B S Yediyurappa | ರಾಹುಲ್ ಬಚ್ಚಾ ಎಂದ ಬಿಎಸ್ ವೈಗೆ “ಕೈ” ಗುದ್ದು
ರಾಯಚೂರು : ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಈ ಬಚ್ಚಾ ರಾಹುಲ್ ಗಾಂಧಿ ಮಾತಾಡ್ತಾನೆ ಎಂಬ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದು, ಇದಕ್ಕೆ ರಾಜ್ಯ ಕಾಂಗ್ರೆಸ್ ಟೀಕೆ ಮಾಡಿದೆ.
ಈ ಬಗ್ಗೆ ಈ ಟ್ವೀಟ್ ಮಾಡಿರುವ ಕಾಂಗ್ರೆಸ್, ಮಾನ್ಯ ಬಿ.ಎಸ್.ಯಡಿಯೂರಪ್ಪ ಅವರೇ, ಈ ಭಾಷೆ ನಿಮ್ಮ ಘನತೆಗೆ ತಕ್ಕುದಲ್ಲ, ಪ್ರಧಾನಿ ಮೋದಿ ಬಿಜೆಪಿಗೆ ಪ್ರಶ್ನಾತೀತರು, ಟೀಕಾತೀತರು ಇರಬಹುದು, ಆದರೆ ಭಾರತ ಪ್ರಜಾಪ್ರಭುತ್ವದ ದೇಶ ಎಂಬುದನ್ನು ಮರೆಯದಿರಿ.

ಅಂದಹಾಗೆ ನಿಮ್ಮ ಮುಂದಿನ ಬಚ್ಛಾ ಅಮಿತ್ ಶಾ ಎದುರು ನೀವು ಕೈಕಟ್ಟಿ ನಿಲ್ಲುವುದು ಸರಿಯೇ? ಮೋದಿಯೂ ನಿಮ್ಮ ಮುಂದೆ ಬಚ್ಛಾ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.
ರಾಯಚೂರಿನಲ್ಲಿ ಮಾತನಾಡಿದ ಬಿಎಸ್ ವೈ, ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಟೀಕೆ ಮಾಡೋ ಯೋಗ್ಯತೆ ನಿಮಗೆ ಇದಿಯಾ, ಅವರ ಕಾಲು ಬುಡದಲ್ಲೂ ಕುಳಿತುಕೊಳ್ಳವ ಯೋಗ್ಯತೆ ನಿಮಗೆ ಇಲ್ಲ.
ಇಡೀ ಪ್ರಪಂಚವೇ ಮೋದಿಯವರ ನಾಯಕತ್ವವನ್ನು ಒಪ್ಪಿರುವ ಸಂದರ್ಭದಲ್ಲಿ ಅವರ ಬಗ್ಗೆ ಈ ಬಚ್ಚಾ ರಾಹುಲ್ ಗಾಂಧಿ ಟೀಕೆ ಮಾಡ್ತಾನೆ ಎಂದು ಕಿಡಿಕಾರಿದ್ದಾರೆ.








