Karnataka – ರೈತರಿಂದ PAY FARMER ಅಭಿಯಾನ
ಮಂಡ್ಯ : ರಾಜ್ಯದಲ್ಲಿ ಕಾಂಗ್ರೆಸ್ ನ ಪೇ ಸಿಎಂ ಪೋಸ್ಟರ್ ಅಭಿಯಾನ ಭಾರಿ ಸದ್ದು ಮಾಡುತ್ತಿದೆ.
ಇತ್ತ ಇದಕ್ಕೆ ತಿರುಗೇಟು ನೀಡಲು ಬಿಜೆಪಿ ಕೈ ಪೇ ಎಂಬ ಅಭಿಯಾನ ಆರಂಭಿಸಿದೆ.
ಈ ಪೇ ರಾಜಕೀಯ ರಾಜ್ಯದಾದ್ಯಂತ ಜೋರಾಗಿದೆ.
ಈ ನಡುವೆ ರೈತರಿಂದ PAY FARMER ಅಭಿಯಾನ ಆರಂಭವಾಗಿದೆ.
ರಾಜಕೀಯ ನಾಯಕರೇ ನೀವೆಲ್ಲ ಒಂದೇ ನಾಣ್ಯದ ಎರಡು ಮುಖಗಳೇ.
ನೀವು ಯಾರೇ ಅಧಿಕಾರಕ್ಕೆ ಬಂದರು ರೈತರ ಕಷ್ಟಕಾರ್ಪಣ್ಯ ಬಗೆಹರಿಸುವ ಮನಸ್ಸಿಲ್ಲ.

ಕೆಲವರು ಅಧಿಕಾರಕ್ಕೆರಲು ಸರ್ಕಸ್ ಮಾಡ್ತಿದ್ದೀರೀ. ಇನ್ನು ಕೆಲವರು ಅಧಿಕಾರ ಉಳಿಸಿಕೊಳ್ಳಲು ಸರ್ಕಸ್ ಮಾಡ್ತಿದ್ದೀರಿ.
ಇವರಿಗೆ ಮತ ಹಾಕಿದ ರೈತರು ಮಾತ್ರ ಸಂಕಷ್ಟ ಜೀವನ ನಡೆಸ್ತಿದ್ದಾರೆ.
ಮೊದಲು ರೈತ ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ಕೊಡಿ ಎಂದು ರೈತರಿಂದ PAY FARMER ಎಂದು ಅಭಿಯಾನ ಆರಂಭವಾಗಿದೆ.
ಒಂದು ಟನ್ ಕಬ್ಬಿಗೆ 4500 ರೂ ನಿಗದಿ ಮಾಡುವಂತೆ ರೈತರು ಒತ್ತಾಯ ಮಾಡಿದ್ದಾರೆ.








