ನವದೆಹಲಿ: ಗ್ರೀಕೋ ರೋಮನ್ 87 ಕೆಜಿ ವಿಭಾಗದಲ್ಲಿ ಭಾರತದ ಸುನೀಲ್ ಕುಮಾರ್ ಕಜಕಿಸ್ತಾನದ ಅಜಮತ್ ಕುಸ್ತುಬಾಯೆವ್ ಅವರನ್ನು ಸೋಲಿಸಿ, ಏಷ್ಯನ್ ಕುಸ್ತಿ ಚಾಂಪಿಯನ್ ಶಿಪ್ ನ ಫೈನಲ್ ಗೆ ಪ್ರವೇಶಿಸಿದ್ದಾರೆ. ಇಂದಿರಾ ಗಾಂಧಿ ಕ್ರೀಡಾಂಗಣದ ನಡೆದ ಪಂದ್ಯದಲ್ಲಿ ಸುನೀಲ್ ಅವರು ಮೊದಲು ಹಿನ್ನಡೆ ಅನಿಭವಿಸಿದ್ರು. ಬಳಿಕ ಭರ್ಜರಿ ಪ್ರದರ್ಶನ ನೀಡಿದ ಸುನೀಲ್ 11-8 ರಿಂದ ಪಂದ್ಯ ಗೆದ್ದರು.
ಬಳಿಕ ಮಾತನಾಡಿದ ಅವರು, ನಾನು ಈ ಮುನ್ನ ಅಜಮತ್ ಜತೆ ಅಭ್ಯಾಸ ಮಾಡಿದ್ದು ಅವರ ದೌರ್ಬಲ್ಯಗಳನ್ನು ತಿಳಿದಿದ್ದೆ. ಪಂದ್ಯದ ಕೊನೆಯಲ್ಲಿ, ಅವರು ಶಕ್ತಿ ಕಳೆದುಕೊಳ್ಳುತ್ತಿದ್ದರು. ಆದರೆ ನಾನು ಶಕ್ತಿಯುತವಾಗಿ ಹೊಡೆತ ನೀಡಿದ್ದೆ, ಅದುವೇ ನನ್ನ ಗೆಲುವಿಗೆ ಕಾರಣವಾಗಿದೆ ಎಂದು ಹೇಳಿದರು.








