Mysore | ಮೈಸೂರು ಯುವ ದಸರಾ – ತಲೆ ಎತ್ತಿ ನಿಂತ 50 ಅಡಿ ಉದ್ದದ ಕಟೌಟ್
ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಸಂಜೆ 6.30ಕ್ಕೆ ಯುವ ದಸರಾ ಕಾರ್ಯಕ್ರಮದಲ್ಲಿ ನಡೆಯಲಿದೆ.
ಡಾ.ಪುನೀತ್ ರಾಜ್ ಕುಮಾರ್ ಅವರ ಪತ್ನಿ ಅಶ್ವಿನಿ ಅವರು ಉದ್ಘಾಟಿಸಲಿದ್ದಾರೆ.
ಈ ಹಿನ್ನೆಲೆಯಲ್ಲಿ ಮಹಾರಾಜ ಕಾಲೇಜು ಮೈದಾನ ಯುವ ದಸರಾ ವೇದಿಕೆಯ ಮುಂಭಾಗ ಅಪ್ಪು ಡ್ಯಾನ್ಸ್ ಮಾಡುತ್ತಿರುವ 50 ಅಡಿ ಉದ್ದದ ಬೃಹತ್ ಕಟೌಟ್ ನಿರ್ಮಾಣ ಮಾಡಲಾಗಿದೆ.

ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿ ಕಲಾವಿದ ಶ್ರೀರಂಗ ಬೃಹತ್ ಕಟೌಟ್ ನಿರ್ಮಿಸಿದ್ದಾರೆ.
ನೆಚ್ಚಿನ ನಟನ ಕಟೌಟ್ ಬಳಿ ಅಭಿಮಾನಿಗಳು ಬಂದು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ.
ಅಂದಹಾಗೆ ಇಂದಿನಿಂದ ಆರಂಭವಾಗಲಿರುವ ದಸರಾ ಕಾರ್ಯಕ್ರಮದಲ್ಲಿ ಮೊದಲ ದಿನವೇ ಅಪ್ಪು ನಮನ ಕಾರ್ಯಕ್ರಮ ನಡೆಯಲಿದೆ.
ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್, ಗಾಯಕರಾದ ಕುನಾಲ್ ಗಾಂಜಾವಾಲ, ವಿಜಯ್ ಪ್ರಕಾಶ್ ಗಾಯನವಿರಲಿದೆ.









