C M Ibrahim | ಕಾಂಗ್ರೆಸ್, ಬಿಜೆಪಿ ಚಿಕ್ಕದೊಡ್ಡಪ್ಪನ ಮಕ್ಕಳು
ರಾಯಚೂರು : ಪಿಎಫ್ ಐ ಬ್ಯಾನ್ ವಿಚಾರವಾಗಿ ರಾಜ್ಯದಲ್ಲಿ ನಾನಾ ಚರ್ಚೆಗಳು ನಡೆಯುತ್ತಿವೆ.
ಕಾಂಗ್ರೆಸ್ ನಾಯಕರು ಆರ್ ಎಸ್ ಎಸ್ ಬ್ಯಾನ್ ಬಗ್ಗೆಯೂ ಮಾತನಾಡುತ್ತಿದ್ದಾರೆ. ಇದನ್ನ ಬಿಜೆಪಿ ನಾಯಕರು ಖಂಡಿಸುತ್ತಾ ವಾಗ್ದಾಳಿ ನಡೆಸುತ್ತಿದ್ದಾರೆ.
ಇದೀಗ ಈ ವಿಚಾರವಾಗಿ ರಾಯಚೂರಿನಲ್ಲಿ ಸಿಎಂ ಇಬ್ರಾಹಿಂ ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್, ಬಿಜೆಪಿ ಚಿಕ್ಕದೊಡ್ಡಪ್ಪನ ಮಕ್ಕಳು.
ಚಿದಂಬರಂ, ಮನಮೋಹನ್ ಇದ್ದಾಗ ಆರ್ ಎಸ್ ಎಸ್ ಇರ್ಲಿಲ್ವೊ ? ಆವಾಗ್ಯಾಕೆ ಸಿದ್ದರಾಮಯ್ಯ ಬ್ಯಾನ್ ಮಾಡಿಸ್ಲಿಲ್ಲ. ಆವಾಗ ಪಿಎಫ್ ಐ ಇರ್ಲಲ್ವೊ ಅವಾಗ್ಯಾಕೆ ಬ್ಯಾನ್ ಮಾಡಿಲ್ಲ ಎಂದು ಪ್ರಶ್ನಿಸಿದ್ದಾರೆ.

ಈಗ ಡಾಲರ್ ಮುಂದೆ ರೂಪಾಯಿ ಮೌಲ್ಯ 80 ಆಗಿದೆ. ಪಿಎಫ್ ಐ ಇದ್ರೆ, ಇಲ್ಲದಿದ್ರೆ ಯಾರಿಗೇನು ಲಾಭ ನಷ್ಟ. ಆರ್ ಎಸ್ ಎಸ್, ಪಿಎಫ್ ಐ ತಪ್ಪು ಮಾಡಿದ್ರೆ ಗಲ್ಲಿಗೆ ಹಾಕಿ.
ಏನ್ ಮಾಡ್ಬೇಕಾಗಿತ್ತು ಅಂದ್ರೆ ಹೈ ಕೋರ್ಟ್, ಸುಪ್ರೀಂ ಕೋರ್ಟ್ ಜಡ್ಜ್ ನೇಮಿಸಬೇಕಾಗಿತ್ತು. ಅವರ ತನಿಖಾ ವರದಿ ಆಧರಿಸಿ, ಬ್ಯಾನ್ ಮಾಡಿ ಬೇಕಿತ್ತು ಎಂದು ಹೇಳಿದ್ದಾರೆ.
ಇದೇ ವೇಳೆ ಮಲ್ಲಿಕಾರ್ಜುನ್ ಖರ್ಗೆ ಅಧ್ಯಕ್ಷರಾಗುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇಬ್ರಾಹಿಂ, ಹಾಳೂರಿಗೆ ಉಳಿದವನೇ ಗೌಡ. ಅವರಿಗೆ ಈ ಗತಿ ಬರಬಾರ್ದಿತ್ತು.
ಪ್ರಾದೇಶ ಪಕ್ಷಕ್ಕಿಂದ ಕೆಳಗೆ ಹೋಗಿದೆ. ಖುದ್ದು ಖರ್ಗೆನೆ ಪಾರ್ಲಿಮೆಂಟ್ ಇಲೆಕ್ಷನ್ ಅಲ್ಲಿ ಸೋತಿದ್ದಾರೆ ಎಂದು ಕಿಡಿಕಾರಿದ್ದಾರೆ.








