Satya Nadella: ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದ ಮೈಕ್ರೋಸಾಫ್ಟ್ CEO ಸತ್ಯ ನಾಡೆಲ್ಲಾ
ಮೈಕ್ರೋಸಾಫ್ಟ್ ಚೇರ್ಮನ್ ಮತ್ತು ಸಿಇಒ ಸತ್ಯ ನಾಡೆಲ್ಲಾ ಅವರಿಗೆ ವಿಶಿಷ್ಟ ಸೇವೆಗಾಗಿ ಭಾರತದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ಪ್ರಶಸ್ತಿಯನ್ನ ನೀಡಿ ಗೌರವಿಸಲಾಗಿದೆ.
ಈ ವರ್ಷದ 17 ಪ್ರಶಸ್ತಿ ಪುರಸ್ಕೃತರಲ್ಲಿ ನಾಡೆಲ್ಲಾ ಕೂಡ ಒಬ್ಬರಾಗಿದ್ದರು.
ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ನಾದೆಲ್ಲಾ, “ಪದ್ಮಭೂಷಣ ಪ್ರಶಸ್ತಿಯನ್ನು ಸ್ವೀಕರಿಸುವುದು ಮತ್ತು ಹಲವಾರು ಅಸಾಧಾರಣ ವ್ಯಕ್ತಿಗಳೊಂದಿಗೆ ಗುರುತಿಸಿಕೊಂಡಿರುವುದು ಗೌರವವಾಗಿದೆ. ರಾಷ್ಟ್ರಪತಿ, ಪ್ರಧಾನ ಮಂತ್ರಿ ಮತ್ತು ಭಾರತದ ಜನರಿಗೆ ಕೃತಜ್ಞತೆ ತಿಳಿಸಿದ್ದಾರೆ.
ಸತ್ಯ ನಾಡೆಲ್ಲಾ ಅವರು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಭಾರತದ ಕಾನ್ಸುಲ್ ಜನರಲ್ ಡಾ. ಟಿ.ವಿ.ನಾಗೇಂದ್ರ ಪ್ರಸಾದ್ ಅವರನ್ನು ಭೇಟಿ ಮಾಡಿ ಪ್ರಶಸ್ತಿ ಸ್ವೀಕರಿಸಿದರು.
“ನಾವು ಐತಿಹಾಸಿಕ ಆರ್ಥಿಕ, ಸಾಮಾಜಿಕ ಮತ್ತು ತಾಂತ್ರಿಕ ಬದಲಾವಣೆಯ ಅವಧಿಯಲ್ಲಿ ಜೀವಿಸುತ್ತಿದ್ದೇವೆ” ಎಂದು ಡಾ. ಪ್ರಸಾದ್ ಅವರ ಭೇಟಿಯ ನಂತರ ನಾದೆಲ್ಲಾ ಹೇಳಿದರು.
ಸಭೆಯಲ್ಲಿ ನಾದೆಲ್ಲಾ ಅವರು ಔಪಚಾರಿಕವಾಗಿ ಪದ್ಮಭೂಷಣ ಪ್ರಶಸ್ತಿಯನ್ನು ಸ್ವೀಕರಿಸಿದರು. ನಾದೆಲ್ಲಾ ಜನವರಿ 2023 ರಲ್ಲಿ ಭಾರತಕ್ಕೆ ಭೇಟಿ ನೀಡಲು ಯೋಜಿಸಿದ್ದಾರೆ, ಸುಮಾರು ಮೂರು ವರ್ಷಗಳ ನಂತರ ದೇಶಕ್ಕೆ ಅವರ ಮೊದಲ ಭೇಟಿ.
Satya Nadella: Microsoft CEO Satya Nadella has received the Padma Bhushan award








