Virat kohli – ಹೈದರಾಬಾದ್ ಮೈದಾನ ಕೊಹ್ಲಿ ಕೋಟೆ !
ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರ ಫೇವರೇಟ್ ಮೈದಾನಗಳಲ್ಲಿ ಉಪ್ಪಾಲ್ ಸ್ಟೇಡಿಯಂ ಕೂಡ ಒಂದು.
ಈ ಗ್ರೌಂಡ್ ನಲ್ಲಿ ವಿರಾಟ್ ಕೊಹ್ಲಿ ಮೂರು ಮಾದರಿ ಕ್ರಿಕೆಟ್ ನಲ್ಲಿ ಒಟ್ಟಾರೆ 8 ಪಂದ್ಯಗಳನ್ನಾಡಿದ್ದಾರೆ.
ಇದರಲ್ಲಿ ಒಂದು ಸೆಂಚೂರಿ, ಮೂರು ಅರ್ಧಶತಕಗಳೊಂದಿಗೆ 607 ರನ್ ಗಳಿಸಿದ್ದಾರೆ.
2019 ರಲ್ಲಿ ಕೊನೆಯದಾಗಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಟಿ 20 ಪಂದ್ಯದಲ್ಲಿ 94 ರನ್ ಗಳನ್ನು ಗಳಿಸಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಇನ್ನು ಸದ್ಯ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ವಿರಾಟ್ ಕೊಹ್ಲಿ ಅಷ್ಟಾಗಿ ಮಿಂಚಿಲ್ಲ.
ಮೊದಲ ಟಿ 20 ಪಂದ್ಯದಲ್ಲಿ ಎರಡು ರನ್ ಗಳಿಸಿದ್ದು, ಎರಡನೇ ಪಂದ್ಯದಲ್ಲಿ 11 ರನ್ ಗಳಿಸಿದ್ದರು.
ಮತ್ತೊಂದು ಕಡೆ ಈ ಮೈದಾನ ಪ್ರಸ್ತುತ ಕ್ಯಾಪ್ಟನ್ ರೋಹಿತ್ ಶರ್ಮಾ ಅವರಿಗೆ ಅಷ್ಟಾಗಿ ಕೂಡಿ ಬಂದಿಲ್ಲ.
ಈ ಗ್ರೌಂಡ್ ನಲ್ಲಿ ರೋಹಿತ್ ಶರ್ಮಾ ಮೂರು ಪಂದ್ಯಗಳನ್ನಾಡಿದ್ದು, ಕೇವಲ 46 ರನ್ ಗಳಿಸಿದ್ದಾರೆ.
ಆಸೀಸ್ ಕ್ಯಾಪ್ಟನ್ ಆರೋನ್ ಫಿಂಚ್ ಗೂ ಈ ಪಿಚ್ ಆಗಿಬಂದಿಲ್ಲ.








