Suryakumar yadav | ಕ್ರಿಕೆಟ್ ಮುಂದಿನ ಸೂಪರ್ ಸ್ಟಾರ್ ಸೂರ್ಯ ಭಾಯ್
ಟೀಂ ಇಂಡಿಯಾದ ವಿಧ್ವಂಸಕ ಆಟಗಾರ ಸೂರ್ಯ ಕುಮಾರ್ ಯಾದವ್ ಸದ್ಯ ಭೀಕರ ಫಾರ್ಮ್ ನಲ್ಲಿದ್ದಾರೆ.
ಹೈದರಾಬಾದ್ ನಲ್ಲಿ ನಡೆದ ಆಸೀಸ್ ವಿರುದ್ಧದ ಮೂರನೇ ಟಿ 20 ಪಂದ್ಯದಲ್ಲಿ ಸೂರ್ಯ ಆಕಾಶವೇ ಮಿತಿ ಎಂಬಂತೆ ಅಬ್ಬರಿಸಿದರು.
ಕೇವಲ 36 ಎಸೆತಗಳಲ್ಲಿ 5 ಬೌಂಡರಿ, 5 ಸಿಕ್ಸರ್ ಗಳ ಸಹಾಯದೊಂದಿಗೆ 69 ರನ್ ಗಳಿಸಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಸದ್ಯ ಟೀಂ ಇಂಡಿಯಾದ ಪರ ಅದ್ಭತವಾಗಿ ಆಡುತ್ತಿರುವ ಸೂರ್ಯ ಕುಮಾರ್ ಯಾದವ್ ಬಗ್ಗೆ ಪಾಕಿಸ್ತಾನ್ ಕ್ರಿಕೆಟ್ ತಂಡದ ಮಾಜಿ ಆಟಗಾರ ಡಾನೀಷ್ ಕನೆರಿಯಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮುಂಬರುವ ವರ್ಷಗಳಲ್ಲಿ ವಿರಾಟ್ ಕೊಹ್ಲಿ, ಬಾಬರ್ ಅಜಾಂ ರಂತಹ ಸ್ಟಾರ್ ಆಟಗಾರರನ್ನು ಸೂರ್ಯ ಮೀರಿಸುತ್ತಾರೆ ಎಂದು ಕನೆರಿಯಾ ಅಭಿಪ್ರಾಯಪಟ್ಟಿದ್ದಾರೆ.
ಪ್ರಸ್ತುತ ಸೂರ್ಯ ಕುಮಾರ್ ಯಾದವ್ ವಿಶ್ವದ ಅತ್ಯುತ್ತಮ ಬ್ಯಾಟರ್ ಗಳಲ್ಲಿ ಒಬ್ಬರು ಎಂದು ಕೊಂಡಾಡಿದ್ದಾರೆ.
ಅಂದಹಾಗೆ ಸೂರ್ಯ ಕುಮಾರ್ ಯಾದವ್ ಟಿ 20 ರ್ಯಾಂಕಿಂಗ್ಸ್ ನಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

ನಾನು ಕಳೆದ ಕೆಲವು ದಿನಗಳಿಂದ ಇದನೇ ಹೇಳುತ್ತಿದ್ದೇನೆ. 360 ಡಿಗ್ರಿಯಲ್ಲಿ ಸೂರ್ಯ ಹೊಡೆಯುವ ಶಾಟ್ ಗಳು ಅದ್ಭುತವಾಗಿವೆ.
ಆತ ಕ್ರೀಸ್ ನಲ್ಲಿದ್ದರೇ ಎದುರಾಳಿ ಬೌಲರ್ ಗಳಿಗೆ ಭಯ ಹುಟ್ಟುತ್ತದೆ. ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟಿ 20 ಪಂದ್ಯದಲ್ಲಿ ಸೂರ್ಯ ಕ್ಲಾಸ್ ಇನ್ನಿಂಗ್ಸ್ ಆಡಿದರು.
ಸೂರ್ಯ ಮುಂಬರುವ ದಿನಗಳಲ್ಲಿ ಖಂಡಿತವಾಗಿ ದೊಡ್ಡ ಸ್ಟಾರ್ ಆಗುತ್ತಾನೆ ಎಂದು ಕನೆರಿಯಾ ಭವಿಷ್ಯ ನುಡಿದಿದ್ದಾರೆ.
ಸೂರ್ಯ ಕುಮಾರ್ ಬ್ಯಾಟಿಂಗ್ ಮಾಡುವ ವಿಧಾನ ದಿಗ್ಗಜ ಬ್ಯಾಟರ್ ಗಳನ್ನು ಮರೆಸುವಂತೆ ಮಾಡುತ್ತಿದೆ.
ಕೊಹ್ಲಿ, ಬಾಬರ್ ಇಬ್ಬರೂ ಅದ್ಭುತ ಆಟಗಾರರು.
ಆದ್ರೆ ಮುಂದಿನ ದಿನಗಳಲ್ಲಿ ಈ ಇಬ್ಬರನ್ನೂ ಸೂರ್ಯ ಮೀರಿಸಿ ವಿಶ್ವ ಕ್ರಿಕೆಟ್ ನಲ್ಲಿ ತಮ್ಮದೇಯಾದ ಛಾಪು ಮೂಡಿಸಲಿದ್ದಾರೆ ಎಂದು ಕನೆರಿಯಾ ಹೇಳಿದ್ದಾರೆ.









