ಪಾಕಿಸ್ತಾನ ವಿಶ್ವದ ಅತ್ಯಂತ ಅಪಾಯಾಕಾರಿ ದೇಶಗಳಲ್ಲಿ ಒಂದು – ಜೋ ಬಿಡನ್
ಅಮೆರಿಕ ಅಧ್ಯಕ್ಷ ಜೋ ಬಿಡನ್ ಅವರು ಪಾಕಿಸ್ತಾನದ ಮುಖವನ್ನು ಜಗತ್ತಿನೆದುರು ತೆರೆದಿಟ್ಟಿದ್ದಾರೆ. ಬಿಡೆನ್ ಪಾಕಿಸ್ತಾನವನ್ನ ವಿಶ್ವದ ಅತ್ಯಂತ ಅಪಾಯಕಾರಿ ದೇಶಗಳಲ್ಲಿ ಒಂದಾಗಿದೆ ಎಂದು ಕರೆದಿದ್ದಾರೆ. ಪರಮಾಣು ಶಸ್ತ್ರಾಸ್ತ್ರಗಳ ಸಂಗ್ರಹದ ಕುರಿತು ಬಗ್ಗೆ ಬಿಡೆನ್ ಈ ಕಾಮೆಂಟ್ ಮಾಡಿದ್ದಾರೆ. ಪಾಕಿಸ್ತಾನದಲ್ಲಿ ಸೇನೆ ಮತ್ತು ಸರ್ಕಾರದ ನಡುವೆ ಸಮನ್ವಯತೆ ಇಲ್ಲ ಎಂದು ಅವರು ಹೇಳಿದ್ದಾರೆ. ಹಾಗಾಗಿ ಇದು ಜಗತ್ತಿಗೆ ದೊಡ್ಡ ಅಪಾಯವಾಗಬಹುದು ಎಂದು ತಿಳಿಸಿದ್ದಾರೆ.
ಡೆಮಾಕ್ರಟಿಕ್ ಸಮ್ಮೇಳನದಲ್ಲಿ ಅಮೆರಿಕ ಅಧ್ಯಕ್ಷ ಜೋ ಬಿಡನ್ ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದರು. ಪಾಕಿಸ್ತಾನವು ವಿಶ್ವದ ಅತ್ಯಂತ ಅಪಾಯಕಾರಿ ರಾಷ್ಟ್ರಗಳಲ್ಲಿ ಒಂದಾಗಿದೆ, ಏಕೆಂದರೆ ಅದು ಪರಮಾಣು ಶಸ್ತ್ರಾಸ್ತ್ರಗಳನ್ನ ಸಂಗ್ರಹಿಸುತ್ತಿದೆ ಮತ್ತು ಸೇನೆ ಮತ್ತು ಸರ್ಕಾರದ ನಡುವೆ ಸಮನ್ವಯತೆ ಇಲ್ಲ.
ಅಮೆರಿಕ ಹೇಳಿಕೆಯಲ್ಲಿ ವಿರೋಧಾಭಾಸ
ಒಂದೆಡೆ ಅಮೆರಿಕ ಅಧ್ಯಕ್ಷ ಜೋ ಬಿಡನ್ ಪಾಕಿಸ್ತಾನದ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ಮತ್ತೊಂದೆಡೆ ಶಸ್ತ್ರಾಸ್ತ್ರ ಪೂರೈಕೆ ಮುಂದುವರಿದಿದೆ. ಮಿಲಿಟರಿ ನೆರವಿನ ಹೊರತಾಗಿ, IMF ನಲ್ಲಿ ಹಣಕಾಸಿನ ನೆರವು ಮತ್ತು ಹಿಂಬಾಗಿಲಿನ ಮೂಲಕ US ಪಾಕಿಸ್ತಾನಕ್ಕೆ ಸಹಾಯ ಮಾಡುತ್ತಿದೆ.
ಉಕ್ರೇನ್ಗೆ ಆರ್ಥಿಕ ನೆರವು
ಈ ಹೇಳಿಕೆಯ ಹೊರತಾಗಿ, US ಅಧ್ಯಕ್ಷರು ಉಕ್ರೇನ್ಗೆ $ 725 ಮಿಲಿಯನ್ ಹೆಚ್ಚುವರಿ ಮಿಲಿಟರಿ ಸಹಾಯವನ್ನು ಘೋಷಿಸಿದ್ದಾರೆ. ಈ ಕುರಿತು ರಷ್ಯಾ ಇನ್ನು ಯಾವುದೇ ಹೇಳಿಕೆ ನೀಡಿಲ್ಲ..
Pakistan Nuclear Weapons | US President Joe Biden Pakistan World Most Dangerous Country








