ಮಳೆ ಪರಿಹಾರಕ್ಕೂ ಲಂಚ – ರೈತರ ಸಂಘದವರ ಮೇಲೆ ಕಿರುಚಾಡಿದ ಲೇಡಿ ತಹಶೀಲ್ದಾರ್…
ಲಂಚಕ್ಕೆ ಕೈ ಚಾಚಿದ ಅಧಿಕಾರಿಯನ್ನ ಪ್ರಶ್ನಿಸಿದ್ದಕ್ಕೆ ಲೇಡಿ ತಹಶೀಲ್ದಾರ್ ರಂಪಾಟ ನಡೆಸಿ ಮುಖಂಡರ ಮೇಲೆ ಕೂಗಾಟ ನಡೆಸಿದ ಘಟನೆ ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ಮಿನಿ ವಿಧಾನಸೌಧದಲ್ಲಿ ನಡೆದಿದೆ.
ಮಳೆ ಪರಿಹಾರಕ್ಕೂ ಲಂಚಕ್ಕಾಗಿ ಕೈ ಚಾಚಿದ್ದಾರೆ ಎಂದು ಆರೋಪಿಸಿ ಮುಖಂಡರುಗಳು ತಹಶೀಲ್ದಾರರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಇದರಿಂದ ಕೆರಳಿದ ತಹಶೀಲ್ದಾರ್ ರತ್ನಾಂಬಿಕ ರಂಪಾಟ, ಕೂಗಾಟ ನಡೆಸಿದ್ದಾರೆ. ಟೇಬಲ್ ಮೇಲಿನ ಪೇಪರ್ ಎಸೆದು ಕಿರುಚಾಡಿದ್ದಾರೆ ಲೇಡಿ ತಹಶೀಲ್ದಾರ್
ಮಳೆಯಿಂದ ಕುಸಿದು ಬಿದ್ದ ಮನೆಗಳ ಪರಿಹಾರಕ್ಕೆ ಅಧಿಕಾರಿಗಳು ಲಂಚ ಕೇಳುತ್ತಿದ್ದಾರೆ ಲಂಚ ಏಕೆ ಕೊಡಬೇಕು ಎಂದು ಪ್ರಶ್ನಿಸಿದ ರೈತ ಸಂಘದ ಮುಖಂಡರು ತಹಶೀಲ್ದಾರ್ ರತ್ನಾಂಬಿಕ ಮೇಲೆ ಮುಗಿಬಿದ್ದಿದ್ದಾರೆ.
ಹೆಚ್.ಡಿ.ಕೋಟೆ ತಾಲ್ಲೂಕು ಕಚೇರಿಯಲ್ಲಿ ಲಂಚಾವತಾರ ಮಿತಿಮೀರಿದ್ದು, ತಹಶೀಲ್ದಾರ್ ನಡೆಗೆ ಸಾರ್ವಜನಿಕರು ಆಕ್ಷೇಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ.