Ind v SA: ಆಫ್ರಿಕಾ ಸರಣಿಗೆ ಬುಮ್ರಾ ಬದಲಿಗೆ ಸಿರಾಜ್ ಗೆ ಅವಕಾಶ…
ಬೆನ್ನು ನೋವಿನ ಕಾರಣದಿಂದ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯಿಂದ ನಿಂದ ಹೊರಗುಳಿದಿರುವ ಜಸ್ಪ್ರಿತ್ ಬುಮ್ರಾ ಬದಲಿಗೆ ಬಲಗೈ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಗೆ ಟೀಂ ಇಂಡಿಯಾದಲ್ಲಿ ಅವಕಾಶ ನೀಡಲಾಗಿದೆ. ಈ ಕುರಿತು ಬಿಸಿಸಿಐ ಅಧಿಕೃತವಾಗಿ ಟ್ವೀಟ್ ಮಾಡಿ ತಿಳಿಸಿದೆ.
ಸಿರಾಜ್ ಇದೀಗ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ T20I ಸರಣಿಯಲ್ಲಿ ಜಸ್ಪ್ರೀತ್ ಬುಮ್ರಾ ಬದಲಿಗೆ ಆಡಲಿದ್ದು ತಂಡವನ್ನ ಕೂಡಿಕೊಳ್ಳಲಿದ್ದಾರೆ. ಜಸ್ಪ್ರೀತ್ ಬುಮ್ರಾ ಅವರು ಬೆನ್ನುನೋವಿನ ಕಾರಣದಿಂದ ದಕ್ಷಿಣಾ ಆಫ್ರಿಕಾ ಸರಣಿ ಸೇರಿದಂತೆ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ T20 ವಿಶ್ವಕಪ್ ತಂಡದಿಂದ ಹೊರಬಿದ್ದಿದ್ದಾರೆ.
ಸಿರಾಜ್ ತಂಡದಲ್ಲಿ ಆಯ್ಕೆಯಾಗಿರುವ ಬಗ್ಗೆ ಬಿಸಿಸಿಐ ಶುಕ್ರವಾರ ಮಾಹಿತಿ ನೀಡಿದೆ. 28ರ ಹರೆಯದ ಮೊಹಮ್ಮದ್ ಸಿರಾಜ್ 7 ತಿಂಗಳು ಬಳಿಕ ತಂಡಕ್ಕೆ ಮರಳಿದ್ದಾರೆ. 27 ಫೆಬ್ರವರಿ 2022 ರಂದು ಕೊನೆಯ T20 ಅಂತರಾಷ್ಟ್ರೀಯ ಪಂದ್ಯವನ್ನು ಆಡಿದರು.
ಬುಮ್ರಾ ಗೆ 4-6 ತಿಂಗಳು ಕಾಲ ರೆಸ್ಟ್
ಇನ್ನೂ ಜಸ್ಪ್ರೀತ್ ಬುಮ್ರಾ ಚೇತರಿಸಿಕೊಳ್ಳಲು 4 ರಿಂದ 6 ತಿಂಗಳ ತೆಗೆದುಕೊಳ್ಳುತ್ತದೆ. ಬೆಂಗಳೂರಿನಲ್ಲಿ ನಡೆದ ಅಭ್ಯಾಸದ ವೇಳೆ ಬುಮ್ರಾ ಅವರಿಗೆ ಬೆನ್ನು ನೋವು ಕಾಣಿಸಿಕೊಂಡಿತ್ತು. ನಂತರ ವೈದ್ಯಕೀಯ ತಂಡದ ಆದೇಶದ ಮೇರೆಗೆ ಮೊದಲ ಟಿ20 ಪಂದ್ಯದಿಂದ ಕೈಬಿಡಲಾಯಿತು.
Mohammed Siraj: Siraj replaces Bumrah for last two South Africa T20Is








