯ ಕಾರಣ ಕಾರುಗಳು ಇತರೆ ವಾಹನಗಳು ರಸ್ತೆಗಿಳಿಯದ ಕಾರಣ ಈ ವಿನಾಕಾರಣ ಜೇನುನೊಣಗಳ ರಸ್ತೆ ಅಪಘಾತವೂ ಭಾಗಶಃ ಕಡಿಮೆಯಾಗಿತ್ತು. ಅಮೇರಿಕಾದ ಕೆಲವು ದೊಡ್ಡ ಹಿಡುವಳಿಯ ರೈತರು ಕೃತಕವಾಗಿ ಜೇನುಸಾಕಾಣಿಕೆಗೆ ಪರ್ಯಾಯ ವ್ಯವಸ್ಥೆ ಮಾಡಿಕೊಂಡರು. ಕಾರಣವಿಷ್ಟೆ ಜೇನು ನೊಣಗಳಿಲ್ಲದೇ ಅವರ ಕೃಷಿಯಲ್ಲಿ ಪರಾಗ ಸ್ಪರ್ಷವಾಗದೆ ಇಳುವರಿ ಕುಂಠಿತಗೊಂಡಿತ್ತು. ಅವರೆಷ್ಟೇ ಸರ್ಕಸ್ ಮಾಡಿದರೂ ಜೇನುನೊಣಗಳನ್ನು ಹಿಡಿದಟ್ಟುಕೊಳ್ಳಲಾಗಲಿಲ್ಲ. ಇದಕ್ಕೆ ಮುಖ್ಯ ಕಾರಣ ಗ್ಲೋಬಲ್ ವಾರ್ಮಿಂಗ್ ಮತ್ತು ಕಲುಷಿತ ವಾತಾವರಣ ಎನ್ನುವ ತೀರ್ಮಾನಕ್ಕೆ ಅಂತಿಮವಾಗಿ ಬರಲಾಯ್ತು. ಆದರೆ ಲಾಕ್ ಡೌನ್ ಕಾರಣದಿಂದ ಮತ್ತೆ ಜೇನು ಮತ್ತು ದುಂಬಿ ಕುಟುಂಬದ ನೆಲೆ ಸಾಧ್ಯವಾಗಿತ್ತು. ಈ ಎರಡು ಮೂರು ತಿಂಗಳಲ್ಲಿ ಪರಿಸರ ಮತ್ತು ಜೀವವ್ಯವಸ್ಥೆಯಲ್ಲಿ ಅಪಾರ ಪ್ರಮಾಣದ ಸಕಾರಾತ್ಮಕ ಧನಾತ್ಮಕ ಬೆಳವಣಿಗೆಗಳಾಗಿವೆ. ಆದರೆ ಲಾಕ್ ಡೌನ್ ತೆರವಾಗುತ್ತಿದ್ದಂತೆ ಮತ್ತೆ ಅದೇ ರಾಗ ಅದೇ ಹಾಡು. ಮತ್ತೆ ಮನುಷ್ಯನ ಆಟಾಟೋಪ ಹೆಚ್ಚಾಗುತ್ತದೆ ಜೀವ ವ್ಯವಸ್ಥೆಯ ಸರಪಳಿ ನೋವಿನಿಂದ ಅಲುಗಾಡತೊಡಗುತ್ತದೆ. ಇದಕ್ಕೆ ನಾನು ಅನೇಕ ಬಾರಿ ಹೇಳುವುದು ಬ್ರಹ್ಮಾಂಡದ ಎಲ್ಲಾ ಸೃಷ್ಟಿಯಲ್ಲೇ ಅತ್ಯಂತ ನೀಚ ಸೃಷ್ಟಿ ಮನುಷ್ಯ ಮಾತ್ರ.

-ವಿಭಾ (ವಿಶ್ವಾಸ್ ಭಾರದ್ವಾಜ್)

ShareTweetSendShare
Join us on:

Related Posts

reliance-digital-india-sale-disco-offers-august-2026

ರಿಲಯನ್ಸ್ ಡಿಜಿಟಲ್ ತಂದಿದೆ ‘ಡಿಜಿಟಲ್ ಇಂಡಿಯಾ ಸೇಲ್ ಕ್ರೇಜಿ ಆಫರ್ಸ್

by admin
August 13, 2026
0

ರಿಲಯನ್ಸ್ ಡಿಜಿಟಲ್ ತಂದಿದೆ 'ಡಿಜಿಟಲ್ ಇಂಡಿಯಾ ಸೇಲ್ ಕ್ರೇಜಿ ಆಫರ್ಸ್ (D.I.S.C.O.)' ಸ್ಮಾರ್ಟ್ಫೋನ್‌ಗಳು, ಗೃಹೋಪಯೋಗಿ ವಸ್ತುಗಳು, ಟಿವಿಗಳು, ಲ್ಯಾಪ್ ಟಾಪ್ ಗಳು ಮತ್ತು ಇತರ ಎಲೆಕ್ಟ್ರಾನಿಕ್ಸ್ ಗಳ ಮೇಲೆ ವಿಶೇಷ ಕೊಡುಗೆಗಳು ಮುಂಬೈ,  2026: ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ರಿಟೇಲರ್  ರಿಲಯನ್ಸ್ ಡಿಜಿಟಲ್, ತನ್ನ ಅಪ್ರತಿಮ ಡಿಜಿಟಲ್ ಇಂಡಿಯಾ ಸೇಲ್‌ಗಾಗಿ ಹೊಸ ಗುರುತನ್ನು D.I.S.C.O. (ಡಿಜಿಟಲ್ ಇಂಡಿಯಾ ಸೇಲ್ ಕ್ರೇಜಿ ಆಫರ್ಸ್) ಅನ್ನು ಪ್ರಾರಂಭಿಸಿದೆ. ರಿಲಯನ್ಸ್ ಡಿಜಿಟಲ್ ಸ್ಟೋರ್ಸ್, RelianceDigital.in ಮತ್ತು ಮೈಜಿಯೋ ಸ್ಟೋರ್ಸ್‌ನಲ್ಲಿ ಆಗಸ್ಟ್ 16 ರವರೆಗೆ ಚಾಲನೆಯಲ್ಲಿರುವ ಈ ಅಭಿಯಾನವು ಸ್ಮಾರ್ಟ್ಫೋನ್‌ಗಳು, ಟಿವಿಗಳು, ಲ್ಯಾಪ್‌ಟಾಪ್, ಗೃಹೋಪಯೋಗಿ ವಸ್ತುಗಳು ಮತ್ತು ಹೆಚ್ಚಿನವುಗಳ ಮೇಲೆ ವಿಶೇಷ ಕೊಡುಗೆಗಳನ್ನು ತಂದಿದೆ. ಗ್ರಾಹಕ ಎಲೆಕ್ಟ್ರಾನಿಕ್ಸ್ ಮತ್ತು ಉಪಕರಣಗಳ ಮೇಲಿನ ಋತುವಿನ ಕೆಲವು ಅತ್ಯುತ್ತಮ ಡೀಲ್ ಗಳನ್ನು ಒಟ್ಟುಗೂಡಿಸುವ ಈ ಮಾರಾಟವು ಹಳೆಯ ಉತ್ಪನ್ನಗಳ ಮೇಲೆ ವರ್ಧಿತ ವಿನಿಮಯ ಮೌಲ್ಯ, ಆಯ್ದ ಎಲೆಕ್ಟ್ರಾನಿಕ್ಸ್ ಮೇಲೆ ₹ 15,000 ವರೆಗೆ ಎಕ್ಸ್‌ಚೇಂಜ್ ಬೋನಸ್, ಎರಡನೇ ಉತ್ಪನ್ನದ ಖರೀದಿಗೆ ಫ್ಲಾಟ್ 50% ರಿಯಾಯಿತಿ, ಬ್ಯಾಂಕ್ ಕಾರ್ಡ್‌ಗಳು, ಪೇಪರ್ ಫೈನಾನ್ಸ್ ಮತ್ತು ಯುಪಿಐ ಮೂಲಕ ₹ 30,000 ವರೆಗೆ ರಿಯಾಯಿತಿ ಮತ್ತು ಮಾರಾಟದ ಸಮಯದಲ್ಲಿ ಪೂರಕ ಒಂದು ವರ್ಷದ ವಿಸ್ತೃತ ವಾರಂಟಿಯನ್ನು ನೀಡುತ್ತದೆ. ನಿಮ್ಮ ಸ್ಮಾರ್ಟ್ಫೋನ್, ಟಿವಿ, ಲ್ಯಾಪ್‌ಟಾಪ್ ಅಥವಾ ಗೃಹೋಪಯೋಗಿ ಉಪಕರಣಗಳನ್ನು ಅಪ್ಗ್ರೇಡ್ ಮಾಡಲು ಯೋಜಿಸುತ್ತಿದ್ದರೂ, ಅದನ್ನು ಮಾಡಲು ಇದಕ್ಕಿಂತ ಉತ್ತಮ ಸಮಯ ಎಂದಿಗೂ ಸಿಗಲಾರದು.  D.I.S.C.O. ಕೊಡುಗೆಗಳ ವಿವರ ಇಲ್ಲಿದೆ: ಸ್ಮಾರ್ಟ್ಫೋನ್‌ಗಳು ಮತ್ತು ಪರಿಕರಗಳು: ಗ್ರಾಹಕರು ₹10,999 ರಿಂದ ಪ್ರಾರಂಭವಾಗುವ ಕೈಗೆಟುಕುವ 4G ಸ್ಮಾರ್ಟ್ಫೋನ್, ₹13,999 ನಿಂದ 5G ಸ್ಮಾರ್ಟ್ಫೋನ್ ಅಥವಾ ಐಫೋನ್‌ಗಳು ಮತ್ತು ₹2 ಲಕ್ಷದವರೆಗೆ ಬೆಲೆಯ ಫೋಲ್ಡೆಬಲ್ ಫೋನ್ ಸೇರಿದಂತೆ ಪ್ರೀಮಿಯಂ ಫ್ಲ್ಯಾಗ್ ಶಿಪ್ ಸಾಧನಗಳನ್ನು ಹುಡುಕುತ್ತಿರಲಿ, ರಿಲಯನ್ಸ್ ಡಿಜಿಟಲ್ ಪ್ರತಿ ಬೆಲೆ ವಿಭಾಗದಲ್ಲಿ ಆಯ್ಕೆಗಳನ್ನು ಹೊಂದಿದೆ. ಗ್ರಾಹಕರು 30 ತಿಂಗಳವರೆಗೆ ನೋ ಕಾಸ್ಟ್ ಇಎಂಐ, ಆಯ್ದ ಸ್ಮಾರ್ಟ್ಫೋನ್‌ಗಳಿಗೆ 10,000 ರೂ.ವರೆಗೆ ವಿನಿಮಯ ಬೋನಸ್, ಇಯರ್ಬಡ್‌ಗಳು, ಹೆಡ್ಫೋನ್‌ಗಳು, ಬ್ಲೂಟೂತ್ ಸ್ಪೀಕರ್‌ಗಳು, ಧರಿಸಬಹುದಾದ ವಸ್ತುಗಳು ಮತ್ತು ಮೊಬೈಲ್ ಬಿಡಿಭಾಗಗಳಿಗೆ ಯುಪಿಐ ಪಾವತಿಗಳ ಮೇಲೆ 10% ವರೆಗೆ ರಿಯಾಯಿತಿ ಮತ್ತು ಆಯ್ದ ಬ್ಲೂಟೂತ್ ಸ್ಪೀಕರ್,, ಇಯರ್ಬಡ್ ಮತ್ತು ಪವರ್ ಬ್ಯಾಂಕ್ ಮೇಲೆ ₹15,000 ಅಥವಾ ಅದಕ್ಕಿಂತ ಹೆಚ್ಚಿನ ಬೆಲೆಯ ಖರೀದಿಗಳೊಂದಿಗೆ ಫ್ಲಾಟ್ 50% ರಿಯಾಯಿತಿ ಪಡೆಯಬಹುದು. ಗೃಹೋಪಯೋಗಿ ಉಪಕರಣಗಳು: ₹50,000 ಮತ್ತು ಅದಕ್ಕಿಂತ ಹೆಚ್ಚಿನ ಬೆಲೆಗೆ ಶಾಪಿಂಗ್ ಮಾಡಿ ಮತ್ತು 43,900 ರೂ.ಗಳ ಡೈಸನ್ ಬಿಗ್ ಬಾಲ್ ವ್ಯಾಕ್ಯೂಮ್ ಕ್ಲೀನರ್ ಅನ್ನು 13,900 ರೂ.ಗೆ ಪಡೆಯಿರಿ. ₹39,990 ನಿಂದ ಪ್ರಾರಂಭವಾಗುವ 65-ಇಂಚಿನ 4K UHD ಗೂಗಲ್ ಟಿವಿ ಮೂಲಕ  ನಿಮ್ಮ ಮನೆಯ ಮನರಂಜನೆಯನ್ನು ನವೀಕರಿಸಿ, ಮತ್ತು ₹39,990 ನಿಂದ ಪ್ರಾರಂಭವಾಗುವ ಸೈಡ್ ಬೈ ಸೈಡ್ ರೆಫ್ರಿಜರೇಟರ್ ಆಯ್ಕೆ ಮಾಡಿ ಮತ್ತು 12000/- ವರೆಗಿ‌ನ ಮೌಲ್ಯದ ಉಚಿತ ಪಡೆಯಿರಿ ಮತ್ತು 15,000/-ವರೆಗೆ ವಿನಿಮಯ ಪ್ರಯೋಜನಗಳನ್ನು ಪಡೆಯಿರಿ. ಗ್ರಾಹಕರು *₹18,000 ಮೌಲ್ಯದ ಉಚಿತಗಳೊಂದಿಗೆ ₹55,990 ರಿಂದ ಪ್ರಾರಂಭವಾಗುವ ವಾಷರ್ ಡ್ರೈಯರ್ ಅನ್ನು ಸಹ ಮನೆಗೆ ತರಬಹುದು. ಲ್ಯಾಪ್ ಟಾಪ್‌ಗಳು: ಕೇವಲ ₹ 39,999 ರಿಂದ ಪ್ರಾರಂಭವಾಗುವ ಲ್ಯಾಪ್ ಟಾಪ್‌ಗಳ ಮೇಲೆ ₹ 5,000 ವರೆಗೆ ಉಚಿತ 1+2 ವರ್ಷಗಳ ವಿಸ್ತೃತ ವಾರಂಟಿ ಮತ್ತು ವಿನಿಮಯ ಪ್ರಯೋಜನಗಳನ್ನು ಪಡೆಯಿರಿ.

upendra-next-level-movie-launch-aradhana-ram-pair

ʻರಿಯಲ್ ಸ್ಟಾರ್ʼ ಉಪೇಂದ್ರ ಅಭಿನಯದ ಕನ್ನಡ – ತೆಲುಗಿನಲ್ಲಿ ನಿರ್ಮಾಣವಾಗುತ್ತಿರುವ ಬಿಗ್‌ ಬಜೆಟ್‌ ‘ನೆಕ್ಟ್ಸ್ ಲೆವೆಲ್’ ಚಿತ್ರಕ್ಕೆ ಅದ್ಧೂರಿ ಚಾಲನೆ: ಉಪ್ಪಿಗೆ ‘ಕಾಟೇರ’ ನಟಿ ಆರಾಧನಾ ರಾಮ್ ಜೋಡಿ!

by admin
August 13, 2026
0

ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ, ಕನ್ನಡ - ತೆಲುಗಿನಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿರುವ ಬಹುನಿರೀಕ್ಷಿತ ಬಿಗ್ ಬಜೆಟ್ ಸಿನಿಮಾ ‘ನೆಕ್ಟ್ಸ್‌ ಲೆವೆಲ್’ (Next Level) ಅಧಿಕೃತವಾಗಿ ಆರಂಭವಾಗಿದೆ....

ashoka-university-placements-100-percent-record-highest-package

ಕ್ಯಾಂಪಸ್ ಪ್ಲೇಸ್‌ಮೆಂಟ್‌ನಲ್ಲಿ ಅಶೋಕ ವಿವಿ 100% ಸಾಧನೆ, ಗರಿಷ್ಠ 42.5 ಲಕ್ಷ ರೂ. ಪ್ಯಾಕೇಜ್ ಪಡೆದು ಬೀಗಿದ ವಿದ್ಯಾರ್ಥಿಗಳು!

by admin
August 13, 2026
0

ಕ್ಯಾಂಪಸ್ ಪ್ಲೇಸ್‌ಮೆಂಟ್‌ನಲ್ಲಿ ಅಶೋಕ ವಿವಿ 100% ಸಾಧನೆ, ಗರಿಷ್ಠ 42.5 ಲಕ್ಷ ರೂ. ಪ್ಯಾಕೇಜ್ ಪಡೆದು ಬೀಗಿದ ವಿದ್ಯಾರ್ಥಿಗಳು! ದೆಹಲಿ - ಎನ್‌ಸಿಆರ್ ಮೂಲದ ಪ್ರಸಿದ್ಧ ಅಶೋಕ...

shatkarma-kerala-mantravada-truth-psychology

Astro- ಈ_ಪ್ರಯೋಗಗಳು_ಕೇರಳದ_ಮಂತ್ರವಾದದ_ಅತ್ಯಂತ_ಹಳೆಯ_ಭಾಗ.

by admin
August 13, 2026
0

ಇದನ್ನ ಷಟ್ಕರ್ಮ ಅಂತ ಕರೀತಾರೆ - ಅಂದ್ರೆ 6 ಕರ್ಮಗಳು. ಒಡಿಯನ್ ವಿದ್ಯೆಯೂ ಇದರಲ್ಲೇ ಬರುತ್ತೆ. ಇವು ಅಥರ್ವಣ ವೇದದಿಂದ ಬಂದಿವೆ ಅಂತ ಹೇಳ್ತಾರೆ. ಶ್ರೀ ಕ್ಷೇತ್ರ...

nagara-panchami-2026-date-muhurat-significance

ನಾಗ ಪಂಚಮಿ ಹಬ್ಬದ ಮಹತ್ವ ಮತ್ತು ಆಚರಣೆಯ ಮುಖ್ಯಾಂಶಗಳು

by admin
August 13, 2026
0

ನಾಗ ಪಂಚಮಿ ಸೋಮವಾರ, ಆಗಸ್ಟ್ 17, 2026 ನಾಗ ಪಂಚಮಿ ಪೂಜೆ ಮುಹೂರ್ತ - 05:51 AM ರಿಂದ 08:29 AM ಅವಧಿ - 02 ಗಂಟೆಗಳು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram