Nalin Kumar Kateel | ರಾಹುಲ್, ಮೋದಿ ಎದುರು ಸಣ್ಣ ಹುಡುಗ
ಬೆಂಗಳೂರು : ರಾಹುಲ್ ಮೋದಿ ಎದುರು ಸಣ್ಣ ಹುಡುಗನೇ, ಈಗ ನಾನು ಅಧ್ಯಕ್ಷ ಎಂದು ದೊಡ್ಡನವಾಗಲ್ಲ.
ಯಡಿಯೂರಪ್ಪನವರ ಎದುರು ನಾನು ಕೂಡ ಸಣ್ಣವನೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
“ರಾಹುಲ್ ಗಾಂಧಿ ಬಚ್ಚಾ” ಎನ್ನುವ ಯಡಿಯೂರಪ್ಪ ಹೇಳಿಕೆ ಸಂಬಂಧ ಮಾತನಾಡಿದ ಕಟೀಲ್, ರಾಹುಲ್ ಗಾಂಧಿ ಒಬ್ಬ ಎಂಪಿ ಅಷ್ಟೇ, ಕಾಂಗ್ರೆಸ್ ನಾಯಕರು ಆಗಿರಬಹುದು, ದೊಡ್ಡ ನಾಯಕನಲ್ಲ, ಮೋದಿ ಈ ದೇಶದ ಪ್ರಧಾನಿ.
ಇಂದಿರಾ ಗಾಂಧಿ ಪ್ರಧಾನಿ ಇದ್ದಾಗ ಅಟಲ್ ಅವರು ಯಾವತ್ತೂ ಏಕವಚನ ಬಳಕೆ ಮಾಡಿಲ್ಲ.
ಈ ರೀತಿ ವಿರೋಧ ಪಕ್ಷ ಹೇಗೆ ನಡೆಯಬೇಕು ಎಂದು ಅಟಲ್ ಅವರು ತೋರಿಸಿದ್ದಾರೆ.

ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಯಾರೂ ಏಕವಚನ ಬಳಕೆ ಮಾಡಿಲ್ಲಾ.
ಇವತ್ತು ಸಿದ್ದರಾಮಣ್ಣ ಹಾಗೂ ರಾಹುಲ್ ಗಾಂಧಿ ಮೋದಿ ಬಗ್ಗೆ ಏಕವಚನದಲ್ಲಿ ಮಾತನಾಡುತ್ತಾರೆ ಅಂದರೆ ಯಡಿಯೂರಪ್ಪ ಹೇಳಿದ್ದು ಸರಿ ಇದೆ ಎಂದು ಹೇಳಿದ್ದಾರೆ.
ರಾಹುಲ್ ಮೋದಿ ಎದುರು ಸಣ್ಣ ಹುಡುಗನೇ, ಈಗ ನಾನು ಅಧ್ಯಕ್ಷ ಎಂದು ದೊಡ್ಡನವಾಗಲ್ಲ. ಯಡಿಯೂರಪ್ಪನವರ ಎದುರು ನಾನು ಕೂಡ ಸಣ್ಣವನೆ.
ರಾಜಕೀಯದ ಅನುಭವ ಇದೆ. ಪ್ರಧಾನಿಗೆ ಅನುಭವ ಇಟ್ಟುಕೊಂಡು ಮಾತನಾಡಬೇಕು ಎಂದು ಹೇಳಿದರು.








