ಬಾಗಲಕೋಟೆ : ರಾಜ್ಯದಲ್ಲಿ ಸದ್ಯಕ್ಕೆ ಗ್ರಾಮ ಪಂಚಾಯಿತಿ ಚುನಾವಣೆ ನಡೆಯಲ್ಲ. ಗ್ರಾಮ ಪಂಚಾಯಿತಿ ಚುನಾವಣೆ ಮಾಡುವ ಸ್ಥಿತಿಯೊಳಗೆ ವಾತಾವರಣ ನಮ್ಮ ಫೆವರನಲ್ಲಿ ಇಲ್ಲ. ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದ್ದಾರೆ.
ಇಂದು ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೋವಿಂದ ಕಾರಜೋಳ, ಕೊರೊನಾದಿಂದ ದಿನನಿತ್ಯ ತೊಂದರೆ ಆಗಿದೆ. ಹಾಗಾಗಿ ಜನಸಂದಣಿ ಆಗಬಾರದು ಅಂತ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಚುನಾವಣೆ ಆಯೋಗ ಮುಂದೂಡಿದೆ. ಕೊರೊನಾ ಹಾವಳಿ ಕಡಿಮೆ ಆದ ಮೇಲೆ ಚುನಾವಣೆ ಮಾಡಲು ಸರ್ಕಾರ ಸಿದ್ದವಿದೆ.
ಇದೆ ವೇಳೆ ಬಿಜೆಪಿ ಪಕ್ಷದಿಂದ ರಾಜ್ಯದ ಜನರಿಗೆ ಭವಿಷ್ಯವಿಲ್ಲ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ದೇಶದ 130 ಕೋಟಿ ಜನ ಸಾಬೀತು ಮಾಡಿದ್ದಾರೆ. ಯಾವ ಪಕ್ಷಕ್ಕೆ ಭವಿಷ್ಯವಿದೆ, ಯಾವುದಕ್ಕೆ ಇಲ್ಲ ಅಂತ. ಬಿಜೆಪಿ ಪಕ್ಷ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದಿದೆ. ಇತಿಹಾಸದಲ್ಲೇ ಈ ರೀತಿ ಆಗಿಲ್ಲ. ಸಿದ್ದರಾಮಯ್ಯ ಹಗಲು ಗನಸು ಕಾಣುತ್ತಿದ್ದಾರೆ. ಕಾಂಗ್ರೆಸ್ ಇನ್ನು ಮುಂದೆ ಮೇಲೆ ಏಳೋಕೆ ಸಾಧ್ಯವಿಲ್ಲ ಅಂತಾ ತಿರುಗೇಟು ನೀಡಿದರು. ಸದ್ಯ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸುವ ನಾಯಕರಿಲ್ಲ. ಸೋನಿಯಾ ಗಾಂಧಿ ಅಧ್ಯಕ್ಷರಾಗಲು ಹಿಂದೆ ಸರಿದರು. ರಾಹುಲ್ ಗಾಂಧಿ ಮೂರು ತಿಂಗಳು ಗಾಯಬ್ ಆಗಿ ಬಿಟ್ಟಿದರು. ಯಾರಿದ್ದಾರೆ ಮುನ್ನಡೆಸುವವರು ಯಾರೂ ಇಲ್ಲ ಎಂದು ಕಾಂಗ್ರೆಸ್ ನಾಯಕತ್ವವನ್ನು ವ್ಯಂಗ್ಯ ಮಾಡಿದರು. ನೂರು ವರ್ಷ ದಾಟಿದ ಮೇಲೆ ಆಯುಷ್ಯವೇ ಮುಗಿದ ಹಾಗೆ. ಸ್ವಾತಂತ್ರ್ಯ ನಂತರ ಪಕ್ಷ ವಿಸರ್ಜನೆ ಮಾಡಬೇಕು ಅಂತಾ ಮಹಾತ್ಮ ಗಾಂಧಿಯವರು ಮೊದಲೆ ಹೇಳಿದರು. ಇಲ್ಲದಿದ್ದರೆ ಮುಂದೆ ಕಳ್ಳರು ಕಾಕರು ಸೇರಿಕೊಂಡು ಹೆಸರು ಕೆಡಿಸಬಾರದೆಂದಿದ್ದರು. ಈ ಬಗ್ಗೆ ಪತ್ರಿಕೆಯಲ್ಲಿ ಮಹಾತ್ಮಾ ಗಾಂಧೀಜಿಯವರು ಸಂಪಾದಕೀಯ ಬರೆದಿದ್ದರು ಅಂತಾ ಹೇಳಿದರು.
ಪಾಂಡವಪುರ ಸಕ್ಕರೆ ಕಾರ್ಖಾನೆ ಮುರುಗೇಶ್ ನಿರಾಣಿ ಲೀಸ್ ಗೆ ಪಡೆದ ವಿಚಾರವಾಗಿ ಮಾತನಾಡಿದ ಅವರು, ನನಗೆ ಯಾವುದೇ ಉದ್ಯೋಗ, ಉದ್ಯಮ ಬಗ್ಗೆ ಗೊತ್ತಿಲ್ಲ. “ತೊಗಲಾಗಿನ ಬಲ್ಲ ತಿಮ್ಮಣ್ಣ” ಅಂತಾರಲ್ಲ ಹಳ್ಳಿಯಲ್ಲಿ ಹಾಗೆ ನನಗೆ ಉದ್ಯೋಗದ ಬಗ್ಗೆ ಏನು ಗೊತ್ತಿಲ್ಲ. ಅವರ ವ್ಯಾಪಾರ ಉದ್ಯೋಗದ ಬಗ್ಗೆ ನನಗೇನೂ ಗೊತ್ತಿಲ್ಲ ಎಂದು ಹಾರಿಕೆ ಉತ್ತರ ನೀಡಿದರು.
ರಾಜ್ಯಸಭೆಗೆ ದೇವೇಗೌಡರಿಗೆ ಬಿಜೆಪಿ ಬೆಂಬಲದ ವಿಚಾರವಾಗಿ, ಮುಂದ ಹ್ಯಾಂಗ ಆಗ್ತದ ಹಾಗ ಮಾಡುತ್ತೇವೆ. ಪಕ್ಷದಲ್ಲಿ ಇನ್ನೂ ಆ ವಿಷಯ ಚರ್ಚೆಗೆ ಬಂದಿಲ್ಲ. ಬಿಜೆಪಿಯಲ್ಲಿ ಸಾಮಾಜಿಕ ನ್ಯಾಯ ಇದೆ. ಇವತ್ತು ಒಬ್ಬ ಕ್ಷೌರಿಕ ಸಮಾಜದ, ಹಿಂದುಳಿದ ರಾಯಚೂರನ ಯಾವುದೋ ಒಂದು ಹಳ್ಳಿಯಲ್ಲಿ ಹುಟ್ಟಿದ ವ್ಯಕ್ತಿ ರಾಜ್ಯಸಭೆಗೆ ಹೋಗುತ್ತಿದ್ದಾರೆ. ಇದು ಸಾಮಾಜಿಕ ನ್ಯಾಯ. ಸಿಎಂ ಆಯ್ಕೆಯಲ್ಲೂ ಸಾಮಾಜಿಕ ನ್ಯಾಯ ಆಗಿದೆಯಲ್ಲ. ಉಮಾ ಭಾರತಿ ಯಾರು…? ದೇಶದಲ್ಲಿ ಎಲ್ಲೆಲ್ಲಿ ಅವಕಾಶ ಬರುತ್ತೆ. ಅಲ್ಲೆಲ್ಲ ಆಗುತ್ತೆ. ಇದೇ ಸಂಪ್ರದಾಯ ರಾಜ್ಯದ ಮುಂಬರುವ ಎಂಎಲ್ಸಿ ಚುನಾವಣೆಗೆ ಅಭ್ಯರ್ಥಿಗಳ ವಿಚಾರದಲ್ಲಿ ಆಗಬಹುದು ಅಂತಾ ಹೇಳಿ ಈ ಮೂಲಕ ಎಂಎಲ್ಸಿ ಅಭ್ಯರ್ಥಿಗಳ ಆಯ್ಕೆಯಲ್ಲೂ ಅಚ್ಚರಿ ಬೆಳವಣಿಗೆ ಎನ್ನುವ ಸುಳಿವು ನೀಡಿದರು.
ಇನ್ನು ಇದರಲ್ಲಿ ಯಡಿಯೂರಪ್ಪ ಅವರಿಗೆ ಯಾವುದೇ ಅಸಮಾಧಾನವಿಲ್ಲ. ಕೇಂದ್ರದವರು ಗುರುತಿಸಿದವರನ್ನು ಗುರುತಿಸಲು ನಾವು ವಿಫಲವಾಗಿಲ್ಲ. ಯಡಿಯೂರಪ್ಪ ಅವರನ್ನು ಪರಿಗಣನೆಗೆ ತೆಗೆದುಳ್ಳಲಾಗಿದೆ. ಅವರ ಗಮನಕ್ಕೆ ತಂದು ಆಯ್ಕೆ ಮಾಡಲಾಗಿದೆ ಅಂತಾ ಸಮರ್ಥಿಸಿಕೊಂಡರು. ಬಿಜೆಪಿಯಲ್ಲಿ ರಾಜ್ಯದಲ್ಲಿ ಸಾಮಾಜಿಕ ನ್ಯಾಯದ ಪ್ರಕಾರ ಸಿಎಂ ವಿಚಾರ, ಸಾಮಾಜಿಕ ನ್ಯಾಯದ ಪ್ರಕಾರವೆ ಉಮಾಭಾರತಿ ಸಿಎಂ ಆಗಿದ್ದರು. ರಾಜ್ಯದಲ್ಲಿ ಆಗಬೇಕು ಅಂತಲ್ಲ. ದೇಶದಲ್ಲಿ ಆದರೆ ಆಯ್ತಲ್ಲ ಅಂತಾ ಹೇಳಿದ್ರು.
ಇನ್ನೂ ದಲಿತ ಪದ ಬಳಕೆ ವಿಚಾರದ ಬಗ್ಗೆ ಮಾತನಾಡಿದ ಅವರು, ಕೆಲವರು ಈ ಬಗ್ಗೆ ನನ್ನ ಟೀಕೆ ಮಾಡಿದರು. ಅದನ್ನು ನಾನು ಮಾಡಿಲ್ಲ ದಲಿತ ಪದ ಬಳಕೆ ಸಂವಿಧಾನದಲ್ಲಿ ಇಲ್ಲ ಅಂತ ಕೇಂದ್ರ ಸರಕಾರ ಆದೇಶ ಹೊರಡಿಸಿದೆ. ಸಂವಿಧಾನದಲ್ಲಿ ಎಸ್ ಸಿ ಎಸ್ ಟಿ ಅಂತ ಇದೆ. ಅದಕ್ಕಾಗಿ ನಾವು ಆದೇಶದ ಪ್ರತಿಯನ್ನು ಮಾತ್ರ ಜಾತಿ ಮಾಡಿದ್ದೇವೆ. ಇದಕ್ಕೆ ಯಾರಾದರೂ ಪಾಂಡಿತ್ಯ ಹೊಂದಿದವರು ಪರ್ಯಾಯ ಶಬ್ದ ಹೇಳಿದರೆ ವಿಚಾರಿಸುತ್ತೇವೆ ಎಂದು ಹೇಳಿದರು.