BJP ವಿಮೋಚನಾ KCR ಏಕೀಕರಣ – ಹೈದ್ರಾಬಾದ್ ರಾಜಕೀಯ ಸಮರ
ಭಾರತಕ್ಕೆ ಸ್ವಾತಂತ್ರ್ಯ ದೊರಕಿದ ನಂತರವು ನಿಜಾಮಾರ ಆಡಳಿತದಲ್ಲಿದ್ದ ಹೈದ್ರಬಾದ್ ಪ್ರಾಂತ್ಯಕ್ಕೆ ಅಷ್ಟು ಸುಲಭವಾಗಿ ಸ್ವಾಂತ್ರಂತ್ರ್ಯ ದೊರಕಿರಲಿಲ್ಲ. ನಿಜಾಮರ ಆಡಳಿತದಿಂದ ಹೊರಬಂದು ಹೈದ್ರಾಬಾದ್ ಪ್ರಾಂತ್ಯ ಭಾರತದ ಸೇರಿ 74 ವರ್ಷಗಳು ಸೇರಿದ ನೆನೆಪಿನಲ್ಲಿ ಅಮೃತ ಮಹೋತ್ಸವವನ್ನ ಆಚರಿಸಲಾಗುತ್ತಿದೆ.
ಹೈದ್ರಾಬಾದ್ ಪ್ರಾಂತ್ಯ ಭಾರತದೊಂದಿದೆ ವಿಲಿನಗೊಂಡ ಈ ದಿನವನ್ನ ಸೆಪ್ಟೆಂಬರ್ 17 ರ ಶನಿವಾರದಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಂದೇ ದಿನವನ್ನು ಆದರೆ ವಿಭಿನ್ನ ಹೆಸರುಗಳಲ್ಲಿ ಆಚರಿಸುತ್ತಿರುವುದು ಕಂಡುಬಂದಿದೆ.
ಆಡಳಿತಾರೂಢ ಟಿಆರ್‌ಎಸ್ ಏಕೀಕರಣ ದಿನ ಮತ್ತು ಬಿಜೆಪಿ ವಿಮೋಚನಾ ದಿನಾಚರಣೆಯನ್ನಾಗಿ ಆಚರಿಸಿದ್ದು ರಾಜಕೀಯದಲ್ಲಿ ಕೋಲಾಹಲವನ್ನ ಎಬ್ಬಿಸಿವೆ.
ಇದು ಕೇವಲ ಹೆಸರಿನ ಕೆಸರೆರೆಚಾಟವಷ್ಟೆ ಆಗದೇ ರಾಜಕೀವಾಗಿ ಲೋಡ್ ಮಾಡಿದ ಕ್ಷಿಪಣಿಗಳು ಸಹ ಉಡಾವಣೆಯಾಗಿವೆ. ಸಿಎಂ ಕೆ ಚಂದ್ರಶೇಖರ್ ರಾವ್ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜಕೀಯ ಕೆಸರೆರೆಚಾಟಕ್ಕೆ ಕಾರಣವಾಯಿತು.
ನಗರದ ಪರೇಡ್ ಗ್ರೌಂಡ್ಸ್‌ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅಮಿತ್ ಷಾ, ರಜಾಕಾರರ ಭಯವನ್ನು ತಮ್ಮ ಮನಸ್ಸಿನಿಂದ ತೊಡೆದುಹಾಕಲು ಜನರನ್ನು ಉತ್ತೇಜಿಸಿದರು.
ಸ್ವಾತಂತ್ರ್ಯದ 75 ವರ್ಷಗಳ ನಂತರ, ರಜಾಕರು ಇನ್ನು ಮುಂದೆ ರಾಜ್ಯದ ನಿರ್ಧಾರಗಳ ಮೇಲೆ ಪ್ರಭಾವ ಬೀರಲು ಸಾಧ್ಯವಿಲ್ಲ ಎಂದು ಅಮಿತ್ ಶಾ ಹೇಳಿದರು “ಸೆಪ್ಟೆಂಬರ್ 17 ಅನ್ನು ವಿಮೋಚನಾ ದಿನವನ್ನಾಗಿ ಆಚರಿಸಲು ನಾಚಿಕೆಪಡುವವರು ದೇಶದ್ರೋಹಿಗಳಾಗಿ ಉಳಿಯುತ್ತಾರೆ. ತೆಲಂಗಾಣದ ಕಾರಣಕ್ಕಾಗಿ, ಸಾವಿರಾರು ಜನರು ಹೋರಾಡಿದ್ದಾರೆ.
ಹೆಸರನ್ನ ಉಲ್ಲೇಖಿಸದೇ ಟಿಆರ್‌ಎಸ್ ಮೇಲೆ ದಾಳಿ ಮಾಡಿದ ಅಮಿತ್ ಶಾ, ಈ ಸಂದರ್ಭವನ್ನು ಆಚರಿಸಲು ಕೆಲವು ರಾಜಕೀಯ ಪಕ್ಷಗಳಿಗೆ ಬೆನ್ನುಮೂಳೆಯ ಕೊರತೆಯಿದೆ ಎಂದು ವಿಷಾದಿಸಿದರು.
“ಅವರು (ಕೆಸಿಆರ್ ಅವರನ್ನು ಉಲ್ಲೇಖಿಸಿ) ತೆಲಂಗಾಣ ಚಳವಳಿಯ ಸಂದರ್ಭದಲ್ಲಿ ಆ ದಿನವನ್ನು ವಿಮೋಚನಾ ದಿನವನ್ನಾಗಿ ಆಚರಿಸುವುದಾಗಿ ಭರವಸೆ ನೀಡಿದ್ದರೂ, ಅವರು ಅಧಿಕಾರಕ್ಕೆ ಬಂದ ನಂತರ ರಜಾಕರ (ಎಂಐಎಂ) ಗೆ ಹೆದರಿ ಯು-ಟರ್ನ್ ತೆಗೆದುಕೊಂಡರು. ನನಗೆ ಆಶ್ಚರ್ಯವಿಲ್ಲ, ಆದರೆ ಮೋದಿಜಿ ಇದನ್ನು ಅಧಿಕೃತ ಕಾರ್ಯಕ್ರಮವೆಂದು ಘೋಷಿಸಿದ ನಂತರ ಎಲ್ಲರೂ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ್ದಾರೆ ಎಂದು ಅಮಿತ್ ಷಾ ಹೇಳಿದ್ದಾರೆ.