Arun Bali Passes Away ಅರುಣ್ ಬಾಲಿ ನಿಧನ:ಬಾಲಿವುಡ್ ನ ಹಿರಿಯ ನಟ ಅರುಣ್ ಬಾಲಿ ನಿಧನ. ತಮ್ಮ 79 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದ ನಟ ಅರುಣ್ ಬಾಲಿ ಬಹಳ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಾರೆ.
ಕೆಲ ತಿಂಗಳ ಹಿಂದೆ ಕಡಾ ಆಸ್ಪತ್ರೆಗೆ ದಾಖಲಾಗಿದ್ದಅರುಣ್ ಬಾಲಿ . ನರಗಳು ಮತ್ತು ಸ್ನಾಯುಗಳ ಸಂವಹನ ವೈಫಲ್ಯದಿಂದಾಗಿ ಸಂಭವಿಸುವ
ಆಟೋ ಇಮ್ಯುನ್ ಕಾಯಿಲೆಯಾದ ಮೈಸ್ತೇನಿಯಾ ಗ್ರ್ಯಾವಿಸ್ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದರು.
ಅರುಣ್ ಬಾಲಿ ಸಾವಿನಿಂದ ಶೋಕ ಮಡುವಿನಲ್ಲಿ ಮುಳುಗಿದ ಕಿರುತೆರೆ , ಹಿರಿತೆರೆ ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಶೋಕ ವ್ಯಕ್ತಪಡಿಸಿದ ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು .
ಮಾಧ್ಯಮಗಳ ವರದಿ ಪ್ರಕಾರ, ಅರುಣ್ ಬಾಲಿ ಆರೋಗ್ಯ ಹದಗೆಟ್ಟ ಕಾರಣ, ಅವರನ್ನು ಮುಂಬೈನ ಹಿರಾನಂದಾನಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅರುಣ್ ಬಾಲಿ ತಮ್ಮ ವೃತ್ತಿಜೀವನದಲ್ಲಿ ಶಾರುಖ್ ಖಾನ್, ಅಕ್ಷಯ್ ಕುಮಾರ್ ಮತ್ತು ಸುಶಾಂತ್ ಸಿಂಗ್ ರಜಪೂತ್‌ನಂತಹ ಸ್ಟಾರ್‌ರೊಂದಿಗೆ ಕೆಲಸ ಮಾಡಿದ್ದಾರೆ. ಅವರು ತಮ್ಮ ಮನರಂಜನಾ ಉದ್ಯಮದಲ್ಲಿ ಬಹಳ ದೊಡ್ಡ ಹೆಸರು ಮಾಡಿದ್ದರು.
ಹಿರಿಯ ನಟ ಅರುಣ್ ಬಾಲಿ 90 ರ ಸದ್ಯದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. ಇದಾದ ಬಳಿಕ ‘ರಾಜು ಬನ್ ಗಯಾ ಜಂಟಲ್ ಮ್ಯಾನ್’, ‘ಫೂಲ್ ಔರ್ ಅಂಗಾರೆ’, ‘ಖಲ್ನಾಯಕ್’, ‘3 ಈಡಿಯಟ್ಸ್’, ‘ಪಾಣಿಪತ್’ ಸೇರಿದಂತೆ ಹಲವು ಚಿತ್ರಗಳಲ್ಲಿ ಅಮೋಘ ಅಭಿನಯ ಪ್ರದರ್ಶನ ನೀಡಿದ್ದರು ಮತ್ತು ಟಿವಿ ಶೋಗಳಲ್ಲಿ ಸಹ ನಟಿಸಿದ್ದರು.