Jacqueline Fernandez : ನಟಿ ಜಾಕ್ವೆಲಿನ್ ಗೆ ಜಾಮೀನು ವಿಸ್ತರಿಸಿದ ದೆಹಲಿ ಕೋರ್ಟ್..
ಸುಕೇಶ್ ಚಂದ್ರಶೇಖರ್ 200 ಕೊಟಿ ರುಪಾಯಿ ಅಕ್ರಮ ಹಣ ವರ್ಗಾವನೆ ಪ್ರಕರಣದಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅವರ ಮಧ್ಯಂತರ ಜಾಮೀನನ್ನ ದೆಹಲಿ ನ್ಯಾಯಾಲಯವು ನವೆಂಬರ್ 10 ರವರೆಗೆ ವಿಸ್ತರಿಸಿದೆ.
ಎಲ್ಲಾ ಕಕ್ಷಿದಾರರಿಗೆ ಆರೋಪಪಟ್ಟಿ ಮತ್ತು ಇತರ ಸಂಬಂಧಿತ ದಾಖಲೆಗಳನ್ನ ನೀಡುವಂತೆ ಜಾರಿ ನಿರ್ದೇಶನಾಲಯಕ್ಕೆ (ಇಡಿ) ನ್ಯಾಯಾಲಯ ನಿರ್ದೇಶಿಸಿದೆ. ಜಾಮೀನು ಮತ್ತು ಇತರ ಬಾಕಿ ಇರುವ ಅರ್ಜಿಗಳ ವಿಚಾರಣೆಯನ್ನು ನವೆಂಬರ್ 10 ರಂದು ನಿಗದಿಪಡಿಸಲಾಗಿದೆ.
ಜಾರಿ ನಿರ್ದೇಶನಾಲಯ ಆಗಸ್ಟ್ 17 ರಂದು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನಟಿಯನ್ನ ಆರೋಪಿ ಎಂದು ಹೆಸರಿಸಿ ಆರೋಪಪಟ್ಟಿ ಸಲ್ಲಿಸಿದೆ.
ರಾ…ರಾ ರಕ್ಕಮ್ಮ ಖ್ಯಾತಿಯ ಜಾಕ್ವೆಲಿನ್ ಗೆ ಸುಕೇಶ್ ಚಂದ್ರಶೇಖರ್ 7 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಆಭರಣಗಳನ್ನು ಉಡುಗೊರೆಯಾಗಿ ನೀಡಿದ್ದ ಎನ್ನಲಾಗಿದೆ. ಇದಲ್ಲದೇ ನಟಿ ಮತ್ತು ಅವರ ಕುಟುಂಬ ಸದಸ್ಯರಿಗೆ ಹಲವಾರು ದುಬಾರಿ ಕಾರುಗಳು, ದುಬಾರಿ ಬ್ಯಾಗ್‌ಗಳು, ಬಟ್ಟೆಗಳು, ಬೂಟುಗಳು ಮತ್ತು ದುಬಾರಿ ವಾಚ್‌ಗಳನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ವರದಿಯಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್‌ನಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನು ದೆಹಲಿ ಪೊಲೀಸ್ ರ ಆರ್ಥಿಕ ಅಪರಾಧ ವಿಭಾಗವು ಎಂಟು ಗಂಟೆಗಳ ಕಾಲ ವಿಚಾರಣೆ ನಡೆಸಿತ್ತು.
ವಿಚಾರಣೆಯ ಸಮಯದಲ್ಲಿ, ಜಾಕ್ವೆಲಿನ್ ಚಂದ್ರಶೇಖರ್ ಅವರೊಂದಿಗೆ ಆರು ತಿಂಗಳ ಕಾಲ ಸಂಬಂಧ ಹೊಂದಿರುವುದಾಗಿ ಒಪ್ಪಿಕೊಂಡರು ಆದರೆ ಆತನ ಅಕ್ರಮ ಚಟುವಟಿಕೆಗಳ ಬಗ್ಗೆ ತನಗೆ ತಿಳಿದಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.
Court extends Jacqueline Fernandez’s interim bail till November 10 in Rs 200 crore extortion case








