Virat kohli ವಿಶ್ವಕಪ್ ಬಳಿಕ ಟಿ 20 ಕ್ರಿಕೆಟ್ ಗೆ ವಿರಾಟ್ ಗುಡ್ ಬೈ
ಟಿ 20 ವಿಶ್ವಕಪ್ 2022 ರ ಬಳಿಕ ರನ್ ಮಿಷಿನ್ ವಿರಾಟ್ ಕೊಹ್ಲಿ ಚುಟುಕು ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ದಾರಾ ?
ಏಕದಿನ, ಟೆಸ್ಟ್ ಕ್ರಿಕೆಟ್ ಮೇಲೆ ಗಮನ ಹರಿಸುವ ದೃಷ್ಟಿಯಿಂದ ಟಿ 20 ಕ್ರಿಕೆಟ್ ಗೆ ವಿದಾಯ ಹೇಳುತ್ತಾರಾ ಎಂಬ ಪ್ರಶ್ನೆ ಸದ್ಯ ಕ್ರಿಕೆಟ್ ವಲಯದಲ್ಲಿ ಹರಿದಾಡುತ್ತಿದೆ.
ಈ ಸಂಬಂಧ ಕೊಹ್ಲಿ ಬಾಲ್ಯದ ಕೋಚ್ ಮಾತನಾಡಿದ್ದು, ಇದು ಕೊಹ್ಲಿ ಖಂಡಿತವಾಗಿಯೂ ಕೊನೆಯ ವಿಶ್ವಕಪ್ ಅಲ್ಲ ಎಂದಿದ್ದಾರೆ.
ಟೀಂ ಇಂಡಿಯಾಗೆ ಸುದೀರ್ಘ ಕಾಲ ಆಡುತ್ತಿರುವ ಘನತೆ ಕೊಹ್ಲಿಯದ್ದು. ತನ್ನ ಫಾರ್ಮ್, ಫಿಟ್ ನೆಸ್, ರನ್ ಗಳ ದಾಹದ ಬಗ್ಗೆ ಪ್ರತ್ಯೇಕವಾಗಿ ಹೇಳುವ ಅವಶ್ಯಕತೆ ಇಲ್ಲ.
ತಂಡವನ್ನು ಗೆಲ್ಲಿಸಬೇಕೆಂಬ ಹಠ ಆತನಲ್ಲಿದೆ. ಟಿ 20 ವರ್ಲ್ಡ್ 2024ರಲ್ಲಿ ಕೊಹ್ಲಿ ಆಡುತ್ತಾರೆ ಎಂದು ಭಾವಿಸುತ್ತೇನೆ.
ಖಂಡಿತವಾಗಿ ಕೊಹ್ಲಿಗೆ ಇದು ಕೊನೆಯ ಟಿ20 ವಿಶ್ವಕಪ್ ಅಲ್ಲ ಎಂದು ರಾಜ್ ಕುಮಾರ್ ಶರ್ಮಾ ಹೇಳಿದ್ದಾರೆ.
ಇದೇ ವೇಳೆ ಏಷ್ಯಾಕಪ್ ನಲ್ಲಿ ವಿರಾಟ್ ಬಾರಿಸಿದ ಶತಕವನ್ನು ಉಲ್ಲೇಖಿಸಿ ಮಾತನಾಡಿದ ರಾಜ್ ಕುಮಾರ್ ಶರ್ಮಾ, ಸಂಕಷ್ಟದ ಪರಿಸ್ಥಿತಿಯಲ್ಲಿ ವಿರಾಟ್ ಗಟ್ಟಿಯಾಗಿ ನಿಂತುಕೊಂಡಿದ್ದರು.
ವಿರಾಟ್ ಆಟದ ವೈಖರಿ ಹೇಗಿರುತ್ತದೆ ಎಂದು ಎಲ್ಲರಿಗೂ ಗೊತ್ತು. ಈಗ ಮತ್ತಷ್ಟು ಉತ್ಸಾಹದಿಂದ ಮುನ್ನುಗ್ಗುತ್ತಿದ್ದಾರೆ.
ಟೀಂ ಇಂಡಿಯಾ ಟಿ 20 ವಿಶ್ವಕಪ್ ಗೆಲ್ಲುವುದರಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದಿದ್ದಾರೆ.