Tumkur | ಕ್ವಾರಿಯಲ್ಲಿ ಬಿದ್ದು ಕಾರ್ಮಿಕ ಸಾವು
ತುಮಕೂರು : ಕಲ್ಲು ಕ್ವಾರಿಯಲ್ಲಿ ಬಿದ್ದು ಕಾರ್ಮಿಕ ಮೃತಪಟ್ಟಿರುವ ಘಟನೆ ತುಮಕೂರು ತಾಲೂಕಿನ ಹೊಸಹಳ್ಳಿಯಲ್ಲಿ ನಡೆದಿದೆ.
53 ವರ್ಷದ ಈರಣ್ಣ ಮೃತ ಕಾರ್ಮಿಕನಾಗಿದ್ದಾರೆ. ಗೌರಿ ಅಕ್ಷಯ ಜೆಲ್ಲಿ ಕ್ರಷರ್ ನಲ್ಲಿ ಈ ದುರಂತ ನಡೆದಿದೆ.
ಈರಣ್ಣ ಕೊಳ್ಳೇಗಾಲ ತಾಲೂಕಿನ ಬಿದರಹಳ್ಳಿ ಗ್ರಾಮದವರು.
ನಾಲ್ಕೈದು ತಿಂಗಳ ಹಿಂದೆ ಸಹ ಕಾರ್ಮಿಕನೊಬ್ಬ ಇದೇ ಕ್ರಷರಲ್ಲಿ ಮೃತಪಟ್ಟಿದ.
ಹಗ್ಗ ಕಟ್ಟಿಕೊಂಡು ಕಡಿದಾದ ಬೆಟ್ಟಹತ್ತಿ ಬಂಡೆಗೆ ರಂದ್ರ ಕೊರೆಯುವಾಗ ಜಾರಿ ಬಿದ್ದು ಸಾವನ್ನಪ್ಪಿದ್ದಾರೆ.
ಈ ಸಂಬಂಧ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.