ac shocked to see the situation at school-ಶಾಲೆಗೆ ಧಿಢಿರ್ ಬೇಟಿ ನೀಡಿದ ಅಧಿಕಾರಿಗೆ ಕಾದಿತ್ತು ಶಾಕ್ ರಾಯಚೂರು ತಾಲೂಕಿನ ಲಿಂಗನಖಾನದೊಡ್ಡಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಹಠಾತ್ ಭೇಟಿ ನೀಡಿದ ರಾಯಚೂರು ಉಪವಿಭಾಗದ ಸಹಾಯಕ ಆಯುಕ್ತ (Assistant Commissioner) ರಾದ ರಜನಿಕಾಂತ್ ಚವ್ಹಾಣ್ ಶಾಲೆಯಲ್ಲಿನ ಮಕ್ಕಳ ಪರಿಸ್ಥಿತಿ ಕಂಡು ಶಾಕ್ ಆಗಿದ್ದಾರೆ.
ಶಾಲೆಯಲ್ಲಿ ಸರಿಯಾದ ಕಲಿಕೆ ಜರುಗುತ್ತಿಲ್ಲ ಎಂದು ತಿಳಿದ ಅಧಿಕಾರಿಯು ಶಾಲೆಯ ಎರಡನೇ ತರಗತಿ ಹೊಗಿ ಬೇಟಿ ನೀಡಿದ್ದಾರೆ.- ಆಗ ಮಕ್ಕಳಿಗೆ ಇಂಗ್ಲಿಷ್ (English) ವರ್ಣಮಾಲೆಗಳ ಪರಿಚಯವೇ ಇಲ್ಲದ್ದನ್ನು ಕಂಡು ಎಸಿ ಗರಂ ಆಗಿದ್ದಾರೆ.
ಮಕ್ಕಳಿಗೆ ಎಬಿಸಿಡಿ ಓದಲು ಬರುವುದಿಲ್ಲ ಏನ್ ಕಲಿಸುತ್ತಿದ್ದಿರಿ ಎಂದು ಶಿಕ್ಷಕಿ (Teacher) ಮತ್ತು ಶಾಲೆಯ ಮುಖ್ಯೋಪಾಧ್ಯಾಯರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಸಮಸ್ಯೆಗಳನ್ನೇ ಹೇಳುತ್ತಿರುವುದನ್ನು ಬಿಟ್ಟು ಮಕ್ಕಳಿಗೆ ಪಾಠ ಕಲಿಸುವ ಕಡೆಯೂ ಗಮನಹರಿಸಬೇಕು ಎಂದು ಶಿಕ್ಷಕಿಯವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಮಜಾಯಿಶಿ ಕೊಡುತ್ತ ಶಿಕ್ಷಕಿ ಕೋವಿಡ್ (Covid-19) ಕಾರಣಕ್ಕೆ ಎರಡು ವರ್ಷದಿಂದ ಮಕ್ಕಳು ಓದಿನಲ್ಲಿ ಹಿಂದೆ ಬಿದ್ದಿದ್ದಾರೆ ಎಂದು ಶಿಕ್ಷಕಿಯ ಸಮಜಾಯಿಷಿಗೆ ಕೇಳಿ ಅಧಿಕಾರಿ ಗರಂ ಆಗಿದ್ದರೆ.
ಪಾಠ ಕಲಿಸಲು ಅಸಡ್ಡೆ ಕಂಡು ನಾನೇ ಶಿಕ್ಷಕನಾಗಿ ಬರಲೇ ಎರಡೇ ದಿನದಲ್ಲಿ ಎಬಿಸಿಡಿ ಕಲಿಸುತ್ತೇನೆ. ಒಂದು ವಾರದೊಳಗೆ ಮಕ್ಕಳಿಗೆ ಎಬಿಸಿಡಿ ಕಲಿಸಬೇಕು. ಮಕ್ಕಳು ಪಟಪಟನೆ ಎಬಿಸಿಡಿ ಹೇಳುವುದನ್ನು ವೀಡಿಯೋ ಮಾಡಿ ಕಳುಹಿಸಿ ಎಂದು ಖಡಕ್ ಆಗಿ ವಾರ್ನ ಮಾಡಿದಾರೆ .
ಶಾಲೆಯಲ್ಲಿ ಶಿಕ್ಷಕರ ಕೊರತೆ ಬಗ್ಗೆ ತಕ್ಷಣವೇ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕರೆಮಾಡಿ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕ್ರಮಕೈಗೊಳ್ಳುವಂತೆ ಎಸಿ ತಿಳಿಸಿದ್ದರೆ.
ac shocked to see the situation at school








