ಈಗ ಪ್ರಧಾನಿಗಿಂತ ದೊಡ್ಡವರು ಯಾರು ಇಲ್ಲ… ಧೋನಿ ಪತ್ನಿ ಸಾಕ್ಷಿ ಸಿಂಗ್ ಈ ರೀತಿ ಹೇಳಿದ್ದು ಯಾಕೆ ?
ಸದ್ಯ ವಿಶ್ವದಲ್ಲಿ ಅತೀ ಹೆಚ್ಚು ಚಾಲ್ತಿಯಲ್ಲಿರುವ ಪದ ಅಂದ್ರೆ ಅದು ಕೊರೋನಾ ವೈರಸ್. ಪ್ರತಿಯೊಬ್ಬರ ಬಾಯಲ್ಲೂ ಕೊರೋನಾ ವೈರಸ್ ಅನ್ನೋ ಪದ ನಲಿದಾಡುತ್ತಿರುತ್ತದೆ. ಚೀನಾ ಹುಟ್ಟಿ ಹಾಕಿರುವ ಈ ಕೊರೋನಾ ವೈರಸ್ ರಕ್ತ ಬೀಜಾಸುರನಂತೆ ಎಲ್ಲೆಲ್ಲೂ ಹರಿದಾಡುತ್ತಿದೆ. ಹೀಗಾಗಿ ಮನೆಯಿಂದ ಹೊರಗಡೆ ಬರಲು ಜನ ಭಯ ಪಡುತ್ತಿದ್ದಾರೆ. ಆದ್ರೆ ಮನೆಯಲ್ಲೇ ಕುಳಿತುಕೊಂಡು ಜೀವನ ಸಾಗಿಸಲು ಸಾಧ್ಯವಿಲ್ಲ ಎಂಬುದನ್ನು ಅರಿತುಕೊಂಡಿರುವ ಜನರು ಈಗ ಕೊರೋನಾ ಜೊತೆ ಬದುಕು ಅಂತ ಅಂದುಕೊಂಡಿದ್ದಾರೆ.
ಭಾರತದಲ್ಲಿ ಕಳೆದ ಎರಡು ತಿಂಗಳುಗಳಿಂದ ಭಾರತದಲ್ಲಿ ಲಾಕ್ಡೌನ್ ಮಾಡಲಾಗಿದ್ದು, ಈಗ ಹಂತ ಹಂತವಾಗಿ ಸಡಿಲ ಮಾಡಲಾಗುತ್ತಿದೆ. ಈ ಲಾಕ್ ಡೌನ್ ಟೈಮ್ ನಲ್ಲಿ ನಮ್ಮ ಕ್ರಿಕೆಟಿಗರು ಸಾಮಾಜಿಕ ಜಾಲ ತಾಣದಲ್ಲಿ ಸಾಕಷ್ಟು
ಬಿಝಿಯಾಗಿರುತ್ತಿದ್ದಾರೆ. ಆದ್ರೆ ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸಾಮಾಜಿಕ ಜಾಲ ತಾಣದಿಂದ ದೂರವೇ ಉಳಿದುಕೊಂಡಿದ್ದಾರೆ. ಆಗೊಮ್ಮೆ ಹೀಗೊಮ್ಮೆ ಕೆಲವೊಂದು ವಿಡಿಯೋಗಳನ್ನು ಹಂಚಿಕೊಂಡಿರುವುದನ್ನು ಬಿಟ್ರೆ ಧೋನಿ ಮೌನಕ್ಕೆ ಜಾರಿದ್ದಾರೆ.
ಆದ್ರೆ ಧೋನಿ ಪತ್ನಿ ಸಾಕ್ಷಿ ಸಿಂಗ್ ಅವರು ಸಾಮಾಜಿಕ ಜಾಲ ತಾಣದಲ್ಲಿ ಸದಾ ಸುದ್ದಿಯಲ್ಲಿದ್ದುಕೊಂಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಸಾಮಾಜಿಕ ಜಾಲ ತಾಣದಲ್ಲಿ ಸಾಕ್ಷಿ ಸಿಂಗ್ ಧೋನಿ ಅಭಿಮಾನಿಗಳ ಪ್ರಶ್ನೆಗೆ ಧೋನಿ ಪರವಾಗಿ ಉತ್ತರ ನೀಡುತ್ತಿದ್ದಾರೆ. ಆದ್ರೆ ಧೋನಿ ಯಾಕೆ ಸಾಮಾಜಿಕ ಜಾಲ ತಾಣದಿಂದ ದೂರವಿದ್ದಾರೆ ಅನ್ನೋ ಪ್ರಶ್ನೆಗೆ ಉತ್ತರ ಕೂಡ ಕೊಟ್ಟಿದ್ದಾರೆ.
ಸದ್ಯ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರೇ ದೊಡ್ಡವರು. ಅವರಿಗಿಂತ ದೊಡ್ಡವರು ಯಾರು ಇಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಏನಾದ್ರೂ ಹೇಳಿದ್ರೆ ಅದಕ್ಕೆ ತಕ್ಕಂತೆ ಜನ ಕೂಡ ಸ್ಪಂದಿಸುತ್ತಾರೆ. ಹೀಗಾಗಿ ಧೋನಿ ಸಾಮಾಜಿಕ ಜಾಲ ತಾಣದಲ್ಲಿ ಲೈವ್ಗೆ ಬರಬೇಕಾದ ಅಗತ್ಯವಿಲ್ಲ. ಅದನ್ನು ಧೋನಿ ಬಲವಾಗಿ ನಂಬಿದ್ದಾರೆ ಅಂತ ಸಾಕ್ಷಿ ಸಿಂಗ್ ಹೇಳಿದ್ದಾರೆ.
ಆದ್ರೆ ಧೋನಿ ಸಾಮಾಜಿಕ ಜಾಲ ತಾಣದಿಂದ ಅಂತರ ಕಾಯ್ದುಕೊಳ್ಳಲು ಇದು ಸರಿಯಾದ ಕಾರಣ ಅಂತ ಅನ್ನಿಸುತ್ತಿಲ್ಲ. ಯಾಕಂದ್ರೆ ಧೋನಿ ಒಂದು ವೇಳೆ ನೇರ ಪ್ರಸಾರ ಕಾರ್ಯಕ್ರಮ ಅಥವಾ ಸಾಮಾಜಿಕ ಜಾಲ ತಾಣದಲ್ಲಿ ಸಕ್ರೀಯವಾಗಿರುತ್ತಿದ್ರೆ ಅವರ
ಮೇಲೆ ಹಲವಾರು ಪ್ರಶ್ನೆಗಳನ್ನು ಅಭಿಮಾನಿಗಳು ಕೇಳುತ್ತಿದ್ದರು. ಮುಖ್ಯವಾಗಿ ಅವರ ಕ್ರಿಕೆಟ್ ಭವಿಷ್ಯದ ಬಗ್ಗೆ. ಬಹುಶಃ ಧೋನಿ ಇದೇ ಕಾರಣದಿಂದ ತಮ್ಮ ಅಭಿಮಾನಿಗಳಿಂದ ದೂರ ಉಳಿದಿರಬಹುದು. ಏನೇ ಆಗ್ಲಿ, ಧೋನಿ ಇದೀಗ ಮನೆಯಲ್ಲಿ ಹಾಯಾಗಿ ಬದುಕು ಕಳೆಯುತ್ತಿದ್ದಾರೆ. ಪ್ರತಿ ದಿನ ಕ್ರಿಕೆಟ್, ಜಾಹಿರಾತು ಶೂಟಿಂಗ್ ಸೇರಿದಂತೆ ನಾನಾ ಕೆಲಸಗಳಲ್ಲಿ ಬಿಝಿಯಾಗಿರುತ್ತಿದ್ದ ಧೋನಿ ಮನೆಯಲ್ಲಿ ತಮ್ಮ ಮಗಳು, ಕುಟುಂಬದ ಜೊತೆ ನೆಮ್ಮದಿಯಾಗಿದ್ದಾರೆ.








