Bangalore | ಶೋಕಿಗಾಗಿ ಬೈಕ್ ಕಳ್ಳತನ – ಆರೋಪಿಗಳ ಬಂಧನ
ಬೆಂಗಳೂರು : ಶೋಕಿಗಾಗಿ ಬೈಕ್ ಕಳ್ಳತನ ಮಾಡ್ತಿದ್ದ ಆರೋಪಿಗಳನ್ನು ಬೆಂಗಳೂರಿನ ಸಂಜಯ್ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಸುಹೇಲ್, ನಯಾಜ್ ಬಂಧಿತ ಆರೋಪಿಗಳು.
ಇವರು ನಶೆ ಏರಿಸಿಕೊಂಡು ಸಿಕ್ಕ ಸಿಕ್ಕ ಏರಿಯಾಗೆ ಎಂಟ್ರಿಕೊಟ್ಟು ಯಾವ ಬೈಕ್ ಇಷ್ಟ ಆಗುತ್ತೋ ಆ ಬೈಕನ್ನ ಕದ್ದು ಪರಾರಿಯಾಗುತ್ತಿದ್ದರು.

ಪೆಟ್ರೋಲ್ ಖಾಲಿಯಾಗುವವರೆಗೂ ಬೈಕ್ ನಲ್ಲಿ ಹತ್ತಿ ಸುತ್ತಾಡ್ತಿದ್ರು.
ಪೆಟ್ರೋಲ್ ಖಾಲಿಯಾಗುತ್ತಿದ್ದಂತೆ ಬೈಕ್ ಬಿಟ್ಟು ಅಲ್ಲಿಂದ ಎಸ್ಕೇಪ್ ಆಗುತ್ತಿದ್ದರು.
ಈ ಸಂಬಂಧ ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ಗಳು ದಾಖಲಾಗಿದ್ದು, ಪೊಲೀಸರು ಸದ್ಯ ಆರೋಪಿಗಳಿಂದ 6 ಬೈಕನ್ನ ವಶಕ್ಕೆ ಪಡೆದುಕೊಂಡಿದ್ದಾರೆ.








