ನಗ್ನ ವಿಡಿಯೋ ಶೇರ್ ಮಾಡಿದ್ದ ಪ್ರಿಯಕರ – ಸಂಧಾನಕ್ಕೆಂದು ಕರೆದು ಕೊಲೆ ಮಾಡಿದ ಯುವತಿ…
ಚೆನೈ ಮೂಲದ ಡಾಕ್ಟರ್ ಒಬ್ಬ ಬೆಂಗಳೂರಿನಲ್ಲಿ ಪ್ರೇಯಸಿಯಿಂದಲೇ ಬರ್ಬರವಾಗಿ ಕೊಲೆ ಆಗಿದ್ದಾನೆ. ಇನ್ನೇನು ಮೂರು ತಿಂಗಳಲ್ಲಿ ಮದುವೆಯಾಗಬೇಕಿದ್ದ ಜೋಡಿಯ ನಡುವೆ ನಡೆದ ಆ ಘಟನೆ ಹಡುಗನ ಸಾವಿನಲ್ಲಿ ಅಂತ್ಯವಾಗಿದೆ.
ಪ್ರಿಯತಮೆಯಿಂದ ಕೊಲೆಯಾದ ವ್ಯಕ್ತಿಯನ್ನ ಚೆನೈ ಮೂಲದ ವಿಕಾಸ್ ಎಂದು ಗುರುತಿಸಲಾಗಿದ್ದು ಉಕ್ರೇನ್ ನಲ್ಲಿ MBBS ಮಾಡಿದ್ದ ವ್ಯಕ್ತಿ ಬೆಂಗಳೂರಿನಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿದ್ದರು. ಇದೇ ವೇಳೆ ಆರ್ಕ್ಟಿಟೆಕ್ ಆಗಿದ್ದ ಪ್ರತಿಭಾ ಅನ್ನುವ ಯುವತಿಯ ಪರಿಚಯವಾಗಿತ್ತು. ಪರಿಚಯ ಪ್ರೀತಿಗೆ ತಿರುಗಿ ಮದುವೆಯಾಗಲು ನಿರ್ಧರಿಸಿದ್ದರು. ಮೂರು ತಿಂಗಳಲ್ಲಿ ಮದುವೆ ಕೂಡ ಫಿಕ್ಸ್ ಆಗಿತ್ತು.
ಆದರೆ ಅದೊಂದು ದಿನ ಈ ಇಬ್ಬರೂ ಜೋಡಿಗಳು ದೈಹಿಕ ಸಂಬಂಧದ ಫೊಟೋ ತೆಗೆದುಕೊಂಡಿದ್ರು ಅಷ್ಟೆ ಅಲ್ಲದೇ ಡಾಕ್ಟರ್ ವಿಕಾಸ್ ಪ್ರಿಯತಮೆ ಜೊತೆಗಿನ ನಗ್ನ ಪೋಟೋ ಗಳನ್ನ ಸೋಶಿಯಲ್ ಮೀಡಿಯಾದ ದ ಕ್ಲೋಸ್ ಫ್ರೆಂಡ್ ಗ್ರೂಪ್ ಗೆ ಶೇರ್ ಮಾಡಿಕೊಂಡಿದ್ದ.
ಯುವತಿ ಪ್ರತಿಭಾ ಗೆ ವಿಷಯ ತಿಳಿದ ನಂತರ ಇವರಿಬ್ಬರ ಮಧ್ಯೆ ಜಗಳ ನಡೆದಿತ್ತು. ವಿಕಾಸ್ ಎಲ್ಲವನ್ನೂ ಡಿಲಿಟ್ ಮಾಡಿ ಸಾರಿ ಕೂಡ ಕೇಳಿದ್ದ ಆದರೆ ಇಷ್ಟಕ್ಕೆ ಸುಮ್ಮನಾಗದ ಪ್ರೇಯಸಿ ತನ್ನ ಮೂವರು ಗೆಳೆಯರ ಜೊತೆ ಸೇರಿಕೊಂಡು ಸಂಧಾನಕ್ಕೆಂದು ಕರೆದು ಯುವಕನನ್ನ ಕೊಲೆ ಮಾಡಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಬೇಗೂರು ಪೊಲೀಸರು ಪ್ರತಿಭಾ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ. ಮತ್ತೋರ್ವ ಆರೋಪಿಯಾಗಿರುವ ಸೂರ್ಯ ನಾಪತ್ತೆಯಾಗಿದ್ದು, ಪೊಲೀಸರು ಶೋಧ ನಡೆಸಿದ್ದಾರೆ.