ಬೆಂಗಳೂರು : ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪಾಸಿಟಿವ್ ಕೇಸಸ್ ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರತಿಯೊಂದು ರಾಜ್ಯಗಳು ಕೊರೊನಾ ನಿಯಂತ್ರಣ ಮಾಡಲು ತಮ್ಮದೆ ಆದ ಕಾರ್ಯತಂತ್ರಗಳನ್ನು ಮಾಡುತ್ತಿವೆ. ಆದರೆ ಉಳಿದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ರಾಜ್ಯದಲ್ಲಿ ಕೋವಿಡ್ 19 ಪರೀಕ್ಷಾ ಲ್ಯಾಬ್ ಗಳು ಹೆಚ್ಚಿವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಭಾರತದಲ್ಲಿರುವ ಒಟ್ಟು ಕೋವಿಡ್ ಪರೀಕ್ಷಾ ಲ್ಯಾಬ್ ಗಳಲ್ಲಿ ಶೇ 10ರಷ್ಟು ಕರ್ನಾಟಕದಲ್ಲಿವೆ. ಜೂನ್ 7ಕ್ಕೆ ಅನ್ವಯವಾಗುವಂತೆ, ದೇಶದ ಒಟ್ಟು 771 ಲ್ಯಾಬ್ ಗಳಲ್ಲಿ, 70 ಕೋವಿಡ್19 ಲ್ಯಾಬ್ ಗಳು (41 ಸರ್ಕಾರಿ, 29 ಖಾಸಗಿ) ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ. ಕೊರೊನಾ ವಿರುದ್ಧ ನಾವು ಸಶಕ್ತರಾಗಿ ಸಮರ ಮುಂದುವರಿಸಿದ್ದೇವೆ ಎಂದು ಹೇಳಿದ್ದಾರೆ.








