virat kohli – ಟೀಕಾಕಾರರಿಗೆ ವಿರಾಟ್ ಚಪ್ಪಲಿ ಏಟು..!
5.3 ಓವರ್ ಗಳಿಗೆ 31 – 4 ವಿಕೆಟ್ಸ್.. 10 ಓವರ್ ಗಳಿಗೆ ಕನಿಷ್ಟ 50 ರನ್ ಗಳ ಕೂಡ ಇರಲ್ಲಿಲ್ಲ.. 160 ರನ್ ಗುರಿ.. ಪಾಕಿಸ್ತಾನ್ ಮೇಲೆ ಭಾರತ ತಂಡ ಗೆಲುವು ಸಾಧಿಸುತ್ತದೆ ಎಂದು ಸ್ಟೇಡಿಯಂನಲ್ಲಿದ್ದ ಜನರೇ ಅಲ್ಲ, ವಿಶ್ವದಾದ್ಯಂತ ಇದ್ದ ಅಭಿಮಾನಿಗಳು.. ಭಾರತೀಯರು ಕೂಡ ನಂಬಿರಲಿಲ್ಲ.. ಆದ್ರೆ ಒಬ್ಬೇ ಒಬ್ಬ ಮಾತ್ರ ಅಸಾಧ್ಯವನ್ನ ಸುಸಾಧ್ಯಗೊಳಿಸಿದ.. ಸೋಲುತ್ತಿದ್ದ ಪಂದ್ಯವನ್ನು ಗೆಲ್ಲಿಸಿಕೊಟ್ಟ.. ಆತನೇ ವಿರಾಟ್ ಕೊಹ್ಲಿ..
ಕೇವಲ 53 ಎಸೆತಗಳಲ್ಲಿ 82 ರನ್ ಗಳಿಸಿ ಕರೆಕ್ಟ್ ಟೈಂ ನಲ್ಲಿ ಗೇರ್ ಚೇಂಜ್ ಮಾಡಿ ಭಾರತ ತಂಡಕ್ಕೆ ಒಂದು ಅದ್ಭುತ, ಅಪರೂಪದ ಗೆಲುವುವನ್ನು ತಂದುಕೊಟ್ಟಿದ್ದಾರೆ.
8 ಎಸೆತಗಳಿಗೆ 28 ರನ್ ಬೇಕಿದ್ದ ಸಂದರ್ಭದಲ್ಲಿ ಅಸಲಿಗೆ ಭಾರತ ಗೆಲ್ಲುತ್ತದೆ ಎಂದು ಯಾರೂ ಊಹೆ ಮಾಡಿರಲಿಲ್ಲ.
ಆದ್ರೆ ಎರಡು ಸಿಕ್ಸರ್ ಗಳನ್ನು ಬಾರಿಸಿ ಗುರಿಯನ್ನ ಆರು ಎಸೆತಗಳಿಗೆ 16 ರನ್ ಗೆ ತಗ್ಗಿಸಿದ್ದು ವಿರಾಟ್ ಕೊಹ್ಲಿ. ಕೊಹ್ಲಿಗೆ ಆಲ್ ರೌಂಡರ ಹಾರ್ದಿಕ್ ಪಾಂಡ್ಯ ಉತ್ತಮ ಸಾಥ್ ನೀಡಿದರು.
ಈ ಒಂದು ಇನ್ನಿಂಗ್ಸ್.. ಭಾರತ ಕ್ರಿಕೆಟ್ ನಲ್ಲಿ ಎಷ್ಟು ಅವಿಸ್ಮರಣೀಯವೋ ಅದೇ ರೀತಿ ವಿರಾಟ್ ರನ್ನು ಟೀಕಿಸಿದವರು ಕೂಡ ಎಂದೂ ಮರೆಯುವುದಿಲ್ಲ.
ಹೌದು..! ವಿಶ್ವಕಪ್ ಗೂ ಮುನ್ನಾ ವಿರಾಟ್ ಕೊಹ್ಲಿಯನ್ನ ಟೀಕೆ ಮಾಡಬೇಕು ಅಂತಲೇ ಕೆಲವರು ಕಂಕಣ ಕಟ್ಟಿಕೊಂಡಿದ್ದರು.
ಫಾರ್ಮ್ ವಿಚಾರವಾಗಿ ಕೊಹ್ಲಿಯನ್ನ ಕುಟುಕಿದ್ದ ಮಾಜಿ ಕ್ರಿಕೆಟಿಗರು ಏಷ್ಯಾ ಕಪ್ ನಲ್ಲಿ ಸೆಂಚೂರಿ ಸಿಡಿಸಿದ್ರೂ ಅದು ಆಫ್ಘಾನ್ ವಿರುದ್ಧ ಎಂದು ಮೂಗು ಮುರಿದ್ದರು.
ಈ ಎಲ್ಲಾ ಟೀಕೆಗಳಿಗೆ ವಿರಾಟ್ ಕೊಹ್ಲಿ ತಮ್ಮ ಇನ್ನಿಂಗ್ಸ್ ನೊಂದಿಗೆ ಉತ್ತರ ನೀಡಿದ್ದಾರೆ. ಫಾರ್ಮ್ ತಾತ್ಕಾಲಿಕ, ಕ್ಲಾಸ್ ಶಾಶ್ವತ ಎಂದು ಸಾರಿ ಹೇಳಿದ್ದಾರೆ.
ಪಾಕ್ ವಿರುದ್ಧದ ಗೆಲುವು ಕೇವಲ ಗೆಲುವಾಗಿರಲಿಲ್ಲ. ಅದು ಸೇಡಿನ ಸಮರವೂ ಆಗಿತ್ತು. ಒಂದು ವೇಳೆ ಪಾಕ್ ವಿರುದ್ಧದ ಪಂದ್ಯದಲ್ಲಿ ಭಾರತ ಸೋತಿದ್ದರೇ ಇಂದು ದೇಶದಲ್ಲಿ ದೀಪಾವಳಿ ಸಂಭ್ರಮ ಮಂಕಾಗಿರುತ್ತಿತ್ತು.
ಆದ್ರೆ ದೀಪಾವಳಿ ಸಂಭ್ರಮವನ್ನು ಉಳಿಸಿದ್ದು, ಡಬಲ್ ಮಾಡಿದ್ದು ಒನ್ ಅಂಡ್ ಓನ್ಲಿ ವಿರಾಟ್ ಕೊಹ್ಲಿ..
ನಿಜ ಪಾಕ್ ವಿರುದ್ಧದ ವಿರಾಟ್ ಕೊಹ್ಲಿ ಇನ್ನಿಂಗ್ಸ್ ನಃ ಭೂತೋ ನಃ ಭವಿಷ್ಯತಿ.. ಇಂತಹ ಅದ್ಭುತ ಇನ್ನಿಂಗ್ಸ್ ಅನ್ನು ಇಲ್ಲಿಯವರೆಗೂ ಯಾರೂ ನೋಡಿರಲು ಸಾಧ್ಯವೇ ಇಲ್ಲ.
ಯಾಕಂದರೆ ವಿರಾಟ್ ಇನ್ನಿಂಗ್ಸ್ Never before ever after. ಇದೇ ಕಾರಣಕ್ಕೆ ವಿರಾಟ್ ಕೊಹ್ಲಿ ಇಂದು ಇಡೀ ಕ್ರಿಕೆಟ್ ಜಗತ್ತು ಸಲಾಂ ಎನ್ನುತ್ತಿದೆ.
ಅಂದಹಾಗೆ ಇದು ಇಲ್ಲಿಗೆ ಮುಕ್ತಾಯವಲ್ಲ, ಇದಿನ್ನೂ ಮೊದಲ ಅಧ್ಯಾಯ.. ಅಸಲಿಯಾಟ ಮುಂದಿದೆ…