ಪಂಜಾಬ್ ರಸ್ತೆ ಅಪಘಾತದಲ್ಲಿ ಕನ್ನಡಿಗ ಯೋಧ ಸಾವು…
ಕರ್ತವ್ಯದಲ್ಲಿರುವಾಗಲೇ ಸಂಭವಿಸಿದ ರಸ್ತೆ ಅಪಘಾತದಲ್ಲಿ ಹಾವೇರಿ ಜಿಲ್ಲೆ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಶೀಲವಂತ ಸೋಮಾಪುರ ಗ್ರಾಮದ ಯೋಧರೊಬ್ಬರು ಪಂಜಾಬಿನಲ್ಲಿ ಮೃತಪಟ್ಟಿದ್ದರೆ.
23 ವರ್ಷದ ಶಿವರಾಜ ಗಂಗಮ್ಮನವರ ಎಂಬುವವರು ಮೃತ ಯೋಧ. 2016ರಲ್ಲಿ ಭಾರತೀಯ ಸೇನೆಗೆ ಸೇರಿದ್ದ ಶಿವರಾಜ ಅವರು, ಪಂಜಾಬಿನ ಬಟಿಂಡಾದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಶನಿವಾರ ರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ಶಿವರಾಜ್ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಯೋಧ ಶಿವರಾಜ್ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ. ಪಂಜಾಬನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಅಪಘಾತಕ್ಕೊಳಗಾಗಿ ವೀರಮರಣ ಹೊಂದಿದ ಹಾವೇರಿ ಜಿಲ್ಲೆಯ ನಮ್ಮ ಶಿಗ್ಗಾಂವಿ ತಾಲೂಕಿನ ಶೀಲವಂತ ಸೋಮಾಪುರದ ವೀರ ಯೋಧ ಶಿವರಾಜ್ ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಅವರ ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಎಂದು ಸಿಎಂ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.
Shivraj, a brave soldier of Shiggavi taluk met his death in an accident while performing duty in Punjab.