ಹಸುವಿನ ಮುಖದ ಮೇಲೆ ದಾಳಿ ಮಾಡಿದ ಪಿಟ್ ಬುಲ್ ನಾಯಿ
ಉತ್ತರಪ್ರದೇಶದ ಕಾನ್ಪುರದ ಸರ್ಸಯ್ಯ ಘಾಟ್‌ನಲ್ಲಿ ಗುರುವಾರ ಪಿಟ್‌ಬುಲ್ ನಾಯಿಯೊಂದು ಹಸುವಿನ ಮೇಲೆ ದಾಳಿ ನಡೆಸಿದ ವಿಡಿಯೋ ವೈರಲ್ ಆಗಿದೆ. ವಿಡಿಯೋ ವೈರಲ್ ಆದ ನಂತರ ಮಹಾನಗರ ಪಾಲಿಕೆಯ ಗೋರಕ್ಷಕ ಇಲಾಖೆ ಪಿಟ್ ಬುಲ್ ಮತ್ತು ಅದರ ಅಡ್ಡ ತಳಿಯ ಇನ್ನೊಂದು ನಾಯಿಯನ್ನ ಜಪ್ತಿ ಮಾಡಿದೆ.
ಕಾನ್ಪುರದ ನಿವಾಸಿಯಾದ ಸುಮಿತ್ ಮಿಶ್ರಾ ತಮ್ಮ ಸಾಕು ನಾಯಿಗಳಾದ ಪಿಟ್ ಬುಲ್ ಮತ್ತು ಕ್ರಾಸ್ ಬ್ರೀಡ್ ನಾಯಿಯೊಂದಿದೆ ಗಂಗಾ ನದಿಯ ದಡದ ಬಳಿ ವಾಕಿಂಗ್ ಕರೆದುಕೊಂಡು ಹೋಗುತ್ತಿದ್ದರು.
ಆಗ ಸಾಕು ನಾಯಿ ಅಲ್ಲೇ ನಿಂತಿದ್ದ ಹಸುವಿನ ಕಾಲುಗಳನ್ನು ಕಚ್ಚಲು ಮುಂದಾಗಿದೆ. ಹಸು ನಾಯಿಯನ್ನ ಕೊಂಬಿನಿಂದ ತಿವಿದು ಓಡಿಸಲು ಯತ್ನಿಸಿದೆ, ಆಗ ನಾಯಿ ಮುಖದ ಮೇಲೆ ದಾಳಿ ಮಾಡಿದೆ. ಇದನ್ನು ಕಂಡು ಘಾಟ್‌ನಲ್ಲಿದ್ದ ಇತರರು ಕೂಗಲಾರಂಭಿಸಿದ್ದಾರೆ. ನಂತರ ಮಾಲಿಕ ಸುಮಿತ್ ಮಿಶ್ರ ಕೋಲಿನಿಂದ ಒದ್ದು ಪಿಟ್ ಬುಲ್ ನಾಯಿಯ ಬಾಯಿಯಿಂದ ಹಸು ಬಿಡಿಸಿದ್ದಾರೆ.
ವಿಡಿಯೋ ವೈರಲ್ ಆದ ನಂತರ ನಂತರ ನಗರಸಭೆ ಕಾರ್ಯಪ್ರವೃತ್ತವಾಗಿದೆ. ಘಟನೆ ತಿಳಿದ ತಕ್ಷಣ ತಂಡವನ್ನು ಕಳುಹಿಸಿ ತನಿಖೆ ನಡೆಸಲಾಗಿದೆ ಎಂದು ಮಹಾನಗರ ಪಾಲಿಕೆ ಉಪ ಮುಖ್ಯ ಪಶುವೈದ್ಯಾಧಿಕಾರಿ ಡಾ.ಆರ್.ಕೆ.ನಿರಂಜನ್ ತಿಳಿಸಿದ್ದಾರೆ.
ಇದೇ ಮೊದಲ ಬಾರಿಗೆ ನಾಯಿ ಈ ರೀತಿ ದಾಳಿ ಮಾಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಪಿಟ್‌ಬುಲ್‌ನ ಅಡ್ಡ ತಳಿಯಾದ ಸುಮಿತ್ ಮಿಶ್ರಾ ಅವರ ಮನೆಯಲ್ಲಿ ಮತ್ತೊಂದು ಸಾಕು ನಾಯಿ ಪತ್ತೆಯಾಗಿದೆ. ತಕ್ಷಣ ಎರಡೂ ಸಾಕು ನಾಯಿಗಳನ್ನು ಜಪ್ತಿ ಮಾಡಲಾಗಿದೆ.
ಎರಡೂ ನಾಯಿಗಳ ದಾಖಲಾತಿ, ಲಸಿಕೆ ಇತ್ಯಾದಿಗಳೊಂದಿಗೆ ಮುನ್ಸಿಪಲ್ ಕಾರ್ಪೊರೇಷನ್‌ನಲ್ಲಿರುವ ಪಶುವೈದ್ಯಕೀಯ ಇಲಾಖೆಗೆ ಸುಮಿತ್ ಅವರನ್ನು ಸೆಪ್ಟೆಂಬರ್ 23 ರಂದು ವಿಚಾರಣೆಗೆ ಕರೆಯಲಾಗಿದೆ. ಸಾಕು ನಾಯಿಗಳಿಗೆ ನೋಂದಣಿ ಮಾಡಿಸಿ ಲಸಿಕೆ ಹಾಕದಿದ್ದರೆ ನಿಯಮಾನುಸಾರ ದಂಡ ಸೇರಿದಂತೆ ಇತರೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.