C.N. Aswattha Narayana | ಐ.ಟಿ ಕ್ಷೇತ್ರದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ
ಬಿಯಾಂಡ್ ಬೆಂಗಳೂರು– ಹುಬ್ಬಳ್ಳಿ, ಧಾರವಾಡ, ಬೆಳಗಾವಿ 5ಕೆ ವಾಕಥಾನ್ಗೆ ಸಚಿವ ಅಶ್ವಥನಾರಾಯಣ ಚಾಲನೆ
ಹುಬ್ಬಳ್ಳಿ: ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ನಗರದಲ್ಲಿ ಆಯೋಜಿಸಿರುವ ಎರಡು ದಿನಗಳ ಟೆಕ್ಸಿಲರೇಷನ್–2022 ಅಂಗವಾಗಿ, ಬಿಯಾಂಡ್ ಬೆಂಗಳೂರು– ಹುಬ್ಬಳ್ಳಿ, ಧಾರವಾಡ, ಬೆಳಗಾವಿ 5ಕೆ ವಾಕಥಾನ್ಗೆ ಮಾಹಿತಿ ತಂತ್ರಜ್ಞಾನ ಸಚಿವ ಸಿ.ಎನ್. ಅಶ್ವತ್ಥ ನಾರಾಯಣ ಅವರು ಡೆನಿಸನ್ಸ್ ಹೋಟೆಲ್ ಬಳಿ ಸೋಮವಾರ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಸಚಿವರು, ‘ಮಾಹಿತಿ ತಂತ್ರಜ್ಞಾನವು ಇಂದು ಬೀದಿ ವ್ಯಾಪಾರಿಗಳಿಂದ ಹಿಡಿದು ಪ್ರತಿಯೊಬ್ಬರ ಅವಿಭಾಜ್ಯ ಅಂಗವಾಗಿದೆ. ಐ.ಟಿ ಕ್ಷೇತ್ರದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ.
ಎಲ್ಲಾ ಕ್ಷೇತ್ರಗಳಲ್ಲೂ ತಂತ್ರಜ್ಞಾನ ಹಾಸು ಹೊಕ್ಕಾಗಿದೆ. ಇನ್ನಷ್ಟು ಪ್ರಚಾರ ಮಾಡುವ ಉದ್ದೇಶದಿಂದ ಬಿಯಾಂಡ್ ಬೆಂಗಳೂರು ಕಾರ್ಯಕ್ರಮದ ಅಂಗವಾಗಿ ವಾಕಥಾನ್ ಹಮ್ಮಿಕೊಳ್ಳಲಾಗಿದೆ’ ಎಂದು ಹೇಳಿದರು.
ಹೋಟೆಲ್ನಿಂದ್ ಆರಂಭಗೊಂಡ ವಾಕಥಾನ್ ಡಾಲರ್ಸ್ ಕಾಲೊನಿ ಮಾರ್ಗವಾಗಿ ಅಕ್ಷಯ ಕಾಲೊನಿ, ಗೋಕುಲ ರಸ್ತೆಯಲ್ಲಿ ಸಂಚರಿಸಿ ಮತ್ತೆ ಡೆನಿಸನ್ಸ್ಗೆ ಮರಳಿ ಮುಕ್ತಾಯಗೊಂಡಿತು.
ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಸಿಇಒ ಸಂಜೀವ ಗುಪ್ತ, ಅಧಿಕಾರಿಗಳು, ಉದ್ಯಮಿಗಳು ಹಾಗೂ ಸಾರ್ವಜನಿಕರು ವಾಕಥಾನ್ನಲ್ಲಿ ಭಾಗಿಯಾಗಿದ್ದರು.