Danish Kaneria | ಕೊಹ್ಲಿ ಇನ್ನಿಂಗ್ಸ್ ಆರಂಭಿಸಲಿ.. ರೋಹಿತ್ ಒನ್ ಡೌನ್ ಬರಲಿ
ಟೀಂ ಇಂಡಿಯಾ ಓಪನಿಂಗ್ ಜೋಡಿಯ ಬಗ್ಗೆ ಪಾಕಿಸ್ತಾನ್ ಮಾಜಿ ಕ್ರಿಕೆಟರ್ ಡಾನಿಷ್ ಕನೆರಿಯಾ ಆಸಕ್ತಿದಾಯ ಕಮೆಂಟ್ ಗಳನ್ನು ಮಾಡಿದ್ದಾರೆ.
ಒನ್ ಡೌನ್ ಬ್ಯಾಟರ್ ವಿರಾಟ್ ಕೊಹ್ಲಿಯವರನ್ನು ಓಪನರ್ ಆಗಿ ಪ್ರಮೋಟ್ ಮಾಡಿ, ಕ್ಯಾಪ್ಟನ್ ರೋಹಿತ್ ಶರ್ಮಾ ಮೂರನೇ ಸ್ಥಾನದಲ್ಲಿಬ್ಯಾಟಿಂಗ್ ಮಾಡಬೇಕು ಎಂದು ಸೂಚಿಸಿದ್ದಾರೆ.
ಇತ್ತೀಚಿಗೆ ರೋಹಿತ್ ಶರ್ಮಾ ಗಮನಾರ್ಹ ಪ್ರದರ್ಶನ ನೀಡುವಲ್ಲಿ ವಿಫಲವಾಗುತ್ತಿದ್ದಾರೆ.
ಒಳ್ಳೆಯ ಆರಂಭ ಸಿಕ್ಕರೂ ಭಾರಿ ಸ್ಕೋರ್ ಮಾಡುವುದರಲ್ಲಿ ಎಡವುತ್ತಿದ್ದಾರೆ.
ಬ್ಯಾಟಿಂಗ್ ಆರ್ಡರ್ ಬದಲಾದ್ರೆ ಆಟದಲ್ಲೂ ಬದಲಾವಣೆ ಬರಬಹುದು ಎಂದಿದ್ದಾರೆ.
ಏಷ್ಯಾಕಪ್ ನಲ್ಲಿ ರೋಹಿತ್ ಶರ್ಮಾ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಪ್ರದರ್ಶನ ನೀಡಲಿಲ್ಲ.
ಈ ಮೆಗಾ ಈವೆಂಟ್ ನಲ್ಲಿ ನಾಲ್ಕು ಪಂದ್ಯಗಳನ್ನಾಡಿದ ರೋಹಿತ್ ಶರ್ಮಾ, 133 ರನ್ ಗಳಷ್ಟೆ ಗಳಿಸಿದರು.
ಇತ್ತ ಆಸ್ಟ್ರೇಲಿಯಾ ವಿರುದ್ಧದ ಟಿ 20 ಪಂದ್ಯದಲ್ಲಿ ಕೇವಲ 11 ರನ್ ಗಳನ್ನು ಗಳಿಸಿ ಔಟ್ ಆದರು.
ಈ ಹಿನ್ನೆಲೆಯಲ್ಲಿ ಮಾತನಾಡಿದ ಪಾಕ್ ಕ್ರಿಕೆಟರ್, ರೋಹಿತ್ ಶರ್ಮಾ ಇತ್ತೀಚಿನ ದಿನಗಳಲ್ಲಿ ದೊಡ್ಡ ಸ್ಕೋರ್ ಗಳಿಸುತ್ತಿಲ್ಲ. ಏಷ್ಯಾಕಪ್ ನಲ್ಲಿ ತಮ್ಮ ಸ್ಥಾಯಿಗೆ ತಕ್ಕಂತೆ ಬ್ಯಾಟ್ ಬೀಸಲಿಲ್ಲ.
ಆರಂಭ ಚೆನ್ನಾಗಿದ್ದರೂ ಬಿಗ್ ಸ್ಕೋರ್ ಕಲೆಹಾಕುತ್ತಿಲ್ಲ. ರೋಹಿತ್ ತನ್ನ ಬ್ಯಾಟಿಂಗ್ ಆರ್ಡರ್ ಅನ್ನು ಮೂರನೇ ಸ್ಥಾನಕ್ಕೆ ಬದಲಾಯಿಸಿಕೊಳ್ಳಬೇಕು.
ಅಥವಾ ಕೆ.ಎಲ್.ರಾಹುಲ್ ಅವರನ್ನು ಒನ್ ಡೌನ್ ನಲ್ಲಿ ಬ್ಯಾಟಿಂಗ್ ಮಾಡಲು ಅವಕಾಶ ನೀಡಿ, ವಿರಾಟ್ ಕೊಹ್ಲಿ ಜೊತೆ ರೋಹಿತ್ ಶರ್ಮಾ ಇನ್ನಿಂಗ್ಸ್ ಆರಂಭಿಸಬೇಕು ಎಂದು ಡಾನಿಷ್ ಕನೆರಿಯಾ ಹೇಳಿದ್ದಾರೆ.
ಅಂದಹಾಗೆ ವಿರಾಟ್ ಕೊಹ್ಲಿ ಏಷ್ಯಾಕಪ್ ನಲ್ಲಿ 276 ರನ್ ಗಳಿಸಿ ಟೀಂ ಇಂಡಿಯಾ ಪರ ಟಾಪ್ ಸ್ಕೋರರ್ ಆಗಿದ್ದು ಗೊತ್ತೇ ಇದೆ.
ಅದಲ್ಲರೂ ಒಂದು ಶತಕ ಸಿಡಿಸಿ ಕಿಂಗ್ ಇಸ್ ಬ್ಯಾಕ್ ಅಂತಾ ಇಡೀ ಕ್ರಿಕೆಟ್ ಜಗತ್ತಿಗೆ ತೋರಿಸಿಕೊಟ್ಟರು.