ಹಿಜಾಬ್ ವಿವಾದ.. ಮುಖ್ಯ ನ್ಯಾಯಮೂರ್ತಿ ಅಂಗಳಕ್ಕೆ
ನವದೆಹಲಿ : ಹಿಜಾಬ್ ನಿಷೇಧಿಸಿ ಹೈಕೋರ್ಟ್ ನೀಡಿದ ಆದೇಶದ ವಿರುದ್ಧ ಸಲ್ಲಿಕೆ ಮಾಡಲಾಗಿದ್ದ ಮೇಲ್ಮನವಿ ಅರ್ಜಿಗಳ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ಪ್ರಕಟಿಸಿದೆ. ಇಬ್ಬರು ನ್ಯಾಯಮೂರ್ತಿಗಳು ವಿಭಿನ್ನ ಅಭಿಪ್ರಾಯಪಟ್ಟಿದ್ದು, ಸಿಜೆಐ ಪೀಠಕ್ಕೆ ವರ್ಗಾವಣೆ ಮಾಡಲಾಗಿದೆ.
ನ್ಯಾಯಮೂರ್ತಿ ಹೇಮಂತ್ ಗುಪ್ತಾ ಅವರು, ಮೇಲ್ಮನವಿ ಅರ್ಜಿಯ ವಜಾ ಪರ ತೀರ್ಪು ನೀಡಿದ್ದರೆ, ನ್ಯಾಯಮೂರ್ತಿ ಸುಧಾಂಶು ಧುಲಿಯಾ ಕರ್ನಾಟಕ ಹೈಕೋರ್ಟ್ ನ ಆದೇಶವನ್ನು ರದ್ದು ಮಾಡುವ ಪರವಾಗಿ ತೀರ್ಪು ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಪ್ರಕರಣವು ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್ ಅವರ ಮುಂದೆ ಬರಲಿದೆ. ನ್ಯಾಯಮೂರ್ತಿಗಳ ವಿಸ್ತೃತ ಪೀಠ ರಚಿಸಿ ಅಂತಿಮ ಪ್ರಕಟವಾಗುವ ಸಾಧ್ಯತೆಯಿದೆ. ಅಲ್ಲಿಯವರೆಗೆ ಹಿಜಾಬ್ ವಿಚಾರದಲ್ಲಿ ಯಥಾಸ್ಥಿತಿ ಮುಂದುವರಿಯಲಿದೆ.
ಶಾಲಾ – ಕಾಲೇಜುಗಳಲ್ಲಿ ಸದ್ಯಕ್ಕೆ ಹಿಜಾಬ್ ಗಿಲ್ಲ ಅನುಮತಿ
ಮುಸ್ಲಿಂ ವಿದ್ಯಾರ್ಥಿನಿಯರ ಮೇಲ್ಮನವಿ ವಜಾ – ನ್ಯಾ. ಹೇಮಂತ್ ಗುಪ್ತಾ ಆದೇಶ
ಹಿಜಾಬ್ ವಿಚಾರದಲ್ಲಿ ನ್ಯಾಯಮೂರ್ತಿಗಳ ವಿಭಿನ್ನ ಅಭಿಪ್ರಾಯ
ಓರ್ವ ನ್ಯಾಯಮೂರ್ತಿಯಿಂದ ಹೈಕೋರ್ಟ್ ತೀರ್ಪು ರದ್ದು
ಮುಂದೆ ವಿಸ್ತೃತ ಪೀಠ ರಚನೆ ಮಾಡಲಿರುವ ಸಿಜೆಐ
Hijab Controversy: Split verdict from Supreme – Case to Chief Justice’s court….








