Deepti Sharma : ಚರ್ಚೆಗೆ ಗ್ರಾಸವಾದ ಚಾರ್ಲಿ ಡೀನ್ ಮಂಕಾಡಿಂಗ್ ರನ್ ಔಟ್
ನಿನ್ನೆ ನಡೆದ ಇಂಗ್ಲೆಂಡ್ ಭಾರತ ನಡುವಿನ ಮಹಿಳೆಯರ ಏಕದಿನದ ಪಂದ್ಯದಲ್ಲಿ ಟೀಂ ಇಂಡಿಯಾದ ಸ್ಪಿನ್ನರ್ ದೀಪ್ತಿ ಶರ್ಮಾ ಮಾಡಿದ ರನ್ ಔಟ್ ಮತ್ತೆ ಚರ್ಚ್ಗೆ ಗೆ ಗ್ರಾಸವಾಗಿದೆ.
ಕ್ರಿಕೆಟ್ ಲೋಕದ ಹಲವು ದಿಗ್ಗಜರು ಇದು ಕ್ರೀಡಾ ಸ್ಪೂರ್ತಿಗೆ ವಿರುದ್ಧ ಎಂದು ಟೀಕಿಸುತ್ತಿದ್ದಾರೆ. ಏಕೆಂದರೆ, ದೀಪ್ತಿ ಆಂಗ್ಲ ಬ್ಯಾಟ್ಸ್ ವುಮೆನ್ ಚಾರ್ಲಿ ಡೀನ್ ಅವರನ್ನು ಮಂಕಾಡಿಂಗ್ ರನೌಟ್ ಮಾಡಿದ್ದರು. ಅದೂ ಟೀಮ್ ಇಂಡಿಯಾ ಗೆಲುವಿಗೆ ಡೀನ್ ಅಡ್ಡಿಯಾಗುತ್ತಿದ್ದ ಸಂದರ್ಭದಲ್ಲಿ….
ಇಂಗ್ಲೆಂಡ್ ಗೆಲುವಿಗೆ 17 ರನ್ ಅಗತ್ಯವಿದ್ದಾಗ ಒಂದು ತುದಿಯಲ್ಲಿ ವಿಕೆಟ್ ಗಳು ಉದುರುತ್ತಿದ್ದರೂ ಚಾರ್ಲಿ ಡೀನ್ ಮಾತ್ರ ಭದ್ರವಾಗಿ ನೆಲಯೂರಿದ್ದರು. 43 ಓವರ್‌ಗಳ ನಂತರ ತಂಡದ ಸ್ಕೋರ್ 152/9 ಗಳಿಸಿದ್ದರು. ಆತಿಥೇಯರು ಇನ್ನೂ 18 ರನ್ ಗಳಿಸಬೇಕಾಗಿದ್ದಾಗ ಡೀನ್ 46 ರನ್ ಗಳಿಸಿ ಅಜೇಯರಾಗುಳಿದಿದ್ದರು.
44ನೇ ಓವರ್‌ನಲ್ಲಿ ದೀಪ್ತಿ ಶರ್ಮಾ ಮತ್ತು ಡೀನ್ ಮೊದಲ ಎಸೆತದಲ್ಲಿ ಸಿಂಗಲ್ ಗಳಿಸಿದರು. ಈಗ ಡೇವಿಸ್ ಸ್ಟ್ರೈಕ್ ನಲ್ಲಿದ್ದರೆ ಡೀನ್ ಮತ್ತೊಂದು ತುದಿಯಲ್ಲಿದ್ದರು. ಬೌಲಿಂಗ್ ಮಾಡುವ ಮುನ್ನವೇ ಡೀನ್ ಕ್ರೀಸ್ ಬಿಟ್ಟಿದ್ದರಿಂದ ದೀಪ್ತಿ ಮಂಕಡಿಂಗ್ ಮೂಲಕ ಔಟ್ ಮಾಡಿಬಿಟ್ಟಿದ್ದರು.
ಈ ರೀತಿ ಔಟಾಗಿದ್ದರಿಂದ ಭಾವನೆಗಳನ್ನ ನಿಯಂತ್ರಿಸಲಾಗದೇ ಚಾರ್ಲಿ ಕಣ್ಣೀರು ಹಾಕುತ್ತಲೇ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು. ಇಂಗ್ಲೆಂಡ್ ಸೋಲನುಭವಿಸಿತು.








