Jio won-ನವದೆಹಲಿ: ಖಾಸಗಿ ಕಂಪನಿಯಾದ ಜಿಯೋ ಟೆಲಿಕಾಂ ಸೇವೆಯಲ್ಲಿ ಪ್ರತಿ ಭಾರಿ ಹೊಸ ಹೊಸ ಯೋಜನೆಗಳನ್ನು ನೀಡುವ ಮೂಲಕ ದೇಶದಲ್ಲಿ ಮೊದಲ ಬಾರಿಗೆ ಸ್ಥಿರ ದೂರವಾಣಿಯಲ್ಲಿ, ಬಿಎಸ್‌ಎನ್ಎಲ್ ಅನ್ನು ಹಿಂದಿಕ್ಕಿದೆ.
ಜಿಯೋ ಟೆಲಿಕಾಂ ಸೇವೆಯು ನೆಟ್ ವರ್ಕ್ ನಲ್ಲಿ ಹಲವಾರು ಹೊಸಯೋಜನೆಗೆ ಕಾರಣವಾಗಿದೆ. ಜಿಯೋ ಈಗಾಗಲೆ ಸ್ಪೀಡ್ ಡೇಟಾ, ಡೌನ್ಲೋಡ್ ಸ್ಪೀಡ್, ಎಲ್ಲೆಡೆ 4ಜಿ ನೆಟ್‌ವರ್ಕ್ ಸೇರಿದಂತೆ ಹಲವು ಕೊಡುಗೆಗಳನ್ನು ಜಿಯೋ ನೀಡಿದೆ.
ಹೆಸರಾಂತ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಅವರ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ ಆಗಸ್ಟ್‌ನಲ್ಲಿ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ನ್ನು ಹಿಂದೆ ಹಾಕಿದೆ.
ಮೊದಲ ಬಾರಿಗೆ ಖಾಸಗಿ ಕಂಪನಿಯೊಂದು ದೇಶದ ಟೆಲಿಕಾಂ ಸೇವೆಯ ವೈರ್‌ಲೈನ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದೆ.
ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಬಿಡುಗಡೆ ಮಾಡಿದ ವರದಿಯ ಪ್ರಕಾರ, ಜಿಯೋ ವೈರ್‌ಲೈನ್ ಚಂದಾದಾರರು ಆಗಸ್ಟ್‌ನಲ್ಲಿ 73.52 ಲಕ್ಷಕ್ಕೆ ತಲುಪಿದ್ದರೆ, BSNLನ ಚಂದಾದಾರರ ಸಂಖ್ಯೆ 71.32 ಲಕ್ಷಕ್ಕೆ ತಲುಪಿದೆ.
BSNL ಕಳೆದ 22 ವರ್ಷಗಳಿಂದ ದೇಶದಲ್ಲಿ ವೈರ್‌ಲೈನ್ ಸೇವೆಗಳನ್ನು ಒದಗಿಸುತ್ತಿದೆ. Jio ಮೂರು ವರ್ಷಗಳ ಹಿಂದೆಯಷ್ಟೇ ತನ್ನ ವೈರ್‌ಲೈನ್ ಸೇವೆಯನ್ನು ಪ್ರಾರಂಭಿಸಿ ಈಗ ಅಗ್ರ ಸ್ಥಾನ ಮಡೆದಿದೆ.
ಜುಲೈನಲ್ಲಿ ದೇಶದಲ್ಲಿ ವೈರ್‌ಲೈನ್ ಚಂದಾದಾರರ ಸಂಖ್ಯೆ 2.56 ಕೋಟಿಯಿಂದ ಆಗಸ್ಟ್‌ನಲ್ಲಿ 2.59 ಕೋಟಿಗೆ ಏರಿದೆ. ಕರ್ನಾಟಕದಲ್ಲೇ ಇದು 4 ಲಕ್ಷಕ್ಕೂ ಹೆಚ್ಚು ಜಿಯೋ ಸ್ಥಿರ ದೂರವಾಣಿ ಚಂದಾದಾರರನ್ನು ಹೊಂದಿದೆ.
TRAI ಅಂಕಿಅಂಶಗಳ ಪ್ರಕಾರ, ಜಿಯೋಗೆ 2.62 ಲಕ್ಷ ಹೊಸ ಗ್ರಾಹಕರು ಸೇರ್ಪಡೆಗೊಂಡಿದ್ದಾರೆ.
ಭಾರ್ತಿ ಏರ್‌ಟೆಲ್ 1.19 ಲಕ್ಷವಾದರೆ, ವೊಡಾಫೋನ್ ಐಡಿಯಾ ಮತ್ತು ಟಾಟಾ ಟೆಲಿಸರ್ವಿಸಸ್ ಕ್ರಮವಾಗಿ 4,202 ಮತ್ತು 3,769 ಹೊಸ ಗ್ರಾಹಕರನ್ನು ಪಡೆದೆವೆ .
ರಾಜ್ಯ-ಚಾಲಿತ ಟೆಲಿಕಾಂಗಳು BSNL ಮತ್ತು MTNL ಆಗಸ್ಟ್ ತಿಂಗಳಲ್ಲಿ ಕ್ರಮವಾಗಿ 15,734 ಮತ್ತು 13,395 ವೈರ್‌ಲೈನ್ ಚಂದಾದಾರರನ್ನು ಕಳೆದುಕೊಂಡಿವೆ.
ಆಗಸ್ಟ್‌ನಲ್ಲಿ ರಿಲಯನ್ಸ್ ಜಿಯೋ ನೆಟ್‌ವರ್ಕ್‌ಗೆ 32.81 ಲಕ್ಷ ಹೊಸ ಮೊಬೈಲ್ ಗ್ರಾಹಕರು ಸೇರಿಕೊಂಡಿದ್ದಾರೆ
ಭಾರತೀಯ ಏರ್‌ಟೆಲ್ ಕೇವಲ 3.26 ಲಕ್ಷ ಹೊಸ ಮೊಬೈಲ್ ಗ್ರಾಹಕರನ್ನು ಪಡೆಯುವ ಮೂಲಕ ಈ ರೇಸ್‌ನಲ್ಲಿ ಹಿಂದೆ ನಿಂತಿದೆ .
ಸಾಲದ ಸುಳಿಯಲ್ಲಿ ಸಿಲುಕಿರುವ ವಿಐ ಈ ತಿಂಗಳಲ್ಲಿ 19.58 ಲಕ್ಷ ಮೊಬೈಲ್ ಗ್ರಾಹಕರನ್ನು ಕಳೆದುಕೊಂಡಿದೆ. ಹಾಗೂ BSNL 5.67 ಲಕ್ಷ, MTNL 470 ಮತ್ತು ರಿಲಯನ್ಸ್ ಕಮ್ಯುನಿಕೇಷನ್ಸ್ 32 ಮೊಬೈಲ್ ಗ್ರಾಹಕರನ್ನು ಕಳೆದುಕೊಂಡಿದೆ.








