india-playing-11-prediction | ಕಾಂಗೂರು ಬೇಟೆಗೆ ಲಯನ್ಸ್ ರೆಡಿ
ತವರಿನಲ್ಲಿ ನಡೆಯುತ್ತಿರುವ ಭಾರತ – ಆಸ್ಟ್ರೇಲಿಯಾ ನಡುವಿನ ಟಿ 20 ಸರಣಿ ಅಂತಿಮ ಹಂತಕ್ಕೆ ಬಂದು ನಿಂತಿದೆ. ನಾಗ್ಪುರದಲ್ಲಿ ನಡೆದ ಮೊದಲ ಟಿ 20 ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಆರು ವಿಕೆಟ್ ಗಳಿಂದ ಗೆಲುವು ಸಾಧಿಸಿತ್ತು. ಇದಾದ ಬಳಿಕ ನಡೆದ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ ಜಯ ಸಾಧಿಸಿದೆ. ಆ ಮೂಲಕ ಮೂರು ಪಂದ್ಯಗಳ ಟಿ 20 ಸರಣಿಯಲ್ಲಿ ಉಭಯ ತಂಡಗಳು ತಲಾ ಒಂದೊಂದು ಪಂದ್ಯ ಗೆದ್ದು ಸಮಬಲ ಸಾಧಿಸಿವೆ. ಹೀಗಾಗಿ ಇಂದು ಹೈದರಾಬಾದ್ ನಲ್ಲಿ ನಡೆಯಲಿರುವ ಅಂತಿಮ ಪಂದ್ಯ ಸರಣಿ ವಿಜೇತರನ್ನು ನಿರ್ಧಾರ ಮಾಡಲಿದೆ.
ಈ ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದೆ. ಈ ನಿರ್ಣಾಯಕ ಪಂದ್ಯಕ್ಕಾಗಿ ಉಭಯ ತಂಡಗಳಲ್ಲಿ ಕೆಲವೊಂದು ಬದಲಾವಣೆಗಳನ್ನು ನಿರೀಕ್ಷೆ ಮಾಡಲಾಗಿದೆ. ಅಂತಿಮ ತಂಡದಲ್ಲಿ ಯಾರು ಅವಕಾಶ ಪಡೆಯುತ್ತಾರೆ ? ಯಾರಿಗೆ ಅವಕಾಶ ಸಿಗುವುದಿಲ್ಲ ಎಂಬ ಚರ್ಚೆ ನಡೆಯುತ್ತಿದೆ.
ನಾವು ಟೀಂ ಇಂಡಿಯಾದ ಬಗ್ಗೆ ಮಾತನಾಡುವುದಾದರೇ ಭಾರತದ ಬ್ಯಾಟಿಂಗ್ ವಿಭಾಗ ಬಲಿಷ್ಠವಾಗಿದೆ. ಮೊದಲ ಪಂದ್ಯದಲ್ಲಿ ಕೆ.ಎಲ್.ರಾಹುಲ್ ಅಬ್ಬರಿಸಿದ್ರೆ, ಎರಡನೇ ಪಂದ್ಯದಲ್ಲಿ ರೋಹಿತ್ ಶರ್ಮಾ ಮಿಂಚಿದ್ದಾರೆ. ಇದರೊಂದಿಗೆ ಆರಂಭಿಕರು ಸೂಪರ್ ಸಾಲಿಡ್ ಲಯದಲ್ಲಿದ್ದಾರೆ.
ಮೂರನೇ ಕ್ರಮಾಂಕದಲ್ಲಿ ಬರುವ ವಿರಾಟ್ ಕೊಹ್ಲಿ ಈ ಸರಣಿಯಲ್ಲಿ ಸದ್ದು ಮಾಡಿಲ್ಲ. ಆದರೂ ನಿರ್ಣಾಯಕ ಪಂದ್ಯದಲ್ಲಿ ವಿರಾಟ್ ತುಂಬಾ ಡೆಂಜರಸ್ ಅನ್ನೋದನ್ನ ಮರೆಯುವ ಹಾಗಿಲ್ಲ. ನಾಲ್ಕನೇ ಕ್ರಮಾಂಕದಲ್ಲಿ ಬರುವ ಸೂರ್ಯ ಕುಮಾರ್ ಯಾದವ್ ಕ್ರೀಸ್ ಗೆ ಕಚ್ಚಿ ನಿಂತರೇ ಎದುರಾಳಿಗೆ ಮಾರಿಹಬ್ಬ ಕಟ್ಟಿಟ್ಟಬುತ್ತಿ. ಇವರ ಜೊತೆಗೆ ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್ ಕೂಡ ಗುಡುಗು – ಸಿಡಿಲಿನ ಆಟವನ್ನಾಡುವ ಸಾಮರ್ಥ್ಯವನ್ನ ಹೊಂದಿದ್ದಾರೆ.
ಜಡೇಜಾ ಸ್ಥಾನದಲ್ಲಿ ಅವಕಾಶ ಪಡೆದಿರುವ ಅಕ್ಷರ್ ಪಟೇಲ್ ಬೌಲಿಂಗ್ ನಲ್ಲಿ ಮಿಂಚುತ್ತಿದ್ದು, ಬ್ಯಾಟಿಂಗ್ ತಾಕತ್ತು ತೋರಿಸಬೇಕಾಗಿದೆ. ಯಾವುದೇ ರೀತಿ ನೋಡಿಕೊಂಡಿರೂ ಟೀಂ ಇಂಡಿಯಾದ ಬ್ಯಾಟಿಂಗ್ ಸೂಪರ್ ಸಾಲಿಡ್ ಅನ್ನೋದ್ರಲ್ಲಿ ಎರಡು ಮಾತಿಲ್ಲ.

ಆದ್ರೆ ಬೌಲಿಂಗ್, ಫೀಲ್ಡಿಂಗ್ ನಲ್ಲಿ ಟೀಂ ಇಂಡಿಯಾ ಹಿನ್ನಡೆ ಅನುಭವಿಸುತ್ತಿದೆ. ಎರಡೂ ಪಂದ್ಯಗಳಲ್ಲಿ ಫೀಲ್ಡಿಂಗ್ ನಲ್ಲಿ ವಿರಾಟ್, ರಾಹುಲ್ ಸೇರಿದಂತೆ ಹಲವರು ಕ್ಯಾಚ್ ಗಳನ್ನು ಬಿಟ್ಟಿದ್ದಾರೆ. ಬೌಲಿಂಗ್ ನಲ್ಲಿ ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್ ದುಬಾರಿ ಆಗುತ್ತಿದ್ದಾರೆ.
ಈ ನಡುವೆ ಸ್ಟಾರ್ ಪೇಸರ್ ಜಸ್ ಪ್ರಿತ್ ಬುಮ್ರಾ ತಂಡಕ್ಕೆ ವಾಪಸ್ ಆಗಿರುವುದರಿಂದ ಟೀ ಇಂಡಿಯಾಗೆ ಆನೆಬಲ ಬಂದಿದೆ. ಅಕ್ಷರ್ ಪಟೇಲ್ ಕೂಡ ವಿಕೆಟ್ ಗಳನ್ನು ಪಡೆಯುತ್ತಿದ್ದಾರೆ.
ಇಂದಿನ ಪಂದ್ಯಕ್ಕಾಗಿ ತಂಡದಲ್ಲಿ ಒಂದೆರೆಡು ಬದಲಾವಣೆಗಳು ಆಗುವ ಸಾಧ್ಯತೆಗಳಿದ್ದು, ಹರ್ಷಲ್ ಪಟೇಲ್ ಸ್ಥಾನದಲ್ಲಿ ಭುವನೇಶ್ವರ್ ಕುಮಾರ್ ತಂಡಕ್ಕೆ ವಾಪಸ್ ಆಗಲಿದ್ದಾರೆ. ಅದೇ ರೀತಿ ಪಂತ್ ಸ್ಥಾನದಲ್ಲಿ ದೀಪಕ್ ಚಹಾರ್ ಸ್ಥಾನ ಪಡೆಯಬಹುದು. ಮತ್ತೊಂದು ಕಡೆ ರನ್ ಗಳನ್ನು ಬಿಟ್ಟುಕೊಡುತ್ತಿರುವ ಚಹಾಲ್ ಅವರ ಸ್ಥಾನದಲ್ಲಿ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಗೆ ಅವಕಾಶ ಸಿಗಬಹುದು.
ಒಟ್ಟಾರೆ ಟೀಂ ಇಂಡಿಯಾದ ಅಂತಿಮ ತಂಡ ಹೀಗಿರಲಿದೆ
ಕೆ.ಎಲ್.ರಾಹುಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸೂರ್ಯ ಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ದೀಪಕ್ ಚಹಾರ್, ಭುವನೇಶ್ವರ್ ಕುಮಾರ್, ಜಸ್ ಪ್ರಿತ್ ಬುಮ್ರಾ, ಅಶ್ವಿನ್








