ಅಗ್ಗದ ಬೆಲೆ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್…
ಭಾರತದಲ್ಲೇ ಅತ್ಯಂತ ಅಗ್ಗದ ಬೆಲೆಗೆ ಎಲೆಕ್ಟ್ರಿಕ್ ಕಾರುಗಳನ್ನ ಬಿಡುಗಡೆ ಮಾಡಲು ಟಾಟಾ ಮೋಟಾರ್ಸ್ ಮುಂದಾಗಿದೆ. ಟಾಟಾ ಮೋಟಾರ್ಸ್ ನಿನ್ನೆ ದಿನ ತನ್ನ ಜನಪ್ರಿಯ ಮಾಡೆಲ್ ಟಾಟಾ ಟಿಯಾಗೊದ EV ರೂಪಾಂತರವನ್ನು ಅನಾವರಣ ಮಾಡಿದೆ. ಕಾರಿನ ಆರಂಭಿಕ ಬೆಲೆ 8.49 ಲಕ್ಷ ರೂ. ಇದು ದೇಶದ ಅತ್ಯಂತ ಅಗ್ಗದ ಎಲೆಕ್ಟ್ರಿಕ್ ಕಾರು ಎಂಬ ಹೆಸರಿಗೆ ಪಾತ್ರವಾಗಿದೆ, ಈ ಎಲೆಕ್ಟ್ರಿಕಲ್ ಗಾಡಿ ಒಂದೇ ಚಾರ್ಜ್ನಲ್ಲಿ 315 ಕಿಮೀ ಮೈಲೇಜ್ ನೀಡಲಿದೆ. ಇದರ ಬುಕಿಂಗ್ 10 ಅಕ್ಟೋಬರ್ 2022 ರಿಂದ ಪ್ರಾರಂಭವಾಗಲಿದ್ದು, ಜನವರಿ 2023 ಕಾರು ಡಿಲವರಿಗೆ ಸಿಗಲಿದೆ. .
ಆಟೋ ಮೊಬೈಲ್ ದೈತ್ಯ ಈಗಾಗಲೇ ಟಾಟಾ ನೆಕ್ಸಾನ್ ಇವಿ ಮತ್ತು ಟಾಟಾ ಟಿಗೊರ್ ಇವಿಯಂತಹ ಮಾದರಿಗಳೊಂದಿಗೆ ದೇಶದಲ್ಲಿ ಇವಿ ಕಾರುಗಳನ್ನ ಬಿಡುಗಡೆ ಮಾಡಿದೆ. ಟಾಟಾ ಟಿಯಾಗೊ ಇವಿ ವಿಭಾಗದಲ್ಲಿ ಭಾರತದ ಮೊದಲ ಪ್ರೀಮಿಯಂ ಹ್ಯಾಚ್ಬ್ಯಾಕ್ ಆಗಿದೆ. DC ಫಾಸ್ಟ್ ಚಾರ್ಜರ್ನೊಂದಿಗೆ Tiago ಬ್ಯಾಟರಿಯನ್ನ 80% ಚಾರ್ಜ್ ಮಾಡಲು ಕೇವಲ 57 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.
Tiago 8 ಸ್ಪೀಕರ್ ಸಿಸ್ಟಮ್, ರೈನ್ ಸೆನ್ಸಿಂಗ್ ವೈಪರ್ಗಳು, ಕ್ರೂಸ್ ಕಂಟ್ರೋಲ್, ಪುಶ್ ಬಟನ್ ಸ್ಟಾರ್ಟ್/ಸ್ಟಾಪ್, ಎಲೆಕ್ಟ್ರಿಕ್ ORVM ಗಳಂತಹ ಫೀಚರ್ ಒಳಗೊಂಡಿದೆ. Tiago EV ಭಾರತದಲ್ಲಿ ಸುರಕ್ಷಿತವಾದ ಎಲೆಕ್ಟ್ರಿಕ್ ಕಾರ್ ಆಗಿದ್ದು, 1,60,000 ಕಿಮೀ ವರೆಗೆ ಬ್ಯಾಟರಿ ಮತ್ತು ಮೋಟಾರ್ ವಾರಂಟಿ ಲಭ್ಯವಿರುತ್ತದೆ.
ಟಾಟಾ ಟಿಯಾಗೊ ಇವಿಯಲ್ಲಿ ಎರಡು ಡ್ರೈವಿಂಗ್ ಮೋಡ್ಗಳು ಲಭ್ಯವಿರುತ್ತದೆ. ಈ ಎಲೆಕ್ರಿಕಲ್ ಗಾಡಿ 5.7 ಸೆಕೆಂಡುಗಳಲ್ಲಿ 0 ರಿಂದ 60 kmph ವೇಗವನ್ನ ಹೆಚ್ಚಿಸಕೊಳ್ಳುತ್ತದೆ.
Tata Tiago Electric Car Price 2022 Update; Mileage, Features And Specifications








