Good news for law students-ಸರ್ಕಾರದಿಂದ ಬಂಪರ್ ಆಫರ್ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ.
ಕಾನೂನು ಪದವಿ ಪಡೆದವರಿಗೆ ನ್ಯಾಯಾಂಗ ಆಡಳಿತದಲ್ಲಿ ತರಬೇತಿ ನೀಡಲು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ 2022-23ನೇ ಸಾಲಿನಲ್ಲಿ ಅರ್ಹ ಅಭ್ಯರ್ಥಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಈ ಅರ್ಜಿಗೆ ಕಾನೂನು ಪದವಿ ಪಡೆದ ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
1, 2(ಎ), 3(ಎ) ಹಾಗೂ 3(ಬಿ)ಹಾಗೂ ಹಿಂದುಳಿದ ವರ್ಗಗಳ ಪ್ರವರ್ಗಕ್ಕೆ ಸೇರಿದ ಅರ್ಹ ಕಾನೂನು ಪದವಿ ಪಡೆದ ಅಭ್ಯರ್ಥಿಗಳು ತರಬೇತಿಗೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.
2022ರ ಅಕ್ಟೋಬರ್ 31 ಕ್ಕೆ ಈ ಹಿಂದೆ ಆಯ್ಕೆಯಾದ 14 ಅಭ್ಯರ್ಥಿಗಳ ತರಬೇತಿ ಅವಧಿ ಮುಕ್ತಾಯಗೊಳ್ಳಲಿದೆ. ಖಾಲಿ ಇರುವ 14 ಸ್ಥಾನಗಳಿಗೆ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
3 ವರ್ಷ ವಕೀಲ ವೃತ್ತಿ ಕೈಗೊಳ್ಳಲು ನಿಗದಿಪಡಿಸಿದ ಕಾನೂನು ಪದವಿ ಮುಗಿಸಿರಬೇಕು. ತರಬೇತಿ 4 ವರ್ಷ ಅವಧಿಯವರೆಗೆ ನಡೆಯುತ್ತದೆ , ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ತಲಾ 4,000 ರೂ.ಗಳ ತರಬೇತಿ ಭತ್ಯೆ ನಿಗದಿ ಮಾಡಲಾಗಿದೆ.
ಅಕ್ಟೊಬರ್ 31ರ ಅರ್ಜಿ ಸಲ್ಲಿಸಲೂ ಕೊನೆಯ ದಿನಾಂಕವಾಗಿದೆ.
Good news for law students








