ಬೆಂಗಳೂರು : ಮೆಂಟಗಳು ಯಾರು ಅಂತ ಸೂಕ್ತ ಸಮಯ ಬಂದಾಗ ಗೊತ್ತಾಗುತ್ತೆ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ . ಆ ಮೂಲಕ ಮೆಂಟಗಳು ಏನೇನೋ ಮಾತನಾಡುತ್ತಾರೆ ಎಂದು ಹೇಳಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೆ ರಮೇಶ್ ಜಾರಕಿಹೊಳಿ ತೀರುಗೇಟು ನೀಡಿದ್ದಾರೆ.
ಇಂದು ಸುದ್ದಿಗಾರರೊಂದಗೆ ಮಾತನಾಡಿದ ರಮೇಶ್ ಜಾರಕಿಹೊಳಿ, ನಾನು ಡಿ.ಕೆ ಶಿವಕುಮಾರ್ ಮೆಂಟಲ್ ಗಳು ಮಾತಾಡುತ್ತಾರೆ ಎಂಬ ಹೇಳಿಕೆ ಕೊಟ್ಟಿರುವುದನ್ನು ನೋಡಿದ್ದೇನೆ. ಯಾರು ಮೆಂಟಗಳು ಎಂದು ಸೂಕ್ತ ಸಂದರ್ಭದಲ್ಲಿ ಗೊತ್ತಾಗುತ್ತದೆ. ಅದನ್ನು ನಾನು ಬಹಿರಂಗ ಪಡಿಸುತ್ತೇನೆ. ಯಾರು ಮೆಂಟಲ್ ಆಗಿದ್ದಾರೆ ಎಂದು ಬಾಡಿ ಲಾಂಗ್ವೇಜ್ ನೋಡಿಯೇ ತಿಳಿದುಕೊಳ್ಳಬಹುದು ಎನ್ನುವ ಮೂಲಕ ಡಿ.ಕೆ.ಶಿವಕುಮಾರ್ ಅವರಿಗೆ ರಮೇಶ್ ಜಾರಕಿಹೊಳಿ ಟಾಂಗ್ ಕೊಟ್ಟಿದ್ದಾರೆ.
ಇದೆ ವೇಳೆ ರಮೇಶ್ ಕತ್ತಿ ಮತ್ತು ಪ್ರಭಾಕರ್ ಕೋರೆ ಅವರಿಗೆ ರಾಜ್ಯಸಭೆ ಟಿಕೆಟ್ ಕೈ ತಪ್ಪಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು ಅವರು, ರಾಜ್ಯಸಭೆ ಚುನಾವಣೆಯ ಟಿಕೆಟ್ ಕಾರ್ಯಕರ್ತರಿಗೆ ಸಿಕ್ಕಿರುವುದಕ್ಕೆ ರಮೇಶ್ ಕತ್ತಿ ಮತ್ತು ಪ್ರಭಾಕರ್ ಕೋರೆ ಖುಷಿಯಾಗಿದೆ. ಯಾರಿಗೂ ಅಸಮಾಧಾನ ಆಗಿಲ್ಲ. ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆಯಾದ ನಂತರ ಉಮೇಶ್ ಕತ್ತಿ ಅವರನ್ನು ಭೇಟಿ ಮಾಡುತ್ತೇನೆ. ಅಲ್ಲದೆ ನಮ್ಮ ಬಾಗದ ಶಾಸಕರು ಒಂದೆಡೆ ಸೇರಿ ಊಟ ಮಾಡುವ ಪದ್ದತಿ ಮೊದಲಿಂದಲೂ ನಡೆದು ಬಂದಿದೆ. ಹಾಗಾಗಿ ಉಮೇಶ್ ಕತ್ತಿ ಅವರ ಮನೆಯಲ್ಲಿ ನಡೆದ ಔತಣಕೂಟಕ್ಕೆ ಬೇರೆ ಅರ್ಥ ಕೊಡುವುದು ಬೇಡ ಎಂದು ಹೇಳಿದರು.








