ನಿಯಮ ಉಲ್ಲಂಘನೆ : 67 ಅಶ್ಲೀಲ ವೆಬ್ ಸೈಟ್ ಗಳು ಬ್ಯಾನ್
ನ್ಯಾಯಾಲಯದ ಆದೇಶದ ಮತ್ತು 2021 ರಲ್ಲಿ ಹೊರಡಿಸಲಾದ ಹೊಸ ಮಾಹಿತ ತಂತ್ರಜ್ಞಾನದ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ 67 ಪೋರ್ನೋಗ್ರಾಫಿಕ್ ಅಶ್ಲೀಲ ವೆಬ್‌ಸೈಟ್‌ಗಳನ್ನು ನಿರ್ಬಂಧಿಸಲು ಕೇಂದ್ರ ಸರ್ಕಾರವು ಇಂಟರ್ನೆಟ್ ಕಂಪನಿಗಳಿಗೆ ಆದೇಶಿಸಿದೆ.
ಪುಣೆ ನ್ಯಾಯಾಲಯದ ಆದೇಶದ ಆಧಾರದ ಮೇಲೆ 63 ವೆಬ್‌ಸೈಟ್‌ಗಳನ್ನು ನಿರ್ಬಂಧಿಸಲು ಮತ್ತು ಉತ್ತರಾಖಂಡ ಹೈಕೋರ್ಟ್‌ನ ಆದೇಶ ಮತ್ತು ನಿರ್ದೇಶನಗಳನ್ನು ಆಧರಿಸಿ 4 ವೆಬ್‌ಸೈಟ್‌ಗಳನ್ನು ನಿರ್ಬಂಧಿಸಲು ಇಂಟರ್ನೆಟ್ ಸೇವಾ ಪೂರೈಕೆದಾರರಿಗೆ ಟೆಲಿಕಾಂ ಇಲಾಖೆ ಇಮೇಲ್‌ಕಳುಹಿಸಿದೆ.
ಸಚಿವಾಲಯದ ಪ್ರಕಾರ, 67 ವೆಬ್‌ಸೈಟ್‌ಗಳಲ್ಲಿ ಲಭ್ಯವಿರುವ ಕೆಲವು ಅಶ್ಲೀಲ ಚಿತ್ರಗಳು ಮಹಿಳೆಯರ ನಮ್ರತೆಗೆ ಕಳಂಕ ತರುತ್ತವೆ ಎನ್ನಲಾಗಿದೆ. ಹಾಗಾಗಿ ಇಂಥಹ ವೆಬ್ ಸೈಟ್ ಮತ್ತು URL ಗಳನ್ನ ತಕ್ಷಣವೇ ತೆಗೆದು ಹಾಕಲು ಟೆಲಿಕಾಂ ಇಲಾಖೆ ಆದೇಶಿಸಿದೆ.
ಈ ಹಿಂದೆ ಕೂಡ 2015 ರಲ್ಲಿ ಭಾರತ ಸರ್ಕಾರ ವಯಸ್ಕರ ವೆಬ್‌ಸೈಟ್‌ಗಳ ಮೇಲೆ ಬ್ಯಾನ್ ಅಸ್ತ್ರವನ್ನು ಪ್ರಯೋಗಿಸಿತ್ತು. ಇದರ ಪರಿಣಾಮ 800 ಅಶ್ಲೀಲ ವೆಬ್‌ಸೈಟ್‌ಗಳನ್ನು ನಿಷೇಧಿಸಿತ್ತು.
Website Ban: Government orders internet companies to block 67 pornographic websites for violating new 2021 IT rules








