ಅಮೆರಿಕದ ಉಪಾಧ್ಯಕ್ಷೆ ನಿವಾಸದಲ್ಲಿ ದೀಪಾವಳಿ ಆಚರಣೆ….
ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ಅಧಿಕೃತ ನಿವಾಸದಲ್ಲಿ ಶುಕ್ರವಾರ ದೀಪಾವಳಿ ಆಚರಣೆಯನ್ನು ಅದ್ಧೂರಿಯಾಗಿ ನಡೆಸಲಾಯಿತು. ಈ ಆಚರಣೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಅಮೆರಿಕನ್ನರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಣ್ಣಿನ ದೀಪಗಳನ್ನ ಹಚ್ಚಿ ಸಂಭ್ರಮಿಸಲಾಯಿತು. ರುಚಿಕರ ಸಾಂಪ್ರದಾಯಿಕ ಖಾದ್ಯಗಳೊಂದಿಗೆ ಔತಣವನ್ನು ಏರ್ಪಡಿಸಲಾಯಿತು.
ಕಮಲಾ ಹ್ಯಾರಿಸ್ ಅವರ ಅಧಿಕೃತ ನಿವಾಸವಾದ ನೇವಲ್ ಅಬ್ಸರ್ವೇಟರಿಯಲ್ಲಿ ನಡೆದ ಈ ಆಚರಣೆಗಳಲ್ಲಿ 100 ಕ್ಕೂ ಹೆಚ್ಚು ಭಾರತೀಯ ಅಮೆರಿಕನ್ನರು ಭಾಗವಹಿಸಿದ್ದರು. ಕಮಲಾ ಮಾತನಾಡಿ, ದೀಪಾವಳಿಯು ಸಂಸ್ಕೃತಿಗಳ ಎಲ್ಲೆಗಳನ್ನು ಮೀರಿದ ಸಾರ್ವತ್ರಿಕ ಪರಿಕಲ್ಪನೆಯಾಗಿದೆ. ಕತ್ತಲೆಯ ಮೇಲೆ ಬೆಳಕಿನ ಪ್ರಭಾವದಿಂದ ಸ್ಫೂರ್ತಿ ಪಡೆಯುವುದೇ ಹಬ್ಬ ಎಂದು ವಿವರಿಸಿದರು.
ದೀಪಾವಳಿಯು ಸಂಸ್ಕೃತಿ ಮತ್ತು ಸಂಪ್ರದಾಯದ ಹಬ್ಬವಾಗಿದೆ. ಸಂಸ್ಕೃತಿ, ಜನಾಂಗಗಳ ಎಲ್ಲೆಗಳನ್ನು ದಾಟಿದ ಅತ್ಯಂತ ಪ್ರಾಚೀನ ವಿಷಯವಾಗಿದೆ ಎಂದರು. ನಮ್ಮ ಜೀವನವು ದ್ವಂದ್ವಗಳಿಂದ ಕೂಡಿದೆ ಮತ್ತು ಈ ಹಬ್ಬವು ಕತ್ತಲೆ ಮತ್ತು ಬೆಳಕಿನ ನಡುವಿನ ಸಮತೋಲನವನ್ನು ಸಾಧಿಸುತ್ತದೆ ಎಂದು ಹೇಳಿದರು.
ಕಳೆದ ಕೆಲವು ವರ್ಷಗಳಿಂದ ಪ್ರಬಲ ಶಕ್ತಿಗಳು ಕೆಲವು ಘರ್ಷಣೆಗಳನ್ನು ಕೇಂದ್ರೀಕರಿಸಲು ಪ್ರಯತ್ನಿಸುತ್ತಿವೆ ಮತ್ತು ನಮ್ಮನ್ನು ವಿಭಜಿಸಲು ಪ್ರಯತ್ನಿಸುತ್ತಿವೆ ಎಂದು ಅವರು ಹೇಳಿದರು. ಆದರೆ ನಮ್ಮನ್ನು ವಿಭಜಿಸುವುದಕ್ಕಿಂತ ನಮ್ಮನ್ನು ಒಂದುಗೂಡಿಸುವ ಹೆಚ್ಚಿನ ವಿಷಯಗಳಿವೆ ಎಂದು ನಮ್ಮಲ್ಲಿ ಹೆಚ್ಚಿನವರಿಗೆ ತಿಳಿದಿದೆ ಕಮಲಾ ಹ್ಯಾರಿಸ್ ಹೇಳಿದರು..
Kamala Harris: Diwali celebration at US Vice President’s residence…