Oldest Denim | ದಶಕದ ಹಳೆಯ ಪ್ಯಾಂಟ್ ಬೆಲೆ $76,000
ಲೆವೀಸ್ ಜೀನ್ಸ್ ಪ್ಯಾಂಟ್ ಗೆ $76,000 ಖರ್ಚು
1800 ರ ದಶಕದ ಲೆವಿಯ ಜೀನ್ಸ್ ಗೆ ಭಾರಿ ಬೆಲೆ
ನ್ಯೂ ಮೆಕ್ಸಿಕೋದಲ್ಲಿ ನಡೆದ ಹರಾಜಿನಲ್ಲಿ ಖರೀದಿ
ಬಟ್ಟೆ ವ್ಯಾಪಾರಿ ಕೈಲ್ ಹೌಪೆಟ್ ಎಂಬುವರಿಂದ ಖರೀದಿ
ನ್ಯೂಯಾರ್ಕ್ : ನ್ಯೂ ಮೆಕ್ಸಿಕೋದಲ್ಲಿ ಬಟ್ಟೆ ವ್ಯಾಪಾರಿ ಒಬ್ಬ ಲೆವೀಸ್ ಜೀನ್ಸ್ ಪ್ಯಾಂಟ್ ಖರೀದಿಗೆ ಬರೋಬ್ಬರಿ 62 ಲಕ್ಷ ರೂಪಾಯಿ ಖರ್ಚು ಮಾಡಿದ್ದಾನೆ.
ನ್ಯೂ ಮೆಕ್ಸಿಕೋದಲ್ಲಿ ನಡೆದ ಹರಾಜಿನಲ್ಲಿ 1800 ರ ದಶಕದ ಲೆವಿಯ ಜೀನ್ಸ್ ಜೋಡಿಯು 62 ಲಕ್ಷಕ್ಕಿಂತ ಹೆಚ್ಚು ರೂಪಾಯಿಗೆ ಮಾರಾಟವಾಗಿದೆ.
ಇದಕ್ಕೆ ಪ್ರೀಮಿಯಂ ಅಂಶದೊಂದಿಗೆ ಖರೀದಿದಾರರು 87,400 ಯುಎಸ್ ಡಾಲರ್ ಅನ್ನು ಪಾವತಿಸಿದ್ದಾರೆ.

ಅಕ್ಟೋಬರ್ 1 ರಂದು ಹರಾಜು ಪ್ರಕ್ರಿಯೆ ನಡೆದಿದ್ದು, ವಿಂಟೇಜ್ ಬಟ್ಟೆ ವ್ಯಾಪಾರಿ ಕೈಲ್ ಹೌಪೆರ್ಟ್ ಎನ್ನುವವರು ಈ ಜೋಡಿ ಜೀನ್ಸ್ ಅನ್ನು ಖರೀದಿಸಿದ್ದಾರೆ.
ಹೌಪರ್ಟ್ ಹರಾಜಿನ ವೀಡಿಯೊ ಮತ್ತು ಜೀನ್ಸ್ ಜೋಡಿಯ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
“ಇವುಗಳು ತಮ್ಮಷ್ಟಕ್ಕೆ ತಾನೇ ಮಾತನಾಡುತ್ತವೆ,” ಎಂಬ ಶೀರ್ಷಿಕೆ ಅನ್ನು ನೀಡಿದ್ದಾರೆ.







