Bus ticket fare hike-ಬೆಂಗಳೂರು: ಹಬ್ಬದ ಸಂಭ್ರಮಕ್ಕೆ ಊರಿಗೆ ತೆರಳುವ ಜನತೆಗೆ ಖಾಸಗಿ ಬಸ್ ಟಿಕೆಟ ದರ ಏರಿಕೆ ಚಿಂತೆಗೀಡು ಮಾಡಿದೆ. ಹಬ್ಬಕ್ಕೆ ಊರಿಗೆ ಹೊರಡಬೇಕು ಎಂಬ ಗಡಿಬಿಡಿಯಲ್ಲಿರುವ ಜನತೆಗೆ ಖಾಸಗಿ ಬಸ್ ಟಿಕೆಟ್ ದರ ಆಘಾತ ಉಂಟುಮಾಡುತ್ತಿದೆ.
ಖಾಸಗಿ ಬಸ್ಗಳ ಟಿಕೆಟ್ ದರ ಮಿತಿ ಮೀರಿ ಹೆಚ್ಚಾಗಿದ್ದು, ಜನರ ಜೇಬಿಗೆ ಕತ್ತರಿ ಹಾಕುತ್ತಿದೆ, ಸರ್ಕಾರ ಎಷ್ಟೇ ನಿಯಮಗಳನ್ನ ಹಾಕಿದರು, ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಖಾಸಗಿ ಬಸ್ ಟಿಕೆಟ್ ದರ ಹೆಚ್ಚಳ ಮಾಡಲಾಗಿದೆ.
ಬೆಂಗಳೂರಿನಿಂದ ಹೊರಡುವ ಉತ್ತರ ಕರ್ನಾಟಕ, ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಿಗೆ ಪ್ರಯಾಣಿ ಕರ ಜೇಬಿಗೆ ಅತಿ ಹೆಚ್ಚು ಕತ್ತರಿ ಬಿದ್ದಿದೆ.
ಯಾವೆಲ್ಲಾ ಊರುಗಳಿಗೆ ಎಷ್ಟು ಟಿಕೆಟ್ ದರ ಹೆಚ್ಚಾಗಿದೆ ಎಂದು ನೊಡುವುದಾದರೆ…
ಬೆಂಗಳೂರು ನಗರದಿಂದ ಉತ್ತರ ಕನ್ನಡದ ಶಿರಸಿಗೆ ನೂರಾರು ಜನರು ಈ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಸುತ್ತಾರೆ. ಶಿರಸಿ , ಉತ್ತರ ಕನ್ನಡದ ಕಾರವಾರ, ಅಂಕೋಲಾ, ಯಲ್ಲಾಪುರದಂತದ ಟಿಕೆಟ್ ದರ ನೊಡಿದರೆ ಟಿಕೆಟ ದರದ ಹೆಸರಲ್ಲಿ ಬರೆ ಎಳೆದಂತಿವೆ .1,400 ರೂ.ನಿಂದ ಆರಂಭವಾಗುವ ಖಾಸಗಿ ಬಸ್ ಟಿಕೆಟ್ ದರ 2000 ಕ್ಕೆ ಹೆಚ್ಚಾಗಿದೆ.
ಬೆಂಗಳೂರು ನಿಂದ ಹುಬ್ಬಳ್ಳಿಗೆ ಖಾಸಗಿ ಬಸ್ ಟಿಕೆಟ್ ದರ 2,500 ರೂ ತಲುಪಿದೆ. ಹೌದು ಇಷ್ಟೊಂದು ಹಣ ನೀಡಿ ಊರಿಹೆ ಹಬ್ಬಕ್ಕೆ ಊರಿಗೆ ಹೋಗಬೇಕೆ ಎಂಬ ಸ್ಥಿತಿ ಹುಬ್ಬಳ್ಳಿ ಭಾಗದ ನಾಗರಿಕರಿಗೆ ಎದುರಾಗಿದೆ.
ಬೆಳಗಾವಿಗೆ 3,500 ರೂ.ವರೆಗೂ ಖಾಸಗಿ ಬಸ್ ಟಿಕೆಟ್ ದರವಿದೆ.
ಇನ್ನು ಬೆಂಗಳೂರಿನಿಂದ ಮಂಗಳೂರು ನಗರಕ್ಕೆ ಖಾಸಗಿ ಬಸ್ ಟಿಕೆಟ್ ದರವು 2 ಸಾವಿರ ಆಗಿದೆ. ಹಲವು ಖಾಸಗಿ ಕಂಪನಿಗಳ ಬಸ್ಗಳ ದರ 1,500 ಕಿಂತ ಹೆಚ್ಚಿವೆ








