Sri Lanka : ಆಹಾರ ನೀಡುತ್ತಿದ್ದ ಮೃತವ್ಯಕ್ತಿಯನ್ನ ಎಬ್ಬಿಸಲು ಮುಂದಾದ ಕೋತಿ…
ನಿಗದಿತವಾಗಿ ಆಹಾರ ನೀಡಿ ಆರೈಕೆ ಮಾಡುತ್ತಿದ್ದ ಮೃತ ವ್ಯಕ್ತಿಯನ್ನ ಎಬ್ಬಿಸಲು ಗ್ರೇ ಲ್ಯಾಂಗೂರ್ (ಕೋತಿ )ಯೊಂದು ಪ್ರಯತ್ನಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕೋತಿ ಹಲವಾರು ನಿಮಿಷಗಳ ಕಾಲ ಮೃತ ವ್ಯಕ್ತಿಯ ದೇಹದ ಬಳಿ ಕುಳಿ ಅವರನ್ನ ಎಬ್ಬಿಸಲು ಪ್ರಯತ್ನಿಸಿದೆ.
ಶ್ರೀಲಂಕಾದ ಬಟ್ಟಿಕೊಲೊವಾ ನಿವಾಸಿ 56 ವರ್ಷದ ಪೀತಾಂಬರಂ ರಾಜನ್ ಅವರು ಅನಾರೋಗ್ಯದಿಂದ ಅಕ್ಟೋಬರ್ 17 ರಂದು ನಿಧನರಾದರು. ಅವರ ಪಾರ್ಥಿವ ಶರೀರವನ್ನ ಸಂಬಂಧಿಕರು ಮತ್ತು ಸ್ನೇಹಿತರಿಗೆ ಅಂತಿಮ ನಮನಕ್ಕೆಂದು ಇರಿಸಿದಾಗ, ಬೂದು ಬಣ್ಣದ ಲಾಂಗೂರ್ ನಡೆದು ಬಂದು ಪೀತಾಂಬರಂ ಅವರ ಪಾರ್ಥಿವ ಶರೀರದ ಪಕ್ಕದಲ್ಲಿ ಕುಳಿತು.
#viralvideo : Monkey seen at the funeral of a person, who is said to have fed it regularly, whenever it visited his residence in #Batticaloa #SriLanka
Primate is seen nudging the ‘companion’ who is lying motionless, to try and see if he would respond, but to no avail 😭💔 pic.twitter.com/5FJ1nzq9H5
— Sidharth.M.P (@sdhrthmp) October 19, 2022
ಸಂಬಂಧಿಕರು ಇದನ್ನ ನೋಡಿ ಗಾಬರಿ ಮತ್ತು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಪೀತಾಂಬರಂ ಕೆಲ ಸಮಯದಿಂದ ಪ್ರಾಣಿಗಳಿಗೆ ಆಹಾರವನ್ನ ನೀಡುತ್ತಿದ್ದರು. ಅವುಗಳೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ.
ಪೀತಾಂಬರಂ ಉಸಿರಾಡುತ್ತಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನ ಲಂಗೂರ್ ಹಲವು ನಿಮಿಷಗಳ ಕಾಲ ಪರೀಕ್ಷಿಸಿದೆ. ಈ ಮನಕಲುಕುವ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
Sri Lanka monkey: A monkey tried to wake up a dead person who was feeding him…








