ಭಾರತ ಯಾವಾಗಲೂ ಶಾಂತಿಯುತ ಮಾತುಕತೆಯ ಅಗತ್ಯವನ್ನ ಪ್ರತಿಪಾದಿಸುತ್ತದೆ – ರಷ್ಯಾ…
ಭಾರತ ಯಾವಾಗಲೂ ಮಾತುಕತೆಯ ಮೂಲಕ ಶಾಂತಿಯುತವಾಗಿ ಸಂಘರ್ಷಗಳನ್ನ ಬಗೆಹರಿಸುವ ಕುರಿತಂತೆ ಮಾತನಾಡುತ್ತದೆ ಮತ್ತು ಉಕ್ರೇನ್ ಸಂಘರ್ಷದ ಬಗ್ಗೆ ಭಾರತದ ನಿಲುವು ಮತ್ತು ಕಳವಳಗಳು ರಷ್ಯಾ ತಿಳಿದಿದೆ ಎಂದು ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.
ಪುಟಿನ್ ನಿನ್ನೆ ಕಝಕ್ ರಾಜಧಾನಿ ಅಸ್ತಾನಾದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುವಾಗ ಹೀಗೆ ಹೇಳಿದ್ದಾರೆ. ಉಜ್ಬೇಕಿಸ್ತಾನ್‌ನಲ್ಲಿ ನಡೆದ ಎಸ್‌ಸಿಒ ಶೃಂಗಸಭೆಯ ಸಂದರ್ಭದಲ್ಲಿ ನಡೆದ ಸಭೆಯಲ್ಲಿ “ಇಂದಿನ ಯುಗ ಯುದ್ಧದ ಯಗವಲ್ಲ” ಎಂದು ಪ್ರಧಾನಿ ನರೇಂದ್ರ ಮೋದಿ ರಷ್ಯಾಗೆ ಸಲಹೆ ನೀಡಿದ ಒಂದು ತಿಂಗಳ ನಂತರ ಪುಟಿನ್ ಹೇಳಿಕೆ ಬಂದಿದೆ.
ಪ್ರಧಾನಿ ಮೋದಿ ಅವರು ಪುಟಿನ್ ಅವರೊಂದಿಗಿನ ದ್ವಿಪಕ್ಷೀಯ ಸಭೆಯಲ್ಲಿ ಯುದ್ಧವನ್ನು ಶೀಘ್ರವಾಗಿ ನಿಲ್ಲಿಸುವಂತೆ ಕರೆ ನೀಡಿದ್ದರು ಮತ್ತು ಆಹಾರ, ಇಂಧನ ಭದ್ರತೆ ಮತ್ತು ರಸಗೊಬ್ಬರಗಳ ಸಮಸ್ಯೆಗಳನ್ನು ಪರಿಹರಿಸಲು ಮಾರ್ಗಗಳನ್ನು ಕಂಡುಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದರು.
ಸದ್ಯಕ್ಕೆ ಉಕ್ರೇನ್ ವಿರುದ್ಧ ಬೃಹತ್ ದಾಳಿ ಮಾಡುವ ಅಗತ್ಯವಿಲ್ಲ ಎಂದು ರಷ್ಯಾದ ಅಧ್ಯಕ್ಷರು ಹೇಳಿದ್ದಾರೆ. ಕ್ರೈಮಿಯಾ ಸೇತುವೆ ದಾಳಿಯ ನಂತರ ರಷ್ಯಾ, ಕೈವ್ ಮತ್ತು ಇತರ ಹಲವಾರು ಉಕ್ರೇನಿಯನ್ ನಗರಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದ ನಂತರ ಈ ಹೇಳಿಕೆ ನೀಡಿದ್ದಾರೆ.
ಕಳೆದ ತಿಂಗಳು ಉಕ್ರೇನ್‌ನ ನಾಲ್ಕು ಪ್ರದೇಶಗಳನ್ನು ವಶಪಡಿಸಿಕೊಂಡ ನಂತರ ರಷ್ಯಾದ ಭೂಪ್ರದೇಶವನ್ನು ರಕ್ಷಿಸಲು ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವುದಾಗಿ ಪುಟಿನ್ ಈ ಹಿಂದೆ ಎಚ್ಚರಿಕೆ ನೀಡಿದ್ದರು.
Russian President Vladimir Putin says, India always advocates necessity to establish dialogue and resolve things peacefully








